ಸೇಡಂ: ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಬಾಲರಾಜ್ ಗುತ್ತೇದಾರ ಬ್ರಿಗೇಡ್ ವತಿಯಿಂದ ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಸ್ಮಾರ್ಟ ಪೋನ್ ವಿತರಣೆ ಮಾಡಿದರು.
ಸೇಡಂ ಮತಕ್ಷೇತ್ರದ ಮೋತಕಪಲ್ಲಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಶಿರಿಷಾ ತಂದೆ ವೆಂಕಟಪ್ಪ 99.36, ನವೀತಾ ತಂದೆ ಕಾಶಪ್ಪಾ ಪೂಜಾರಿ 97.92 ಅಂಕ ಪಡೆದಿರುವ ಹಿನ್ನೆಲೆಯಲ್ಲಿ ಮೋತ್ತಕಪಲ್ಲಿ ಗ್ರಾಮದಲ್ಲಿ ಬಾಲರಾಜ್ ಗುತ್ತೇದಾರ ಅವರು ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಸ್ಮಾರ್ಟ ಪೋನ್ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಬಾಲರಾಜ್ ಗುತ್ತೇದಾರ ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ಗುರಿ ಮುಟ್ಟಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.