2020-21ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೋಂದಾಯಿಸಲು ಅವಧಿ ವಿಸ್ತರಣೆ

0
15

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2020-2021ನೇ ಸಾಲಿನ ಸೆಪ್ಟಂಬರ್ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕಗಳನ್ನು ವಿಸ್ತಿರಿಸಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಜಾಲತಾಣದ ಶಾಲಾ ಲಾಗಿನ್ ಮೂಲಕ  CCERF,CCEPF CCERR, CCEPR, NSR   ಮತ್ತು   NSPR     ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‍ಲೋಡ್ ಮಾಡಲು 30ನೇ ಆಗಸ್ಟ್ 2021 ರಿಂದ 4ನೇ ಸೆಪ್ಟಂಬರ್ 2021 ರವರೆಗೆ,  ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಚಲನ್ ಮುದ್ರಿಸಿಕೊಳ್ಳಲು ನಿಗದಿಪಡಿಸಿದ 31ನೇ ಆಗಸ್ಟ್ 2021 ರಿಂದ 06ನೇ ಸೆಪ್ಟಂಬರ್ 2021ರವರೆಗೆ ಹಾಗೂ ಪರೀಕ್ಷಾ ಶುಲ್ಕದ ಚಲನ್ ಮುದ್ರಿಸಿಕೊಂಡು ಬ್ಯಾಂಕ್‍ಗೆ  ಜಮೆ ಮಾಡಲು ನಿಗದಿಪಡಿಸಿದ 2ನೇ ಸೆಪ್ಟಂಬರ್2021 ರಿಂದ 08ನೇ ಸೆಪ್ಟಂಬರ್ 2021ರವರೆಗೆ ವಿಸ್ತರಿಸಲಾಗಿದೆ.

2002 ಮತ್ತು ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಪುನರಾವರ್ತಿತ ಅಭ್ಯರ್ಥಿಗಳ  (NSR & NSPR)  ಪರೀಕ್ಷಾ ಶುಲ್ಕವನ್ನು ಹಳೆಯ ಪದ್ದತಿಯಂತೆ ಮಂಡಳಿಯ ನೆಫ್ಟ್ ಚಲನ್ ಮೂಲಕ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಾವತಿಸಲು ನಿಗದಿಪಡಿಸಿದ 2ನೇ ಸೆಪ್ಟಂಬರ್ 2021 ರಿಂದ 08ನೇ ಸೆಪ್ಟಂಬರ್ 2021ರವರೆಗೆ ವಿಸ್ತರಿಸಲಾಗಿದೆ.

Contact Your\'s Advertisement; 9902492681

CCERF, CCEPF, CCERR, CCEPR, NSR  ಮತ್ತು  NSPR   ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನೊಳಗೊಂಡಂತೆ ಶಾಲಾ ಲಾಗಿನ್‍ನಲ್ಲಿ ಸೃಜಿಸಲಾಗುವ ಚಲನ್ ಬಳಸಿಕೊಂಡು ಶುಲ್ಕ ಪಾವತಿಸಿದ ಮೂಲ ಚಲನ್, 2002 ಮತ್ತು ಹಿಂದಿನ ವರ್ಷಗಳ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಪುನರಾವರ್ತಿತ ಅಭ್ಯರ್ಥಿಗಳ   (NSR & NSPR)   ಎಂಎಸ್‍ಎ ಮತ್ತು ಹಿಂದಿನ ಪದ್ದತಿಯಂತೆ ಮಂಡಳಿ ನೆಫ್ಟ್ ಚಲನ್ ಮೂಲಕ ಶುಲ್ಕ ಪಾವತಿಸಿದ ಮೂಲ ಚಲನ್, ನಾಮಿನಲ್‍ರೋಲ್ ಮತ್ತು ಸಂಬಂಧಿಸಿದ ಇತರೆ ದಾಖಲೆಗಳನ್ನು ಮಂಡಳಿಗೆ ಸಲ್ಲಿಸಲು ನಿಗದಿಪಡಿಸಿದ ದಿನಾಂಕ 07ನೇ ಸೆಪ್ಟಂಬರ್ 2021 ರಿಂದ 14ನೇ ಸೆಪ್ಟಂಬರ್ 2021 ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here