ಮನೆಗೊಂದು ಮರ, ಮನಸ್ಸಿಗೊಂದು ನೆಮ್ಮದಿ: ಸೋಪಿಸಾಬ್

0
26

ಬೆಂಗಳೂರು: ಗಿಡ ನೆಟ್ಟು ಧರೆಯ ಗಟ್ಟಿತನವನ್ನು ಸಾರೋಣ ವಿಶ್ವ ಪರಿಸರ ಎಂದರೆ‌ ಮನುಷ್ಯನೊಬ್ಬನೇ ಅಲ್ಲ,ಮಣ್ಣು,ಗಾಳಿ,ಮರ,ನದಿ, ಗುಡ್ಡ,ಪ್ರಾಣಿ,ಪಕ್ಷಿ ಹುಳು-ಹುಪ್ಪಟೆ ಸಕಲ ಜೀವಾತ್ಮಗಳು ಸೇರಿದ ಕೂಡು ಕುಟುಂಬ ಕೂಡಿ ಬಾಳಿದರೆ ಸ್ವರ್ಗ,ಕೆಡವಿ ಬದುಕಿದರೆ ನರಕ ಎಂದು ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊದ್ಧೇಶ ಸೇವಾ ಸಂಘ ತಾಲೂಕ ಘಟಕದ ಪ್ರಧಾನ ಕಾರ್ಯದರ್ಶಿ ಸೋಪಿಸಾಬ್ ಡಿ ಸುರಪುರ ಸಮಸ್ತರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವುದು ನಮ್ಮ‌ ಕರ್ತವ್ಯವಾಗಿದ್ದು, ನಮ್ಮ ಮುಂದಿನ ಪೀಳಿಗೆಯವರಿಗೂ ಉತ್ತಮ ಪರಿಸರವನ್ನು ಉಳಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಪರಿಸರವನ್ನು ರಕ್ಷಿಸಿ ಉಳಿಸಿ ಬೆಳೆಸಿ ಪೂಜಿಸುವುದು ನಮ್ಮ ಕರ್ತವ್ಯವಾಗಿದೆ. ಪರಿಸರ ಕಾಳಜಿ ಪ್ರಜ್ಞೆಯು ಪ್ರತಿಯೊಬ್ಬರಲ್ಲಿ ಜಾಗೃತವಾಗಬೇಕು ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here