ಶಹಾಬಾದ: ಬಾನಂಗಳಲ್ಲಿ ಸೂರ್ಯನ ಸುತ್ತ ಬೆಳಕಿನ ಉಂಗುರ

0
207

ಶಹಾಬಾದ: ತಾಲೂಕಿನ ಬಾನಂಗಳದಲ್ಲಿ ಬುಧವಾರ ಬೆಳಗ್ಗೆ ವಿಸ್ಮಯವೊಂದು ಕಾದಿತ್ತು. ಸೂರ್ಯನ ಸುತ್ತಾ ಒಂದು ಬೆಳಕಿನ ವೃತ್ತ ಮೂಡಿತ್ತು.ಈ ಚೆಲುವಿನ ನಿಸರ್ಗ ಚಿತ್ತಾರ ನೋಡಲು ಜನರು ಮನೆಯ ಹೊರಗಡೆ ಬಂದು ಜನರು ಆಗಸದ ಕಡೆಗೆ ತಲೆ ಎತ್ತಿ ನೋಡುವ ಪರಿ ದಾರಿ ಹೋಕರಿಗೆ ಆಶ್ಚರ್ಯ ತಂದಿತು.ದಾರಿ ಹೋಗುವ ಜನರು ಆಗಸದ ಕಡೆಗೆ ಮುಖ ಮಾಡಿ ನಿಸರ್ಗದಲ್ಲಿ ಉಂಟಾದ ವರ್ಣರಂಜಿತ ವಿಸ್ಮಯವನ್ನು ಸವಿದರು. ಜನರು ಈ ವಿಸ್ಮಯಕಾರಿ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಹಿಡಿದು ಸಂತಸಪಟ್ಟರು.

ಅಲ್ಲದೇ ತಮ್ಮ ಗೆಳೆಯರಿಗೆ ಹಾಗೂ ಕುಟುಂಬ ಸದಸ್ಯರಿಗೆ ಕರೆ ಮಾಡಿ ಹೊರಗಡೆ ಬಂದು ಬಾನಂಗಳಲ್ಲಿ ಒಂದು ಬಾರಿ ನೋಡಿ. ಮತ್ತೆ ಈ ದೃಶ್ಯ ಸಿಗುವುದಿಲ್ಲ ಎಂದು ತಿಳಿಸಿದರು. ಸೂರ್ಯನ ಸುತ್ತಾ ಮೂಡಿದ ಈ ವರ್ಣ ರಂಜಿತ ವೃತ್ತವನ್ನು ಕಂಡ ಜನರು ಬಗೆಬಗೆಯ ವ್ಯಾಖ್ಯಾನ ಮಾಡಲು ಶುರುಮಾಡಿದ್ರು. ಕೆಲವರು ಇದು ಕಾಮನಬಿಲ್ಲು ಇದೆ. ಇನ್ನು ಕೆಲವರು ಕೆಲವರು ಇದು ಗ್ರಹಣದ ಎಫೆಕ್ಟ್ ಎಂದರೆ, ಮತ್ತೆ ಕೆಲವರು ಇದು ಮಳೆ ಬರುವ ಸಂಕೇತ ಎಂದು ವಿಶ್ಲೇಷಿಸಿದರು. ಅಸಲಿಗೆ ಈ ವಿಸ್ಮಯಕ್ಕೆ ಬೇರೆಯದೇ ಕಾರಣ ಇದೆ.

Contact Your\'s Advertisement; 9902492681
ಶಹಾಬಾದ: ತಾಲೂಕಿನಲ್ಲಿ ಬಾನಂಗಳಲ್ಲಿ ಸೂರ್ಯನ ಸುತ್ತ ಬೆಳಕಿನ ಉಂಗುರ.

ಈ ಉಂಗುರವನ್ನು ’ಹ್ಯಾಲೋ ರಿಂಗ್’ ಎಂದು ಕರೆಯುತ್ತಾರೆ. ಹೆಚ್ಚಾಗಿ ಇದು ಮಳೆಗಾಲ ಮುಗಿಯುವ ಸಂದರ್ಭ ಅಥವಾ ಮಳೆಗಾಲದ ಆರಂಭದಲ್ಲಿ ಮೂಡುತ್ತದೆ. ಮಳೆಹನಿಯ ಕಣಗಳನ್ನು ಮೋಡಗಳು ತುಂಬಿಕೊಂಡಾಗ ಸಂಭವಿಸುವ ವೈಜ್ಞಾನಿಕ ವಿದ್ಯಮಾನವಿದು. ಸೂರ್ಯನ ಕಿರಣಗಳು ಆ ಮಳೆ ಹನಿಯ ಕ್ರಿಸ್ಟಲ್ ಕಣಗಳ ಮೇಲೆ ಬಿದ್ದು, ವಕ್ರೀಭವನ ಉಂಟಾಗಿ ಇಂಥ ವಿಸ್ಮಯಕಾರಿ ಉಂಗುರ ಸೃಷ್ಟಿಯಾಗುತ್ತದೆ. ಇದನ್ನು ೨೨ ಡಿಗ್ರಿ ಹ್ಯಾಲೋಸ್ ಎಂದು ಕರೆಯುತ್ತಾರೆ. ಇದಕ್ಕೆ ಸೂರ್ಯ ಕೊಡೆ ಎಂದೂ ಕರೆಯುತ್ತಾರೆ.

ಇಂಗ್ಲಿ?ನಲ್ಲಿ ’ಡಿಫ್ರ್ಯಾಕ್ಷನ್ ಹ್ಯಾಲೋ’ ಎನ್ನುತ್ತಾರೆ. ಮಳೆ ಬರುವ ಸೂಚನೆಯಿದು ಎಂದು ವಿಶ್ಲೇಷಿಸುತ್ತಾರೆ. ಭೂ ಮಟ್ಟದಿಂದ ಸುಮಾರು ೬ ಅಥವಾ ೭ ಕಿ.ಮೀ. ಎತ್ತರದಲ್ಲಿ ಹಿಮದ ಹರಳುಗಳು ಸೃಷ್ಟಿ ಆಗುತ್ತವೆ. ಸೂರ್ಯನ ಬೆಳಕು ಈ ಹರಳುಗಳ ಮೂಲಕ ಹಾದು ಬರುವಾಗ ಬೆಳಕಿನ ಪ್ರತಿಫಲನದಿಂದ ನಮಗೆ ಈ ಅದ್ಭುತ ವೃತ್ತ ಕಾಣಿಸುತ್ತದೆ. ಇದೊಂದು ಪ್ರಕೃತಿಯ ಸುಂದರ ವಿದ್ಯಮಾನ ಎಂದು ಈ ಕುರಿತು ಕಲಬುರಗಿ ವಿಜ್ಞಾನ ಕೇಂದ್ರದ ಅಧಿಕಾರಿ ಲಕ್ಷ್ಮಿ ನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ತಿಳಿ ಆಗಸದಲ್ಲಿ ಸೂರ್ಯನ ಸುತ್ತ ಬೆಳಗ್ಗೆ ೧೨ ರ ಸುಮಾರಿಗೆ ಸಂಪೂರ್ಣ ಕಾಮನಬಿಲ್ಲು ಗೋಚರಿಸಿತು. ಸೌರ ಪ್ರಭೆ ಎಂದು ಗುರುತಿಸಲಾದ ಇದು ನಮ್ಮ ವಾತಾವರಣದಲ್ಲಿ ೨೦,೦೦೦ ಅಡಿಗಳ ಮೇಲಿರುವ ಉಂಗುರಾಕಾರದ ಸಿರ್ರ‍ಸ್ ಮೋಡಗಳೊಳಗೆ ಇರುವ ಮಂಜುಗಡ್ಡೆಯ ಹರಳುಗಳು ಸೂರ್ಯನ ಬೆಳಕಿನ ಕಿರಣಗಳನ್ನು ವಕ್ರೀಭವಿಸುವುದರಿಂದ ಆಗುವ ವಿದ್ಯಮಾನ ಎಂದು ಲಕ್ಷ್ಮಿ ನಾರಾಯಣ ಅವರು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here