ಸಸಿಗಳನ್ನು ಮಕ್ಕಳಂತೆ ಪೋಷಿಸಿ- ಗಿರಿರಾಜ ಪವಾರ

0
61

ಶಹಾಬಾದ : ಸಸಿಗಳನ್ನು ಹಚ್ಚುವುದರ ಜೊತೆಗೆ ಅವುಗಳನ್ನು ಮಕ್ಕಳಂತೆ ಸಂರಕ್ಷಿಸಿ ಕಾಳಜಿಯಿಂದ ಬೆಳೆಸಬೇಕೆಂದು ಉಪನ್ಯಾಸಕ ಗಿರಿರಾಜ ಪವಾರ ಹೇಳಿದರು.

ಅವರು ಶನಿವಾರ ರಾಮಘಡ ಆಶ್ರಯ ಕಾಲೋನಿಯಲ್ಲಿ ಶಹಾಬಾದ ಯುವಕರ ತಂಡ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಲಾದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಮರಗಳನ್ನು ಬೆಳೆಸಿ ಸೂಕ್ತವಾದ ಪೋಷಣೆ ಮಾಡಿದರೆ ಕಾಲಕಾಲಕ್ಕೆ ಮಳೆಯಾಗುತ್ತದೆ. ಆದರೆ ಇಂದು ದೇಶದ ಎಲ್ಲಾ ಕಡೆ ಮುಂಗಾರು ಮಳೆ ಸರಿಯಾದ ವೇಳೆಗೆ ಬರದೇ ಇರುವದಕ್ಕೆ ಈ ಪರಿಸರ ನಾಶವೇ ಕಾರಣ. ಕೇವಲ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿಕೊಂಡು ಕೂಡದೇ ಅದನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ ಆ ಘೋಷ ವಾಕ್ಯಕ್ಕೆ ಮನ್ನಣೆ ಬರುತ್ತದೆ. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು.ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದರಿಂದ ಉತ್ತಮ ಪರಿಸರದೊಂದಿಗೆ ಆರೋಗ್ಯಕರ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಶಿಕ್ಷಕ ರಮೇಶ ಜೋಗದನಕರ್ ಮಾತನಾಡಿ, ಪರಿಸರ ಸಮತೋಲನ ಕಾಪಾಡಲು ನಾವು ಹೆಚ್ಚು ಹೆಚ್ಚು ಸಸಿಗಳನ್ನು ಬೆಳೆಸುವ ಮುಖಾಂತರ ಪರಿಸರ ಸಂರಕ್ಷಣೆ ಮಾಡಬೇಕು. ಅಲ್ಲದೇ ಪರಿಸರ ಸಂರಕ್ಷಣೆಯಲ್ಲಿ ಸುಂದರಲಾಲ ಬಹುಗುಣ ಹಾಗೂ ಸಾಲು ಮರದ ತಿಮ್ಮಕ್ಕರ ಶ್ರಮ ಬಹಳಷ್ಟಿದೆ ಎಂದರು. ಅಲ್ಲದೇ ಹಳ್ಳಿ ಹಳ್ಳಿಗಳಿಗೂ ಈ ಪರಿಸರದ ಬಗ್ಗೆ ಅರಿವು ಮೂಡಿಸಬೇಕಾದ ಜವಾಬ್ದಾರಿ ನಮ್ಮದಾಗಿದೆ ಎಂದರು.
ಸಾಯಿಕುಮಾರ ಗುತ್ತೆದಾರ, ವಿಶವರಾಧ್ಯ, ಹಣಮಂತ ಚೌದ್ರಿ, ಸುರೇಶ, ಗೋಪಾಲ, ಸುನೀಲ, ದತ್ತು, ಗಣೇಶ, ಶಾಮ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here