ಕಲಬುರಗಿ: ಇಲ್ಲಿನ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿ ರಾತ್ರಿ ಮತ್ತು ಬೆಳಗ್ಗಿನ ಜಾವ ಭೂಮಿ ಕಂಪಿಸಿರುವ ಘಟನೆ ಮತ್ತೆ ಸಂಭವಿಸಿದೆ.
ಶುಕ್ರವಾರ ರಾತ್ರಿ ಸುಮಾರು 1 ಗಂಟೆಗೆ ಗಡಿಕೇಶ್ವರ ಗ್ರಾಮ ಮತ್ತು ಪಂಚಾಯಿತ ವ್ಯಾಪ್ತಿಯ ರಾಯಕೋಡ್, ಬುದ್ಧಪುರ, ಚಿಂದಪಳ್ಳಿ, ರುದನೂರ, ಕೇರೊಳ್ಳಿ, ಭಂಟಳ್ಳಿ, ಕಪನೂರ ಹಾಗೂ ಬೆನಕನಳ್ಳಿ ಗ್ರಾಮಗಳಲ್ಲಿ ಭೂಮಿ ಒಳಗೆ ವಿಚಿತ್ರವಾದ ಶಬ್ದ ಕೇಳಿಬಂದಿದ್ದು, ಭೂಮಿ ಕಂಪಿಸಿರುವ ಅನುಭವ ಉಂಟಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.
ಈ ಕುರಿತು ರಾಯಕೋಡ್ ಗ್ರಾಮದ ನಿವಾಸಿ ಲೇಖಕ, ಪದಗಳ ಹಾಡುಗಾರ ಆಸೀಫ್ ಅಲಿ ಮತನಾಡಿ ಭೂಮಿಯ ಒಳಗೆ ಬ್ಲಾಸ್ಟ್ ಆಗುವ ಮತ್ತು ಗಣಿಗಾರಿಕೆ ನಡೆಸುತ್ತಿರುವ ರೀತಿಯಲ್ಲಿ ಶಬ್ದಗಳು ಕೇಳಿಬರುತ್ತಿದೆ. ದೂರ ದೂರದ ವರೆಗೆ ಯಾವುದೇ ಗಣಿಗಾರಿಕೆ ನಡೆಸುವುದ ಕಾಣುತ್ತಿಲ್ಲ ಆದರೆ ಈ ವಿಚಿತ್ರವಾದ ಶಬ್ದ ಮತ್ತು ಭೂಮಿ ಕಂಪಿಸುತ್ತಿರುವುದು ಜನರಲ್ಲಿ ಆತಂಕ ಉಂಟುಮಾಡಿದೆ.
ಪಂಚಾಯಿತ ವ್ಯಪ್ತಿಯಲ್ಲಿನ ಸುತ್ತಮುತ್ತಲಿನ ಹಳ್ಳಿಗಳ ಮನೆಗಳು ಬಿರುಕು ಬಿಟ್ಟಿತ್ತಿವೆ ಜನರಲ್ಲಿ ಭಿತ್ತಿ ಉಂಟಾಗಿದೆ ರಾತ್ರಿಹೊತ್ತಲ್ಲ ಬದುಕು ಅತಂತ್ರವಾಗಿರುವಂತೆ ಕಾಣುತ್ತಿದೆ ಎಂದು ತಿಳಿಸಿದರು.
ಅಗಸ್ಟ್ ತಿಂಗಳಲ್ಲಿ ಮೂರನೇ ಬಾರಿ ಈ ರೀತಿ ಭೂಮಿ ಕಂಪಿಸಿರುವ ಘಟನೆ ಜರುಗಿದ್ದು, ಸಮಸ್ಯೆ ಪರಿಹರಿಸಬೇಕೆಂದು ಜಿಲ್ಲಾ ಉಸ್ತುವಾರಿ ಮಂತ್ರಿ ಮುರಗೇಶ್ ನಿರಾಣಿ ಗೆ ಗ್ರಾಮಸ್ಥರ ನಿಯೋಗ ಭೇಟಿ ನೀಡಿ ಮನವರಿಕೆ ಮಾಡಿ ತಿಳಿಸಲಾಗಿದೆ ಅವರು ಸಚಿವರು ಮುಂದಿನ ವಾರ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಭರವಸೆ ನೀಡಿದ್ದಾರೆ ಎಂದು ಈ ಸಂದರ್ಭದಲ್ಲಿ ಆಸೀಫ್ ತಿಳಿಸಿದ್ದಾರೆ.