ಶರಣ ಚರಿತೆ: ಉರಿಲಿಂಗದೇವ-ಉರಿಲಿಂಗ ಪೆದ್ದಿ

0
12

ಉರಿಲಿಂಗದೇವ-ಉರಿಲಿಂಗಪೆದ್ದಿ ಈ ಇಬ್ಬರೂ 12ನೇ ಶತಮಾನದ ವಚನಕಾರರು. ಒಬ್ಬರು ಉರಿಲಿಂಗದೇವ (ಗುರು), ಇನ್ನೊಬ್ಬರು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ (ಶಿಷ್ಯ) ಎಂಬ ಅಂಕಿತವನ್ನಿಟ್ಟುಕೊಂಡು ಬರೆದ ಅನೇಕ ವಚನಗಳು ದೊರೆಯುತ್ತವೆ. ಉರಿಲಿಂಗದೇವರು ಮಹಾರಾಷ್ಟ್ರದ ನಾಂದೇಡನಿಂದ ಬಂದವರು ಎಂದು ಕೆಲವರು ಹೇಳಿದರೆ, ಕರ್ನಾಟದ ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪ ಇರುವ ನಂದವಾಡಗಿಯವರು ಎಂದು ಇನ್ನು ಕೆಲವರು ಹೇಳುತ್ತಾರೆ.

ಇವರಿಬ್ಬರ ಜೀವನ ಹಾಗೂ ಪರಂಪರೆ ಕುರಿತು ಫ.ಗು. ಹಳಕಟ್ಟಿ ಹಾಗೂ ವಚನ ಸಂಪುಟದಲ್ಲಿ ಭಿನ್ನ ದಾಖಲೆಗಳಿರುವುದನ್ನು ನಾವು ಗಮನಿಸಬೇಕಿದೆ. ಆದರೆ ಎರಡೂ ಕಡೆ ಪೆದ್ದಣ್ಣ ಎಂಬ ಕಳ್ಳ ಉರಿಲಿಂಗದೇವರಿಂದ ಲಿಂಗದೀಕ್ಷೆ ಪಡೆದು ನಿಜ ಶರಣನಾದ (ಘೇ ಜಾ ದಗಡಿ ಚಾ) ಎಂಬ ಪರಂಪರಾಗತ ಕಥೆ ಹೇಳುತ್ತ ಬರಲಾಗಿದೆ. ಕಲ್ಯಾಣ ಕರ್ನಾಟಕದ ಕೋಡ್ಲಿ, ಭಾಲ್ಕಿ, ಬೇವಿನಚಿಂಚೋಳಿಯಲ್ಲಿ ಈಗಲೂ ಉರಿಲಿಂಗಪೆದ್ದಿ ಮಠಗಳಿದ್ದು, ಬಸವಕಲ್ಯಾಣದಲ್ಲಿ ಅವರ ಸಮಾಧಿ ಕಾಣಬಹುದಾಗಿದೆ.

Contact Your\'s Advertisement; 9902492681

ನಾಂದೇಡ-ಕೂಡಲಸಂಗಮ ಉರಿಲಿಂಗದೇವ-ಮಹಾಂತೇಶ್ವರ ಸ್ವಾಮಿ ಇಬ್ಬರು ಕೂಡಿಕೊಂಡು ಹಂಪಿ ಕಡೆಗೆ ಲೋಕಸಂಚಾರಕ್ಕೆ ತೆರಳುತ್ತಿದ್ದ ಸಮಯದಲ್ಲಿ ನಂದರಾಜನು ತಮ್ಮ ನಂದವಾಡಗಿಯಲ್ಲಿ ಉಳಿಯಲು ಹೇಳಿದಾಗ ಉರಿಲಿಂಗದೇವರು ಅಲ್ಲಿಯೇ ಉಳಿಯುತ್ತಾರೆ. ಹೀಗಾಗಿ ಇಂದಿಗೂ ಅಲ್ಲಿ ಉರಿಲಿಂಗದೇವ-ಉರಿಲಿಂಗಪೆದ್ದಿ ಮಠವಿತ್ತು. ಆದರೆ ಕಾಲಾನಂತರದಲ್ಲಿ ಅದೀಗ ಮಹಾಂತೇಶ್ವರ ಮಠವಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ.

ಹುಮನಾಬಾದ-ಬೇಮಳಖೇಡ: ಬೀದರ್ ಜಿಲ್ಲೆಯ ಹುಮನಾಬಾದನಿಂದ 15-20 ಕಿ.ಮೀ. ದೂರದ ದಕ್ಷಿಣ ಭಾಗದ ಕೊನೆಗೆ ದೊಡ್ಡಗವಿ ಕಾಣಿಸುತ್ತದೆ. ಅಲ್ಲೊಂದು ದಶಮುಖ ಶರಣ ಹೆಸರಿನ ದೊಡ್ಡ ಗವಿ ಇದೆ. ಗ್ರಾಮ ಪ್ರವೇಶಿಸಿ 10-20 ಹೆಜ್ಜೆ ನಡೆಯುತ್ತಿದ್ದಂತೆಯೇ ಉರಿಲಿಂಗಪೆದ್ದಿ ಹೆಸರಿನ ಮಠ ಕಾಣಿಸುತ್ತದೆ. ಆದರೆ ಈ ಮಠ ಬೇವಿನಚಿಂಚೋಳಿಯ ಶಿವಯೋಗಿ ಶರಣರ (ತುಕಾರಾಮ) ಸಮಾಧಿ ಎಂದು ಆ ಮಠದ ಪೂಜಾರಿ ಹೇಳುತ್ತಾರೆ.

ಉರಿಲಿಂಗಪೆದ್ದಿಗಳ ವಚನಗಳನ್ನು ಕಂಠಪಾಠ ಮಾಡಿ ಹೇಳುತ್ತಿದ್ದ ಶಿವಯೋಗಿ ಶರಣರು ಹರಿಜನರು ಸಂಸ್ಕøತಿ ಮತ್ತು ಅಕ್ಷರದಿಂದ ವಂಚಿತರಾಗಬಾರದು ಎಂಬ ಹಿನ್ನೆಲೆಯಲ್ಲಿ ಕೋಡ್ಲಾ ಸೇರಿದಂತೆ ಅನೇಕ ಕಡೆ ಮಠ ಸ್ಥಾಪಿಸಿ ಆ ಮಠಗಳಿಗೆ ಅಕ್ಷರಸ್ಥರನ್ನೇ ಪೀಠಾಧಿಪತಿಗಳನ್ನಾಗಿ ಮಾಡಿದ್ದರು. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಕೋಡ್ಲಾದ ಉರಿಲಿಂಗಪೆದ್ದಿ ಮಠವನ್ನೇ ಮುಖ್ಯವಾಗಿಟ್ಟುಕೊಂಡು ಕಲ್ಯಾಣ ಕರ್ನಾಟಕದಲ್ಲಿ 11 ಮಠ ಹಾಗೂ ಮೈಸೂರು ಕಡೆ 21 ಮಠಗಳನ್ನು ಸ್ಥಾಪಿಸಿದ್ದಾರೆ.

ದಲಿತ ಕೇರಿಯ ನೂರಾರು ಜನರಿಗೆ ಶಿವಯೋಗಿ ಶರಣರೆ ಲಿಂಗದೀಕ್ಷೆ ಸಹ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here