ಸ್ಥಗಿತಗೊಂಡ ಸರಕಾರಿ ಡಯಲಿಸಿಸ್ ಘಟಕ‌ ಪ್ರಾರಂಭಕ್ಕೆ ಎಸ್.ಡಿ.ಪಿ.ಐ ಆಗ್ರಹ

0
42

ಕಲಬುರಗಿ: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿನ ಖಾಸಗಿ ಡಯಲಿಸಿಸ್ ಘಟಕಕ್ಕೆ ಸರಕಾರ ಹಣ ಬಿಡುಗಡೆ ಮಾಡದಿರುವುದರಿಂದ 5 ದಿನಗಳಿಂದ ಡಯಲಿಸಿಸ್ ಪರೀಕ್ಷೆ ಕೇಂದ್ರ ಸ್ಥಗಿತಗೊಂಡಿರುವುದನ್ನು ಮತ್ತೆ ಪ್ರಾರಂಭಿಸಬೇಕೆಂದು ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಜಿಮ್ಸ್ ಆಸ್ಪತ್ರೆಯ ನಿರ್ದೇಶಕರಿಗೆ ಭೇಟಿ ನೀಡಿ ಮನವಿ ಸಲ್ಲಿಸಿ ಆಗ್ರಹಿಸಿದೆ.

ಮನವಿ ಪತ್ರ ಸಲ್ಲಿಸಿ ಮಾತನಾಡಿದ ಪಕ್ಷದ ಜಿಲ್ಲಾ ಮುಖಂಡರಾದ ಮೊಹಮ್ಮದ್ ಮೋಹಸಿನ್ ಕೊರೊನಾ ಮಹಾಮಾರಿಗೆ ಜನರು ತತ್ತರಿಸಿ ಕಂಗಾಲಾಗಿದ್ದಾರೆ. ಸ್ಥಗಿತಗೊಂಡ ಡಯಲಿಸಿಸ್ ಪರೀಕ್ಷಾ ಕೇಂದ್ರದಲ್ಲಿ ನೂರಾರು ಜನರು ಪರೀಕ್ಷೆ ಮಾಡಿಕೊಳ್ಳುತ್ತಿದರು. ಏಕಾಏಕಿ ಕೇಂದ್ರ ಪರೀಕ್ಷೆ ನಡೆಸುವುದನ್ನು ನಿಲ್ಕಿಸಿರುವುದರಿಂದ ನೂರಾರುಮಂದಿ ಪರದಾಡುವಂತದಾಗಿದೆ.

Contact Your\'s Advertisement; 9902492681

ಬೆರೆ ಖಾಸಗಿ ಡಯಲಿಸಿಸ್ ಕೇಂದ್ರಗಳಲ್ಲಿ ಪರೀಕ್ಷೆಗೆ ಬಡವರು ಸಾವಿರಾರು ರೂ. ಹಣ ನೀಡುವ ಸ್ಥತಿ ನಿರ್ಮಾಣವಾಗಿದ್ದು, ಕೋವಿಡ್ ಲಾಕ್ ಡೌನ್ ವೇಳೆ ಸರಕಾರ ಈ ಧೋರಣೆ ಖಂಡನೀವಾಗಿದೆ.

ತಕ್ಷಣ ಸರಕಾರಿ ಆಸ್ಪತ್ರೆಯ ಡಯಲಿಸಿಸ್ ಕೇಂದ್ರ ಆರಂಭಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here