ಧರ್ಮಸಿಂಗ್ ಫೌಂಡೇಷನ್‍ನಿಂದ ಆಕ್ಸೀಜನ್ ಸಹಿತ 25 ಬೆಡ್ ಕೇರ್ ಸೆಂಟರ್‍ಗೆ ಶಾಸಕ ಡಾ. ಅಜಯ್ ಸಿಂಗ್ ಚಾಲನೆ

0
34

ಜೇವರ್ಗಿ/ಯಡ್ರಾಮಿ: ಕೊರೋನಾ 3 ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಧರ್ಮಸಿಂಗ್ ಫೌಂಡೇಷನ್ ಜೇವರ್ಗಿ ಮತಕ್ಷೇತ್ರದಡಿಯಲ್ಲಿ ಬರುವ ಯಡ್ರಾಮಿ ತಾಲೂಕು ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಸಹಿತವಿರುವ 25 ಬೆಡ್‍ಗಳ ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೆ ಚಿಕಿತ್ಸೆಗೆ ಅನುಕೂಲವಾಗುವಂತಹ ಕೇರ್ ಸೆಂಟರ್ ಸ್ಥಾಪಿಸಿದೆ.

ಗುಪರುವಾರ ಈ ಕೇರ್ ಸೆಂಟರ್‍ಗೆ ಚಾಲನೆ ನೀಡಿದ ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಮ್ಲಜನಕ ಸಹಿತ 25 ಬೆಡ್‍ಗಳ ವ್ಯವಸ್ಥೆ ಇಡೀ ಜಿಲ್ಲೆಯಲ್ಲಿ ಯಡ್ರಾಮಿಯಲ್ಲೊಂದೇ ಇದೆ, ಇದು ಧರ್ಮಸಿಂಗ್ ಫೌಂಡೇಷನ್ ಜನಪರ ಕೆಲಸ ಎಂದು ಹೆಮ್ಮೆಯಿಂದ ಹೇಳಿದರು.

Contact Your\'s Advertisement; 9902492681

ಈಗಾಗಲೇ 2 ನೇ ಅಲೆಯಲ್ಲಿ ಜೇವರ್ಗಿ ಜನತೆUಗೆ 25 ಆಕ್ಸೀಜನ್ ಸಿಲಿಂಡರ್ ನೀಡಲಾಗಿದ್ದು ಇದರಿಂದ 56 ಮಂದಿ ನೆರವು ಪಡೆದಿದ್ದಾರೆ. 3 ನೇ ಅಲೆ ಬರಲೇಬಾರದು. ಬಂದರೂ ಯಾರಿಗೂ ಅಪಾಯವಾಗಬಾರದು ಎಂಬ ಉz್ದÉೀಶಕ್ಕಾಗಿ 25 ಸಿಲಿಂಡರ್ ಒದಗಿಸಿ ಪ್ರತ್ಯೇಕ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ ಎಂದು ಡಾ. ಜಯ್ ಸಿಂಗ್ ಫೌಂಡೇಷನ್‍ನ ಕೆಲಸಗಳನ್ನು ವಿವರಿಸಿದರು.

ಕೊರೋನಾ 2 ನೇ ಅಲೆಯಲ್ಲಿ ಆಕ್ಸೀಜನ್ ಹಾಹಾಕಾರ ಕಂಡಾಗ ಫೌಂಡೇಷನ್ ವತಿಯಿಂದ ಇಂಡೋನೇಷಿಯಾದಿಂದ 50 ಆಕ್ಸೀಜನ್ ತುಂಬಿದ ಸಿಲಿಂಡರ್ ತರಿಸಲಾಗಿದೆ. ಅವುಗಳಲ್ಲಿ 25 ಸಿಲಿಂಡರ್ ಯಡ್ರಾಮಿ ಕೇರ್ ಸೆಂಟರ್‍ಗೆ ನೀಡಲಾಗುತ್ತಿದ್ದು ಇಲ್ಲಿನ ಆಸ್ಪತ್ರೆಯವರು ಇವುಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ಡಾ. ಅಜಯ್ ಸಿಂಗ್ ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಅಜಯ್ ಸಿಂಗ್ ಯಡ್ರಾಮಿ ತಾಲೂಕು ಕೇಂದ್ರಕ್ಕೆ 100 ಬೆಡ್‍ಗಳ ವ್ಯವಸ್ಥೆ ಇರುವಂತಹ ಸುಸಜ್ಜಿತ ಆಸ್ಪತ್ರೆಗಾಗಿ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಕೆಲಸ ಬೇಗ ಆಗಬೇಕೆಂಬ ಉz್ದÉೀಶದಿಂದ ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಕೆ ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿಯವರಿಗೂ ಭೇಟಿ ಮಾಡಿ ಯೋಜನೆಯ ಬಗ್ಗೆ ತಿಳಿಹೇಳಿ ಬೇಗ ಮಂಜೂರಾತಿ ನೀಡುವಂತೆ ಆಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.

ಯಡ್ರಾಮಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊಸತಾಗಿ ಮಕ್ಕಳತಜ್ಞರು, ಸ್ತ್ರೀರೋÀಗ ತಜ್ಞರು, ದಂತ ವೈದ್ಯರು ನೇಮಕವಾಗಿದೆ. ಈ ಆಸ್ಪತ್ರೆ ವಿಶೇಷ ತಜ್ಞರಿಂದ ಕೂಡಿದೆ. ಇಲ್ಲಿನ ಜನ ಇವರ ಸದುಪಯೋಗ ಪಡಿಸಿಕೊಳ್ಳಬೇಕು. ವೈದ್ಯರಿಗೆ ಸಹಕರಿಸಿ ತಮ್ಮ ಆರೋಗ್ಯ ಸಂಬಂಧಿ ತೊಂದರೆ ಹೇಳಿ ಪರಿಹಾರ ಪಡೆಯಿರಿ ಎಂದರು.

ತಾಲೂಕಾ ಆರೋಗ್ಯಾಧಿಕಾರಿ ಡಾ. ಸಿದ್ದು ಪಾಟೀಲ್, ಯಡ್ರಾಮಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಶರ್ಮಾ, ಡಾ. ವಿನುತ್ ಕುಲಕರ್ಣಿ, ಡಾ. ಶ್ವೇತಾ ಕುಲಕರ್ಣಿ, ಡಾ. ಝರೀನ್ ಇದ್ದರು.

ಇದೇ ಸಂದರ್ಭದಲ್ಲಿ ಡಾ. ಅಜಯ್ ಸಿಂಗ್ ಸಾರ್ವಜನಿಕರಿಗೆ ಬೇಟಿ ಮಾಡಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿದುರ. ತಾವೇ ಖುದ್ದು ಲಸಿಕೆ ಇಂಜೆಕ್ಷನ್ ನೀಡುವ ಮೂಲಕ 10 ಜನರಿಗೆ ಆರೋಗ್ಯ ಸಂಬಂಧಿ ಕಿವಿಮಾತು ಹೇಳಿದರು. ಲಸಿಕೆ ಪಡೆಯೋದರಿಂದ ಸೋಂಕು ಬಂದರೂ ಪ್ರಾಣಕ್ಕೆ ಅಪಾಯವಿರೋದಿಲ್ಲವೆಂಬ ತಜ್ಞರ ಮಾತನ್ನು ಪುನರುಚ್ಚರಿಸಿದ ಡಾ. ಅಜಯ್ ಸಿಂಗ್ ಜೇವರ್ಗಿ ಮತಕ್ಷೇತ್ರದ ಲಸಿಕೆಗೆ ಅರ್ಹ ಜನರೆಲ್ಲರು ಆಸ್ಪತ್ರೆಗೆ ಬಂದು, ಶಿಬಿರಗಳಿಗೋಗಿ ಲಸಿಕೆ ಹೊಂದುವಂತ ಕರೆ ನೀಡಿದರು.

ಯಡ್ರಾಮಿ ಹಾಗೂ ಜೇವರ್ಗಿ ತಾಲೂಕು ಸೇರಿದಂತೆ ಇದುವರೆಗೂ 47, 973 ಮಂದಿಗೆ ಲಸಿಕೆ ನೀಡಲಾಗಿದ್ದು ಜಿಲ್ಲೆಯಲ್ಲಿ ಇದೇ ಹೆಚ್ಚಿನ ಲಸಿಕೆಯಾಗಿದೆ. ಲಸಿಕಾ ಬಸ್ ಸಂಚಾರ ಮಾಡುತ್ತಿದೆ, ಜೊತೆಗೇ ಲಸಿಕೆಗಾಗಿ ಶಿಬಿರ ಸಾಗಿವೆ. ಸಾರ್ವಜನಿಕರು ಲಸಿಕೆ ಹಾಕಿಸಿಕೊಂಡು ಕೋವಿಡ್ ರೋಗ ಓಡಿಸಬೇಕೆಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here