ಸೇಡಂ: ಮದನಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮುಧೋಳ ಗ್ರಾಮದಲ್ಲಿ ಐಸಿಎಂಆರ್ ತಂಡದಿಂದ ಕೋವಿಡ-19 ಸೀರೂ ಸರ್ವೆ ಮಾಡಿ ಸುಮಾರು 42 ಜನರ ರಕ್ತ ಮಾದರಿ ಸಂಗ್ರಹಿಸಿಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ. ಸುರೇಶ್ ಮೇಕಿನ್ ಅವರ ಅಧಕ್ಷತೆಯಲ್ಲಿ ಮತ್ತು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಶ್ರೀಧರ್ ನೇತೃತ್ವದಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಟಿ.ಎಸ್ ಮಾಹಾಂತೇಶ್ ಹಾವನೂರ್, ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಶಿವಯೋಗಿ ಸಕ್ಪಲ್, ಕಿರಿಯ ಆರೋಗ್ಯ ನಿರೀಕ್ಷಣಧಿಕಾರಿ ರಾಜೇಶ್, ವೀಣಾ ದೇವಿಂದ್ರ, ಇಜಾಜ, ಭೀಮಮ್ಮ, ಚಂದ್ರಮ್ಮ, ಹೇಮಾ , ರೇಷ್ಮಾ , ಬ್ರಹ್ಮಾ ನಂದ ರೆಡ್ಡಿ ಹಾಗೂ ಗ್ರಾಮದ ಎಲ್ಲಾ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದ ಮುಖಂಡರು ಭಾಗವಹಿಸಿದ್ದರು.