ಡಾ. ಸಿದ್ಧಲಿಂಗಯ್ಯ ಹೊಲೆ ಮಾದಿಗರ ಕವಿಯೇ?

0
297
  • ಡಾ. ರಾಜಕುಮಾರ ಎಂ. ದಣ್ಣೂರ

ಕಲಬುರ್ಗಿ : ಈ ನಾಡು ಕಂಡ ಅಪ್ಪಟ್ಟ ಸ್ವಾಭಿಮಾನದ ಕವಿ ಡಾ. ಸಿದ್ಧಲಿಂಗಯ್ಯನವರ ಕವಿತೆಗಳು ಇಡೀ ತಳ ಸಮುದಾಯದ ನೋವು, ಯಾತನೆ, ಶೋಷಣೆ ವಿರುದ್ಧ ಮೂಡಿ ಬಂದಿರುವ ಕವನಗಳು. ಉಳ್ಳವರು ಇಲ್ಲದವರ ಪರವಾಗಿ ಶೋಷಣೆ ಮಾಡುವ ನೋವಿನ ಕೂಗು ಆ ಹೊಲೆ ಮಾದಿಗರ ಕವನ ಸಂಕಲನದಲ್ಲಿ ಇದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಅತಿಥಿ ಪ್ರಾಧ್ಯಾಪಕ ಡಾ. ರಾಜಕುಮಾರ ದಣ್ಣೂರ ಹೇಳಿದರು.

ಡಾ. ಸಿದ್ಧಲಿಂಗಯ್ಯ ಅವರ ಹೊಲೆ ಮಾದಿಗರ ಹಾಡು ಕವನ ಸಂಕಲನದಲ್ಲಿ ಕ್ರಾಂತಿಯ ಕಿಚ್ಚು ಕಟ್ಟಿ ಕೊಟ್ಟಿದ್ದಾರೆ. ಹೀಗಾಗಿ ಡಾ. ಸಿದ್ಧಲಿಂಗಯ್ಯ ಅವರ ಸ್ನೇಹಿತರು ಎಲ್ಲರೂ ಕೂಡಿ ‘ಹೊಲೆ ಮಾದಿಗರ ಹಾಡು’ ಅಂತ ಕವನ ಸಂಕಲನಕ್ಕೆ ಹೆಸರು ಅಂತಿಮ ಗೊಳಿಸಿದ್ದಾರೆ. ಈ ಹೆಸರು ಇಡುವುದುಕ್ಕೆ ಕಾರಣ ಅಂದರೆ ಹೊಲೆ ಮಾದಿಗರ ಹಾಡು ಕವನ ಸಂಕಲನದಲ್ಲಿ ಈ ಎರಡೇ ಸಮುದಾಯದ ಸಿಟ್ಟು ಆಕ್ರೋಶ ಒಳಗೊಂಡಿದೆ. ಆದರೆ ಇತ್ತೀಚೆಗೆ ಅವರು ವಿಧಿವಶರಾದ ಆದಮೇಲೆ ಬಹುತೇಕ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಮುದ್ರಣ ಮಾಧ್ಯಮಗಳು ಹೊಲೆ ಮಾದಿಗರ ಕವಿ ಇನ್ನಿಲ್ಲ ಅಂತ ಸುದ್ದಿ ಬಿತ್ತರ ಮಾಡಿದವು. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರಿಸಿಕೊಳ್ಳುವ ಮಾಧ್ಯಮಗಳು ಒಬ್ಬ ಕವಿಯನ್ನು ಒಂದು ಜಾತಿಗೆ ಸೀಮಿತ ಮಾಡಿ ಈ ತರಹದ ಅವಮಾನ ಮಾಡುವುದು ಎಷ್ಟರ ಮಟ್ಟಿಗೆ ಸರಿ ಇದೆ ಎಂದರು.

Contact Your\'s Advertisement; 9902492681

ಡಾ. ಕವಿ ಸಿದ್ಧಲಿಂಗಯ್ಯನವರು ಹೊಲೆ ಮಾದಿಗರ ಕವಿ ಅಲ್ಲ ಅವರೊಬ್ಬ ಬಹುದೊಡ್ಡ ಈ ನಾಡಿನ ಕವಿ, ಈ ನಾಡಿನ ಆಸ್ತಿ, ಈ ನಾಡಿನ ಸಂಪತ್ತು ಇದನ್ನು ಮಾಧ್ಯಮಗಳು ತಾವು ಮೊದಲ ಅರ್ಥುಕೊಳ್ಳಬೇಕು. ಯಾರೋ ಒಬ್ಬರು ತಲೆ ಇಲ್ಲದವರು ಹೊಲೆ ಮಾದಿಗರ ಕವಿ ಎಂದು ಬಳಸಿದ ಗೋಸ್ಕರ ನೀವು ಎಲ್ಲಾ ಮಾಧ್ಯಮದವರು ಅದೇ ರೀತಿ ಹೊಲೆ ಮಾದಿಗರ ಕವಿ ಅಂತ ಬಳಸೋದು ಎಷ್ಟರ ಮಟ್ಟಿಗೆ ಸರಿ ಇದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಕಿವಿಹಿಂಡಿದರು.

ಕವಿ ಸಿದ್ಧಲಿಂಗಯ್ಯನವರ ಸಾಹಿತ್ಯ ಬರಿ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿಲ್ಲ ಅವರ ಕವನಗಳು ಮತ್ತು ಅವರ ಆತ್ಮ ಚರಿತ್ರೆ ಇತರೆ ಭಾರತೀಯ ಭಾಷೆಗಳಿಗೆ ತುರ್ಜುಮೆ ಆಗಿವೆ ಹೀಗಾಗಿ ಸಿದ್ಧಲಿಂಗಯ್ಯ ಅವರ ಸಾಹಿತ್ಯವನ್ನು ಸಾಹಿತ್ಯ ಲೋಕಕ್ಕೆ ದೊಡ್ಡ ಆಸ್ತಿ ಆಗಿದೆ. ಯಾವುದೇ ಒಬ್ಬ ಸಾಹಿತಿಯನ್ನು ಒಂದು ಜಾತಿಗೆ ಸೀಮಿತ ಮಾಡುವುದು ಬೇಡ ಅವರ ಸಾಹಿತ್ಯವನ್ನು ಇಡಿ ನಾಡಿನ ಆಸ್ತಿ ಆಗುತ್ತದೆ ಎಂದು ಡಾ. ರಾಜಕುಮಾರ ದಣ್ಣೂರ ಅವರು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here