ಶರಣಬಸವೇಶ್ವರ ದೇಗುಲಕ್ಕೆ ಉನ್ನತ ಶಿಕ್ಷಣ ಸಚಿವ ಸಿ ಎನ್ ಅಶ್ವತ್ಥನಾರಾಯಣ್ ಭೇಟಿ

0
32

ಕಲಬುರಗಿ; ಉನ್ನತ ಶಿಕ್ಷಣ ಸಚಿವ ಶ್ರೀ ಸಿ.ಎನ್.ಅಶ್ವಥ್ ನಾರಾಯಣ್ ಅವರು ಮಂಗಳವಾರ ಕಲಬುರಗಿ ನಗರದ ಐತಿಹಾಸಿಕ ೧೮ ನೇ ಶತಮಾನದ ಶ್ರೀ ಶರಣಬಸವೇಶ್ವರ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಶರಣಬಸವೇಶ್ವರ ದೇಗುಲದಲ್ಲಿ ಶರಣಬಸವೇಶ್ವರ ವಿದ್ಯಾ ವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ ಅವರು ಕರ್ನಾಟಕ ಸರಕಾರದಲ್ಲಿ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯಂತಹ ಪ್ರಮುಖ ಖಾತೆಗಳ ಸಚಿವರಾದ ಶ್ರೀ ಅಶ್ವಥ್ ನಾರಾಯಣ್ ಅವರನ್ನು ಬರಮಾಡಿಕೊಂಡರು. ಸಚಿವರೊಂದಿಗೆ ಬಿಜೆಪಿ ಎಂಎಲ್‌ಸಿ ಶಶಿಲ್.ಜಿ.ನಮೋಶಿ, ಗುಲಬರ್ಗಾ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ದಯಾನಂದ ಅಗಸರ ಮತ್ತು ಇತರರನ್ನು ದೇಶಮುಖ ಅವರು ಬರಮಾಡಿಕೊಂಡು ಶ್ರಿ ಶರಣಬಸವೇಶ್ವರರು ತಮ್ಮ ಸಂಪೂರ್ಣ ಜೀವನವನ್ನು ನಿರ್ಗತಿಕರಿಗೆ ಮತ್ತು ಸಂಕ?ದಲ್ಲಿದ್ದವರಿಗೆ ನೆರವಾಗಿ ಹೇಗೆ ತ್ಯಾಗ ಮಾಡಿದರು ಹಾಗೂ ಐತಿಹಾಸಿಕ ದೇಗುಲದ ಮಹತ್ವವನ್ನು ವಿವರಿಸಿದರು.

Contact Your\'s Advertisement; 9902492681

ಸಚಿವರು ಶ್ರೀ ಶರಣಬಸವೇಶ್ವರರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ದೇವಾಲಯದ ಸಂಕೀರ್ಣದಲ್ಲಿರುವ ದಾಸೋಹ ಮಹಾಮನೆಗೆ ಭೇಟಿ ನೀಡಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರಿಗೆ ಗೌರವಸಲ್ಲಿಸಿ ಆಶೀರ್ವಾದ ಪಡೆದರು. ಹಾಗೂ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್‌ರಾದ ಮಾತೋಶ್ರೀ ಡಾ ದಾಕ್ಷಾಯಿಣಿ ಅವ್ವಾಜಿಯವರ ಆಶೀರ್ವಾದ ಪಡೆದು ಸಚಿವ ಶ್ರೀ ಅಶ್ವಥ್ ನಾರಾಯಣ್ ತಮ್ಮ ಹಿಂದಿನ ದೇವಸ್ಥಾನ ಮತ್ತು ಮಹಾಮನೆ ಭೇಟಿಯನ್ನು ನೆನಪಿಸಿಕೊಂಡರು ಮತ್ತು ಪೂಜ್ಯ ಅಪ್ಪಾಜಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಮಾಡಿದ್ದಾರೆ ಮತ್ತು ಈ ಕ್ಷೇತ್ರದಲ್ಲಿ ಪೂಜ್ಯ ಅಪ್ಪಾಜಿ ಅವರು ಕೈಗೊಂಡ ಎಲ್ಲಾ ಉಪಕ್ರಮಗಳನ್ನು ರಾಜ್ಯ ಸರಕಾರ ಬೆಂಬಲಿಸುತ್ತದೆ ಎಂದು ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲಕುಮಾರ ಬಿಡವೆ ಅವರು ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ವಿವಿಧ ಚಟುವಟಿಕೆಗಳನ್ನು ವಿವರಿಸಿದರು. ಪೂಜ್ಯ ಡಾ.ಅಪ್ಪಾಜಿಯವರ ಏಕೈಕ ಪ್ರಯತ್ನದಿಂದಾಗಿ ಶರಣಬಸವೇಶ್ವರ ಸಂಸ್ಥಾನ, ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮತ್ತು ಶರಣಬಸವ ವಿಶ್ವವಿದ್ಯಾಲಯದ ವಿವಿಧ ಚಟುವಟಿಕೆಗಳು ಇಡೀ ಪ್ರದೇಶದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಿದೆ ಎಂದು ತಿಳಿಸಿದರು.

ವಿದ್ಯಾವರ್ಧಕ ಸಂಘ ಮತ್ತು ಶರಣಬಸವ ವಿಶ್ವವಿದ್ಯಾಲಯ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಸುಮಾರು ೩೦,೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕೋವಿಡ್-೧೯ ಸಾಂಕ್ರಾಮಿಕ ಸಮಯದಲ್ಲಿ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಅವರು ಸಾವಿರಾರು ಬಡವರಿಗೆ ಹಾಗೂ ನಿರ್ಗತಿಕರಿಗೆ ಅನ್ನ ದಾಸೋಹ ಕೈಗೊಂಡಿದ್ದು, ಆಹಾರ ನೀಡಿದ್ದಾರೆ ಮತ್ತು ಅದು ಇಂದಿಗೂ ತಡೆರಹಿತವಾಗಿ ಮುಂದುವರಿದಿದೆ ಎಂದು ಡಾ.ಬಿಡವೆ ವಿವರಿಸಿದರು.

ಯಾದಗಿರಿ ಜಿಲ್ಲೆಯ ಸುರಪುರದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನ್ಯೂ ಏಜ್ ಇನ್‌ಕ್ಯುಬೇಶನ್ ನೆಟ್ವರ್ಕ್ ಯೋಜನೆಯನ್ನು ಮಂಜೂರು ಮಾಡುವಂತೆ ಕೋರಿ ಪೂಜ್ಯ ಡಾ ಅಪ್ಪಾಜಿ ಅವರು ಸಚಿವರಿಗೆ ಜ್ಞಾಪನಾ ಪತ್ರವನ್ನು ಸಲ್ಲಿಸಿದರು. ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇನ್‌ಕ್ಯುಬೇಶನ್ ನೆಟ್ವರ್ಕ್ ಸ್ಥಾಪನೆಯಾದರೆ ಪರಿಸರ ಸಂಶೋಧನೆಯನ್ನು ನಿರ್ಮಿಸಿಲು ಸಹಾಯವಾಗುತ್ತದೆ. ಈ ತಂತ್ರಜ್ಞಾನದಿಮದ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಜ್ಷಾನ ಮತ್ತು ಕೌಶ್ಯಲವನ್ನು ಹೊಂದಲು ಸಹಾಯವಾಗುತ್ತದಲ್ಲದೆ ನಾವೀನ್ಯತೆ ಮತ್ತು ಉದ್ಯಮಶೀಲತಾ ಪರಿಸರವನ್ನು ಸೃಷ್ಟಿಸುವಲ್ಲಿ ನೆರವಾದಂತಾಗುತ್ತದೆ.

ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಡಾ.ಲಿಂಗರಾಜ ಶಾಸ್ತ್ರೀ, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ, ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ಹಾಗೂ ಮೈಂಡ್ ಸಾಲ್ವಿಟ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದೊಡ್ಡಪ್ಪ ಎಂ ನಿಷ್ಠಿ ಸೇರಿದಂತೆ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here