ಪ್ರಸೂತಿ, ಸ್ತ್ರೀರೋಗ ತಜ್ಞರ ವಿಚಾರ ಸಂಕಿರಣ

0
13

ಕಲಬುರಗಿ : ನಗರದ ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ಪ್ರಸೂತಿ ಮತ್ತು ಹೆರಿಗೆ ಸಮಯದ ರಕ್ತಸ್ರಾವ ಕುರಿತಂತೆ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಿಂದ ವಿಚಾರ ಸಂಕಿರಣ ಜರುಗಿತು.

ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಕಲಬುರಗಿ ಶಾಖೆ ಅಧ್ಯಕ್ಷರಾದ ಡಾ. ರಾಜಶ್ರೀ ಪಾಲಾದಿ, ಕಾರ್ಯದರ್ಶಿ ಸಂಜನಾ ತಲ್ಲೂರು ಹಾಗೂ ಕೆಬಿಎನ್ ವಿವಿ ಸಿಇಓ ಡಾ. ಪಿಯು ಶಂಕರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ತಜ್ಞ ವೈದ್ಯರು ಪಾಲ್ಗೊಂಡರು.

Contact Your\'s Advertisement; 9902492681

ಬೆಂಗಳೂರಿನ ತಜ್ಞ ವೈದ್ಯರಾದ ಡಾ.ಶೀಲಾ ಮಾನೆ ಮತ್ತು ಡಾ. ಪ್ರಕಾಶ ಮೆಹ್ತಾ ಅವರು ಹೊಸ ಔಷಧೋಪಚಾರ ಕುರಿತಂತೆ ಸವಿಸ್ತಾರ ಮಾಹಿತಿ ನೀಡಿದರು. ಹೆರಿಗೆ ಸಮಯದ ರಕ್ತ ಸ್ರಾವವನ್ನು ತಡೆಗಟ್ಟುವ ಕುರಿತಂತೆ ಹೊಸ ಔಷಧಿ, ಉಪಕರಣ ಇತ್ಯಾದಿ ಕುರಿತು ಚರ್ಚೆ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here