ಕೊಲೆ ಮಾಡಿದ ಆರೋಪಿಗಳ ಬಂಧನಕ್ಕೆ ಆಗ್ರಹ

0
25

ಕಲಬುರಗಿ: ಜೂನ್ ೫ ರಂದು ನಗರದ ಅಟಲ್ ಬಿಹಾರಿ ವಾಜಪೇಯಿ ಲೇಔಟ್‌ನಲ್ಲಿ ಕೊಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಎಸ್.ಸಿ.ಎಸ್‌ಟಿ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಬೇಕೆಂದು ಜಿಲ್ಲಾ ಮಾದಿಗ ಸಮಾಜದ ವತಿಯಿಂದ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು ಎಂದು ಜಿಲ್ಲಾ ಮಾದಿಗ ಸಮಾಜದ ಜಿಲ್ಲಾ ಅಧ್ಯಕ್ಷ ಪರಮೇಶ್ವರ ಖಾನಾಪೂರ ಅವರು ತಿಳಿಸಿದರು.

ಕಳೆದ ಜೂನ್ ೫ ರಂದು ಅಟಲ್ ಬಿಹಾರಿ ವಾಜಪೇಯಿ ಲೇಔಟ್‌ನಲ್ಲಿ ನಿಖಿಲ್ ಎಂಬ ಯುವಕರನ್ನು ಕೊಲೆ ಮಾಡಿ ಅವರ ತಾಯಿ ಮತ್ತು ಅವರ ಅಣ್ಣನವರಿಗೂ ಕೂಡ ಮಾರಣಾಂತಿಕ ಹಲ್ಲೆ ಮಾಡಿ ಆರೋಪಿಗಳನ್ನು ಪರಾರಿಯಾಗಿದ್ದು, ಕೊಲೆ ಮಾಡಿದ ಆರೋಪಿಗಳಲ್ಲಿ ಕೆಲವು ಜನ ಸವರ್ಣಿಯರಾಗಿರುವುದರಿಂದ ಅವರ ಮೇಲೆ ಎಸ್.ಸಿ.ಎಸ್‌ಟಿ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸುವುದರೊಂದಿಗೆ ಮೃತಪಟ್ಟ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಸಿಗುವಂತೆ ಅನುಕೂಲ ಮಾಡಿಕೊಡುವುದರೊಂದಿಗೆ ನ್ಯಾಯವನ್ನು ಒದಸಿಕೊಡಬೇಕೆಂದು ಮನವಿ ಮಾಡಲಾಯಿತು.

Contact Your\'s Advertisement; 9902492681

ಸುಮಾರು ೧೦ ರಿಂದ ೧೧ ಜನ ಆರೋಪಿಗಳಲ್ಲಿ ಬರಿ ಮೂರು ಜನರನ್ನು ಬಂಧಿಸಿ ಉಳಿದ ಆರೋಪಿಗಳನ್ನು ಬಂಧಿಸುತ್ತಿಲ್ಲ. ಉಳಿದ ಆರೋಪಿಗಳು ಅವರ ಮನೆಗೆ ಹೋಗಿ ಅವರ ಕುಟುಂಬಕ್ಕೆ ಜೀವಬೇದರಿಕೆಯನ್ನು ಹಾಕುತ್ತಿದ್ದಾರೆ. ಆದ್ದರಿಂದ ಅವರ ಕುಟುಂಬಕ್ಕೆ ರಕ್ಷಣೆಯನ್ನು ನೀಡಬೇಕು ಹಾಗೂ ಕೊಲೆ ಮಾಡಿದ ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ನಿರ್ಲಕ್ಷ್ಯವಹಿಸುತ್ತಿರುವುದ ಕಂಡುಬಂದಿರುತ್ತದೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣದಲ್ಲಿ ಪೊಲೀಸರು ರಾಜಕೀಯ ಬಲ, ಹಣದ ಬಲದೊಂದಿಗೆ ಮತ್ತು ಕೆಲವು ಪುಡಾರಿಗಳು ಪೊಲೀಸ್‌ರಿಗೆ ಹಣದ ಆಮಿಷವೊಡ್ಡಿರುವುದರಿಂದ  ಈ ಪ್ರಕರಣದ ಬಗ್ಗೆ ಹೆಚ್ಚಿನ ಗಮನ ಹರಿಸದೇ ಇರುವುದನ್ನು ಕಂಡು ಬರುತ್ತದೆ. ಆದ್ದರಿಂದ ಸದರಿ ಘಟನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಕೊಲೆ ಮಾಡಿದ ಆರೋಪಿಗಳ ವಿರುದ್ದ ಸೂಕ್ತ ಕ್ರಮವ ಕೈಗೊಳ್ಳದಿದ್ದರೆ ೨೩ನೇ ಜೂನ್ ೨೦೨೧ ರಂದು ಪೊಲೀಸ್ ಆಯುಕ್ತರ ಕಛೇರಿ ಎದುರುಗಡೆ ಜಿಲ್ಲಾ ಮಾದಿಗೆ ಸಮಾಜದ ವತಿಯಿಂದ ಪ್ರತಿಭಟನೆಯನ್ನು ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಯಾವುದೇ ಪ್ರತಿಭಟನೆಗೆ ಅವಕಾಶ ಕೊಡದೇ  ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾದಿಗ ಸಮಾಜ ಮುಖಡರುಗಳಾದ ಶಾಮ ನಾಟೀಕರ್, ಬಾಬುರಾವ ಸುಂಠಾಣ, ಗೋಪಿಕೃಷ್ಣ ಗುಡೇನವರ, ದಶರಥ ಕಲಗುರ್ತಿ, ರಮೇಶ ವಾಡೇಕರ್, ರಾಜು ಕಟ್ಟಿಮನಿ, ಬಂಡೇಶ ರತ್ನಡಗಿ, ಪ್ರದೀಪ್ ಭಾವೆ, ಸಚೀನ್ ಕಟ್ಟಿಮನಿವ, ರಂಜೀತ ಮೂಲಿಮನಿ, ಕಾಶಿನಾಥ ಹಾದಿಮನಿ, ದಿಲೀಪ್ ಐಹೊಳೆ, ಚಂದಪ್ಪ ಕಟ್ಟಿಮನಿ, ರಾಹುಲ್ ಮೇತ್ರೆ, ರಂಜೀತ ಮೂಲಿಮನಿ, ಹರಿಶ್ಚಂದ್ರ ಎಸ್.ದೊಡ್ಮನಿ, ಬಸವರಾಜ ಜವಳಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here