ವಿಶ್ವಪ್ರಸಿದ್ಧ ಹಂಪಿಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕುಟುಂಬ ಸಮೇತ ಭೇಟಿ

ಹೊಸಪೇಟೆ(ವಿಜಯನಗರ): ವಿಶ್ವಪಾರಂಪರಿಕ ತಾಣ ಹಂಪಿಗೆ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹಾಗೂ ಅವರ ಧರ್ಮಪತ್ನಿ ಎಂ.ಉಷಾ ಅವರು ಸೇರಿದಂತೆ ಇಡೀ ಕುಟುಂಬ ಸಮೇತ ಶನಿವಾರ ಭೇಟಿ ನೀಡಿದರು.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಕುಟುಂಬದವರು ಮೊದಲಿಗೆ ವಿರೂಪಾಕ್ಷೇಶ್ವರನ ದರುಶನ ಪಡೆದರು.ಉಪರಾಷ್ಟ್ರಪತಿ ಮತ್ತು ಅವರ ಕುಟುಂಬದವರಿಗೆ ವಿದ್ಯಾರಣ್ಯ ಶ್ರೀಗಳು ಶಾಲು ಹೋದಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು ಹಾಗೂ ಈ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಅವರು ತಾಯಿ ಪಂಪಾಂಬಿಕೆ ಹಾಗೂ ನಾಡದೇವತೆ ಭುವನೇಶ್ವರಿಯ ದರುಶನ ಪಡೆದರು.

ನಂತರ ಅವರು ವಿರೂಪಾಕ್ಷೇಶ್ವರ ದೇವಸ್ಥಾನದ ಮುಂಭಾಗದ ಮಂಟಪ ಹಾಗೂ ಸುತ್ತಮುತ್ತಲಿನ ಮಂಟಪಗಳು ಹಾಗೂ ಅಲ್ಲಿನ ಶಿಲ್ಪಕಲಾ ವೈಭವವನ್ನು ಕಣ್ತುಂಬಿಕೊಂಡರು. ಅನುಭವಿ ಗೈಡ್ ಕೇಶವ್ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಡೈರೆಕ್ಟರ್ ಜನರಲ್ ವಿದ್ಯಾವತಿ ಅವರು ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿರುವ ಸ್ಮಾರಕಗಳ ಬಗ್ಗೆ ವಿವರಣೆ ನೀಡಿದರು.

ದೇವಸ್ಥಾನದ ಆವಣದಲ್ಲಿರುವ ವಿಶಾಲ ಹಂಪಿಯ ಪ್ರದೇಶದ ನಕ್ಷೆಯನ್ನು ಉಪರಾಷ್ಟ್ರಪತಿಗಳು ಕುತೂಹಲದಿಂದ ವೀಕ್ಷಿಸಿದರು.

ಇದಕ್ಕೂ ಮುಂಚೆ ವಿರೂಪಾಕ್ಷೇಶ್ವರ ದೇವಸ್ಥಾನ ಆವರಣದಲ್ಲಿ ಪ್ರವೇಶವಾಗುತ್ತಲೇ ಆನೆ ಲಕ್ಷ್ಮೀ ಉಪರಾಷ್ಟ್ರಪತಿಗಳು ಮತ್ತು ಅವರ ಕುಟುಂಬದವರಿಗೆ ಹೂವಿನಹಾರ ಹಾಕಿ ಸನ್ಮಾನಿಸಿತು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ನಮಿಸಿತು.

ನಂತರ ಅವರು ಕಮಲ್ ಮಹಲ್(ಲೋಟಸ್ ಮಹಲ್) ವೀಕ್ಷಣೆಗೆ ತೆರಳಿದರು. ರಾಜ್ಯ ಪುರಾತತ್ವ ಇಲಾಖೆಯ ಕಚೇರಿಯ ಮುಂಭಾಗದಿಂದ ತಮ್ಮ ಕಾರು ಬಿಟ್ಟು ಬ್ಯಾಟರಿ ಚಾಲಿತ ವಾಹನಗಳಲ್ಲಿ ಕುಳಿತು ಲೋಟಸ್ ಮಹಲ್ ವೀಕ್ಷಣೆಗೆ ತೆರಳಿದರು.ಕ್ವೀನ್ಸ್ ಮಹಲ್‍ನ ಬುನಾದಿ ಮತ್ತು ಅದರಲ್ಲಿನ ವಿವಿಧ ಸೂಕ್ಷ್ಮಶಿಲ್ಪಕಲಾ ಕೆತ್ತನೆಗಳನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿದರು. ನಂತರ ಅವರು ಶ್ರೀಮಂತ ಶಿಲ್ಪಕಲೆಯನ್ನು ಮಡಿಲಲ್ಲಿಟ್ಟುಕೊಂಡಿರುವ ಕಮಲ್ ಮಹಲ್‍ನ್ನು ವೀಕ್ಷಿಸಿ ಸಂತಸಪಟ್ಟರು ಮತ್ತು ಅದರ ಇತಿಹಾಸವನ್ನು ಗೈಡ್‍ನಿಂದ ಕೇಳಿ ತಿಳಿದುಕೊಂಡರು ಹಾಗೂ ತಮ್ಮ ಕುಟುಂಬದವರಿಗೂ ಇದರ ಬಗ್ಗೆ ತಮ್ಮ ಮಾತೃಭಾಷೆಯಾಗಿರುವ ತೆಲುಗಿನಲ್ಲಿ ವಿವರಿಸಿದರು.

ನಂತರ ಕೆಲಹೊತ್ತು ಕಲ್ಲಿನ ಆಸನದ ಮೇಲೆ ಕುಳಿತು ಎಳೆನೀರು ಸೇವಿಸಿದ ಉಪರಾಷ್ಟ್ರಪತಿ ದಂಪತಿ ಅಲ್ಲಿಂದ ಹಜಾರರಾಮ ದೇವಾಲಯಕ್ಕೆ ತೆರಳಿದರು. ಹಜಾರರಾಮ ದೇವಾಲಯದಲ್ಲಿ ಕೆತ್ತಲಾಗಿರುವ ರಾಮಾಯಣ ಹಾಗೂ ಇನ್ನೀತಿರ ಹಿಂದೂ ಧಾರ್ಮಿಕ ಸಂಸ್ಕøತಿ ಸಾರುವ ವಿವಿಧ ಸೂಕ್ಷ್ಮಶಿಲ್ಪಕಲಾ ಕೆತ್ತನೆಗಳನ್ನು ತದೇಕಚಿತ್ತದಿಂದ ವೀಕ್ಷಿಸಿ ಅದರ ಬಗ್ಗೆಯೂ ಸಂಪೂರ್ಣ ಮಾಹಿತಿ ಪಡೆದುಕೊಂಡರು ಮತ್ತು ತಮ್ಮ ಕುಟುಂಬದವರೊಂದಿಗೆ ಗ್ರೂಪ್ ಫೋಟೊ ಕೂಡ ತೆಗೆಯಿಸಿಕೊಂಡು ಖುಷಿಪಟ್ಟರು.

ಸಂಗೀತ ಮಂಟಪ,ಕಲ್ಲಿನ ರಥಕ್ಕೆ ಫೀದಾ ಆದ ಉಪರಾಷ್ಟ್ರಪತಿ ಕುಟುಂಬ: ವಿಜಯ ವಿಠ್ಠಲ ಮಂದಿರದಲ್ಲಿನ ಸಂಗೀತ ಮಂಟಪ ಮತ್ತು ಕಲ್ಲಿನ ರಥದ ಶಿಲ್ಪಕಲಾ ಸೌಂದರ್ಯವನ್ನು ವೀಕ್ಷಿಸಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಅವರ ಕುಟುಂಬದವರು ಬೆರಗಾದರು.
ಸಂಗೀತ ಮಂಟಪದ ಕಂಬಗಳಲ್ಲಿ ಹೊರಡುವ ಸ್ವರಗಳ ನಾದವನ್ನು ಉಪರಾಷ್ಟ್ರಪತಿ ದಂಪತಿ ಕಂಬಕ್ಕೆ ಕಿವಿಗೊಟ್ಟು ಕೇಳಿ ಖುಷಿಪಟ್ಟರು.

ಕಲ್ಲಿನ ರಥವನ್ನು ವೀಕ್ಷಿಸಿದರು ಮತ್ತು ತಮ್ಮ ಕುಟುಂಬದವರೊಂದಿಗೆ ಗ್ರೂಪ್ ಫೋಟೊ ತೆಗೆಯಿಸಿಕೊಂಡರು. ವಿಜಯವಿಠ್ಠಲ ಮಂದಿರದಲ್ಲಿರುವ ಕಲ್ಯಾಣ ಮಂಟಪ ಸೇರಿದಂತೆ ಎಲ್ಲ ಮಂಟಪಗಳು ಮತ್ತು ಅಲ್ಲಿರುವ ವೈಭವದ ಶಿಲ್ಪಕಲಾ ಕೆತ್ತನೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ವಿಜಯನಗರ ಸಾಮ್ರಾಜ್ಯದ ಇತಿಹಾಸ ಹಾಗೂ ವಿವಿಧ ಸ್ಮಾರಕಗಳ ಇತಿಹಾಸವನ್ನು ಸಹ ಈ ಸಂದರ್ಭದಲ್ಲಿ ಗೈಡ್‍ಗಳಿಂದ ಕೇಳಿ ತಿಳಿದುಕೊಂಡರು.

ನಂತರ ಅವರು ಪುರಾತತ್ವ ಸರ್ವೇಕ್ಷಣಾ ಇಲಾಖೆ,ಕಂದಾಯ,ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಹಂಪಿಯ ಸ್ಮಾರಕಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳೊಂದಿಗೆ ಫೋಟೊ ತೆಗೆಸಿಕೊಂಡು ಖುಷಿಪಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಎಎಸ್‍ಐ ಅಧೀಕ್ಷಕ ಕಾಳಿಮುತ್ತು ಮತ್ತಿತರರು ಇದ್ದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

7 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

7 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

7 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

7 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

7 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420