ವಚನ ಆಷಾಢ: ಕಾಯಕದಲ್ಲಿ ದೇವರನ್ನು ಕಂಡವರು ಶರಣರು

0
112

ಹನ್ನೆರಡನೆಯ ಶತಮಾನ ಕನ್ನಡ ಇತಿಹಾಸದ ಬೆಳಕಿನ ಸಂಪುಟ. ಎತ್ತ ನೋಡಿದಡತ್ತತ್ತ ಶಿವಶರಣರೇ ಕಾಣುವ ಸುವರ್ಣಯುಗ.ಅವರ ಕೈಯೊಳಗೆ ಸತ್ಯ ಶುದ್ಧವಾದಕಾಯಕ, ಮನದಲ್ಲಿ ಮಹಾದೇವನ ನೆನೆಹು. ಮನೆಯೊಳಗೆ ಜಂಗಮದಾಸೋಹ. ಸಮೂಹ ಚಿಂತನಶೀಲರಾದ ಶರಣರ ಅಂತರಂಗದ ಅರಿವಿನ ಪರದೆಯ ಮೇಲೆ ಮೂಡಿ ಬಂದ ಮುಕ್ತಗಳೇ ವಚನಗಳು. ಇಂತಹ ಅಪರೂಪದ ವಚನಗಳನ್ನು ಸಂಗ್ರಹಿಸಿ ಕೊಟ್ಟವರು ಫ.ಗು.ಹಳಕಟ್ಟಿಯವರು.

ಶರಣರಿಗೆ ವ್ಯಕ್ತಿಗಿಂತ ವ್ಯಕ್ತಿತ್ವದೊಡ್ಡದಾಗಿತ್ತು. ಅವರಿಗೆ ಕೆಲಸ ಕಾಯಕವಾಗಿತ್ತು. ನರ ಹರನಾಗಿದ್ದ.ಜೀವ ಶಿವನಾಗಿದ್ದ. ಮಾನವ ಮಹಾದೇವನಾಗಿದ್ದ. ಮಾತು ಮಂತ್ರವಾಗಿತ್ತು. ಅನ್ನಪ್ರಸಾದವಾಗಿತ್ತು. ವಿದ್ಯೆಯೊಂದೇದೇವನೊಲಿಸುವ ಸಾಧನವೆಂದು ಹೇಳುವ ಈ ದೇಶದಲ್ಲಿ ಉದ್ಯೋಗವು ಕೂಡ ದೇವನೊಲಿಸುವ ಸಾಧನವೆಂದು ಹೇಳಿದವರು ಶಿವಶರಣರು. ಹೀಗಾಗಿ ಶರಣರುತಾವು ಮಾಡಿದ ವೃತ್ತಿಗಳನ್ನು ಅಥವಾ ಕಾಯಕಗಳನ್ನು ತಮ್ಮ ಹೆಸರಿನ ಹಿಂದೆ ಬಳಸಿಕೊಂಡರು. ತಾವು ಮಾಡುವ ಕಾಯಕದಲ್ಲಿ ದೇವರನ್ನು ಕಂಡರು. ಶರಣರಿಗೆ ಪೂಜೆಕಾಯಕವಾಗಿರಲಿಲ್ಲ. ಕಾಯಕವೇ ಪೂಜೆಯಾಗಿತ್ತು. ಕಾಯಕದ ನಾಯಕರು ಶರಣರು. ತಮಗಿಂತಲೂತಮ್ಮಕಾಯಕಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಟ್ಟು ಅದರ ಮಹತ್ವವನ್ನು ಸಾರಿದವರು ಶರಣರು.

Contact Your\'s Advertisement; 9902492681

ಇಂತಹ ಶರಣರು ರಚಿಸಿದ ವಚನಸಾಹಿತ್ಯ ಏಕಾಂತದಲ್ಲಿರಚನೆಯಾದದ್ದಲ್ಲ. ತಾವು ಬರೆದದ್ದೇ ಸತ್ಯವನ್ನೆಲಿಲ್ಲ. ಆದರೇಅವರು ಬರೆದದ್ದೆಲ್ಲಾ ಸತ್ಯವೇಆಗಿತ್ತು. ಶರಣರುತಮ್ಮ ಮಕ್ಕಳಿಗಾಗಿ, ತಮ್ಮ ಬದುಕಿಗಾಗಿ ಮಾಡಿಕೊಳ್ಳಲಿಲ್ಲ. ಶರಣರಿಗೆ ವ್ಯಷ್ಟಿಇರಲಿಲ್ಲ. ಸಮಷ್ಟಿ ಪ್ರಜ್ಞೆತುಂಬಿತ್ತು. ಅವರಿಗೆದೇಶ. ಅವರಿಗೆಜನ, ಅವರಿಗೆ ಭಾಷೆ, ಅವರಿಗೆಸಮೂಹ ತುಂಬಿಕೊಂಡಿತ್ತು. ಅವಿಭಕ್ತ ಕುಟುಂಬದ ಬಗ್ಗೆ ಮಾತನಾಡುವವರಿಗೆ ಅದು ಹೇಗಿರಬೇಕೆಂದು ತಮ್ಮ ವಚನಗಳ ಮುಖಾಂತರ ಅಭಿವ್ಯಕ್ತಗೊಳಿಸಿದರು. ಅದಕ್ಕಾಗಿ ಆರ್.ಆರ್. ದಿವಾಕರರಂತಹವರು ’ವಚನಗಳು ಕನ್ನಡದ ಉಪನಿಷತ್ತುಗಳು’ ಎಂದು ಉದ್ಗರಿಸಿದ್ದಾರೆ.

ದೇವಾಲಯದೊಳಗಣ ದೇವರಿಗೆ ಸಂಸ್ಕೃತದಲ್ಲಿ ಪೂಜೆಯಾದರೆಜನರಾಡುವ ಭಾಷೆಯಲ್ಲಿ ವಚನಗಳನ್ನು ರಚಿಸಿ, ದೇವರಿಗೂಕನ್ನಡವನ್ನು ಕಲಿಸಿದವರು ಶರಣರು.ಗದ್ಯ, ಪದ್ಯಎರಡರ ಮಧ್ಯದಲ್ಲಿ ಎದ್ದು ನಿಂತಿರುವ ಅನುಭಾವ ಸಾಹಿತ್ಯವೇ ವಚನ ಸಾಹಿತ್ಯ. ವಚನಗಳು ಕೇವಲ ಸಾಹಿತ್ಯಕ್ಕಲ್ಲ, ಭಾಷಣಕ್ಕಲ್ಲ. ಅವು ನಮ್ಮ ಬದುಕಿನ ಕನ್ನಡಿಗಳು.

(ಸ್ಥಳ: ಬಸವ ಸಮಿತಿ ಅನುಭವ ಮಂಟಪ, ಕಲಬುರಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here