ಕಳಪೆ ಉದ್ದಿನ ಬೀಜ: ಕಂಗಲಾದ ರೈತರು..! ಮಾಡಿಯಾಳ ರೈತರ ಗೋಳು

0
14

ಆಳಂದ: ಮುಂಗಾರು ಹಂಗಾಮಿನಲ್ಲಿ ಉತ್ತಮ ವಾಣಿಜ್ಯ ಬೆಳೆಯಬೇಕು ಎಂದು ಕನಸ್ಸು ಕಂಡಿದ್ದ ರೈತರಿಗೆ ಈಗ ಬರ ಸಿಡಿಲು ಬಡಿದಂತ್ತಾಗಿದೆ. ಈ ವರ್ಷ ಮುಂಗಾರು ಮಳೆ ಕೂಡ ಸಾಧಾರಣ ಬಂದರೂ ಕೈಗೆ ತುಸು ಹಣ ಕಂಡು ಕೊಳ್ಳುವ ಬಯಕೆ ತಾಲೂಕಿನ ಮಾಡಿಯಾಳ ಗ್ರಾಮದ ರೈತರದು.

ಹೌದು, ಇಂಥ ಆಘಾತಕಾರಿ ಘಟನೆ ಮಾಡಿಯಾಳ ರೈತರಿಗೆ ಎದುರಾಗಿದೆ. ನಿಂಬರ್ಗಾ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ. ಇಲ್ಲಿ ಸುಮಾರು ೩೦ ಎಕರೆ ಪ್ರದೇಶದಲ್ಲಿ ಬೆಳೆದ ಉದ್ದು ಬೆಳೆ ಇದೀಗ ರೈತರಿಗೆ ಕೈಕೊಟ್ಟಿದೆ. ಹಾಗು ಇದಕ್ಕೆ ಕಾರಣ ಕಳಪೆ ಮಟ್ಟದ ಉದ್ದಿನ ಬೀಜಗಳ ಬಿತ್ತನೆ. ಇಂಥ ಕಳಪೆ ಬೀಜ ಬಿತ್ತಿದ ರೈತರು ಕಂಗಾಲಾಗಿದ್ದಾರೆ. ತಮ್ಮ ಹೊಲದಲ್ಲಿ ಒಳ್ಳೆಯ ಫಸಲು ಬರಬಹುದು ಎಂದು ನಿರೀಕ್ಷೆ ಹೊಂದಿದರು. ಆದರೆ ಬಿತ್ತನೆ ಬೀಜಗಳ ಹೊಡೆತದಿಂದ ಈ ತರಹದ ಅನ್ಯಾಯಕ್ಕೆ ಸಿಲುಕಿದ್ದಾರೆ.

Contact Your\'s Advertisement; 9902492681

ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಕಳಪೆ ಬೀಜಗಳ ಮಾರಾಟ ಸದ್ದಿಲ್ಲದೇ ನಡೆಯುತ್ತಿದೆ. ರೈತರಿಗೆ ಮೋಸ ಮಾಡಿ ಹಣ ಗಳಿಸಬೇಕೆಂಬ ಉದ್ದೇಶದಿಂದ ಇಂಥ ವಂಚನೆಯ ಘಟನೆಗಳು ನಡೆಯುತ್ತಿವೆ.

ಚಾಂದಸಾಬ ಸೈಫನಸಾಬ, ಕುಮಾರ ಕಲಶೇಟ್ಟಿ ಹಾಗೂ ಪ್ರಭು ಉಪ್ಪಿನ ಅವರ ಹೊಲದಲ್ಲಿ ಬಿತ್ತಿದ ಉದ್ದಿನ ಕಳಪೆ ಬೀಜಗಳಿಂದ ಇಂದು ಮೋಸ ಹೋಗಿದ್ದಾರೆ. ಹೊಲದಲ್ಲಿ ಉದ್ದು ಬೆಳೆದರೂ ಯಾವುದೇ ತರಹದ ಮೊಗ್ಗು ಕಾಣಿಸಿ ಕೊಂಡಿಲ್ಲ. ಮತ್ತು ಮೊಳಕೆಯೊಡೆದು ಹೂಗಳು ಕೂಡ ಬಿಟ್ಟಿಲ್ಲ. ಹೊಲದಲ್ಲಿ ಬೆಳೆ ಕಾಣಿಸಿ ಕೊಂಡರೂ ಉದ್ದಿನ ಕಾಯಿಗಳೇ ಕಾಣುತ್ತಿಲ್ಲ. ಹೀಗೆ ಮೋಸ ವಂಚನೆಗಳಿಂದ ರೈತರ ಬದುಕು ದುಸ್ತರವಾಗುತ್ತಿದೆ. ಗ್ರಾಮದ ರೈತರಿಗೆ ಆರ್ಥಿಕ ನಷ್ಟವಾಗಿದೆ. ಕೆಲ ಖಾಸಗಿ ಕಂಪನಿಗಳು ಕಳಪೆ ಮಟ್ಟದ ಬಿತ್ತನೆ ಬೀಜಗಳನ್ನು ಆಯಾ ಮಾರಾಟ ಕೇಂದ್ರಗಳಿಗೆ ಸರಬರಾಜು ಮಾಡಿ ರೈತ ಸಮುದಾಯಕ್ಕೆ ವಂಚನೆ ಮಾಡಲಾಗುತ್ತಿದೆ. ಸಂಬಂಧಿಸಿದ ಕೃಷಿ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇಲ್ಲಿಯ ವರೆಗೂ ತಾಲೂಕಾ ಸಹಾಯಕ ಕೃಷಿ ಅಧಿಕಾರಿಗಳು ಚಕಾರವೇ ಎತ್ತಿಲ್ಲ. ಹಾಗೂ ತಪ್ಪಿಸ್ಥ ಬೀಜ ಮಾರಾಟ ಕಂಪನಿ ವಿರುದ್ಧ ಕ್ರಮವೂ ಜರುಗಿಸಿಲ್ಲ ಎಂದು ರೈತರು ದೂರಿದ್ದಾರೆ.

ಇತ್ತೀಚೆಗೆ ಜಿಲ್ಲೆಯ ಕೆಲ ಭಾಗಗಳಲ್ಲಿ ಇದೇ ತರಹದ ಹೆಸರು, ಉದ್ದಿನ ಕಳಪೆ ಬೀಜಗಳು ಬಿತ್ತಿ ಕಹಿ ಅನುಭವಿಸುತ್ತಿದ್ದಾರೆ. ಸದ್ದಿಲ್ಲದೇ ನಡೆಯುತ್ತಿರುವ ಈ ದಂಧಗೆ  ಕೃಷಿ ಅಧಿಕಾರಿ ಮೌನವೇ ಕಾರಣ. ಹೊಲಕ್ಕೆ ಭೇಟಿ: ಮಾಡಿಯಾಳ ಗ್ರಾಮದಲ್ಲಿ ಕಳಪೆ ಮಟ್ಟದ ಉದ್ದಿನ ಬೀಜಗಳ ಬಿತ್ತನೆ ಮಾಡಿದ ಹೊಲಕ್ಕೆ ಸುಷ್ಮಾ ಕಲಕೇರಿ ಅವರು ಭೇಟಿ ನೀಡಿ ಪರಿಶಿಲಿಸಿದರು. ಈ ಕುರಿತು ಆಯಾ ರೈತರೊಂದಿಗೆ ಮಾತನಾಡಿದ ಅವರು, ಕಳಪೆ ಬೀಜ ಮಾರಾಟ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ಆಳಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಕಳಪೆ ಮಟ್ಟದ ಉದ್ದಿನ ಬೀಜಗಳು ಸರಬರಾಜು ಮಾಡಲಾಗಿದೆ. ಉತ್ತಮ ಫಸಲು ಬರುತ್ತದೆ ಎಂಬ ನಿರೀಕ್ಷೆ ಹೊಂದಿದ ರೈತರಿಗೆ ಮೋಸ ಮಾಡಿದಂತ್ತಾಗಿದೆ. ಈ ಕುರಿತು ಪರಿಶೀಲಿಸಿ ಸಂಬಂಧಿಸಿದ ರೈತರಿಗೆ ಬೆಳೆ ಪರಿಹಾರ ಮಂಜೂರು ಮಾಡುಬೇಕು. ಸೈಫನಸಾಬ ಜಮಾದಾರ, ಗ್ರಾಪಂ ಸದಸ್ಯರು, ಮಾಡಿಯಾಳ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here