ವಿಕಲಚೇತನರು ತುರ್ತಾಗಿ ಅವಶ್ಯಕ ದಾಖಲಾತಿಗಳೊಂದಿಗೆ ಮಾಹಿತಿ ನೀಡಲು ಸೂಚನೆ

0
207

ಕಲಬುರಗಿ: ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಹಾಗೂ ಆಯಾ ತಾಲೂಕು ಮಟ್ಟದಲ್ಲಿ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಮ್.ಆರ್.ಡಬ್ಲ್ಯೂ) ತಾಲೂಕಾ ಪಂಚಾಯತ್ ಕಚೇರಿಗಳಲ್ಲಿ ಜಿಲ್ಲೆಯ ಎಲ್ಲಾ ವಿಕಲಚೇತನರ ಮಾಹಿತಿ ನಮೂದಿಸುವ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ ಎಂದು ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

ವಿಕಲಚೇತನ ಸರ್ಕಾರಿ ನೌಕರರು, ಸಾಮಾನ್ಯ ವಿಕಲಚೇತನರು, ಉದ್ಯೋಗಸ್ಥ ವಿಕಲಚೇತನರು ಹಾಗೂ ವಿಕಲಚೇತನ ವಿದ್ಯಾರ್ಥಿಗಳು ಜಿಲ್ಲೆಯಲ್ಲಿನ ಎಲ್ಲಾ ವಿಕಲಚೇತನರು ತುರ್ತಾಗಿ ತಮ್ಮ ಆಧಾರ ಕಾರ್ಡ್, ರೇಶನ್ ಕಾರ್ಡ್, ವಿಕಲಚೇತನರ ಗುರುತಿನ ಚೀಟಿ ಅಥಾವಾ ಯು.ಡಿ.ಐ.ಡಿ., ಜಾತಿ ಮತ್ತು ಆದಾಯ ಪ್ರಮಾಣ ಪತ್ರ ದಾಖಲೆಗಳೊಂದಿಗೆ ಸಂಪರ್ಕಿಸಬೇಕು. ಎಂ.ಆರ್. ಡಬ್ಲ್ಯೂ, ವಿ.ಆರ್.ಡಬ್ಲ್ಯೂ. ಯು.ಆರ್.ಡಬ್ಲ್ಯೂ ಅವರು ಘೋಷಿಸಿರುವಂತೆ ಜಿಲ್ಲೆಯಲ್ಲಿ 25674 ವಿಕಲಚೇತನರು ಇದ್ದು, ಈವರೆಗೆ ಕೇವಲ 17255 ವಿಕಲಚೇತರ ಮಾಹಿತಿಯು ತಂತ್ರಾಂಶದಲ್ಲಿ ನಮೂದು ಆಗಿರುತ್ತದೆ.

Contact Your\'s Advertisement; 9902492681

ಜಿಲ್ಲೆಯಲ್ಲಿನ ಹಲವಾರು ಜನ ವಿಕಲಚೇತನರು ಸದರಿ ತಂತ್ರಾಂಶದಲ್ಲಿ ಮಾಹಿತಿಯನ್ನು ಆಳವಡಿಸಿಕೊಂಡಿರುವುದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ವಿಕಲಚೇತನರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು ಮತ್ತು ಯೋಜನೆಗಳು ಕಲ್ಪಿಸಿಕೊಡಲು ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ತಂತ್ರಾಂಶದಲ್ಲಿ ಮಾಹಿತಿ ನಮೂದಿಸಿಕೊಳ್ಳದೇ ಇರುವ ವಿಕಲಚೇತನರಿಗೆ ಯೋಜನೆಗಳ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸಹ ಸಾಧ್ಯವಾಗುವುದಿಲ್ಲ.

ಕಲಬುರಗಿ ಜಿಲ್ಲೆಯಲ್ಲಿನ ಎಲ್ಲಾ ವಿಕಲಚೇತನರು ತುರ್ತಾಗಿ ಮೇಲ್ಕಂಡ ದಾಖಲಾತಿಗಳೊಂದಿಗೆ ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಹಾಗೂ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಮ್.ಆರ್.ಡಬ್ಲ್ಯೂ) ತಾಲೂಕಾ ಪಂಚಾಯತ್ ಕಚೇರಿ ಅಫಜಲಪೂರ-(ಮೊಬೈಲ್ ಸಂ.9448808141), ಆಳಂದ-(ಮೊಬೈಲ್ ಸಂಖ್ಯೆ 9741792291), ಚಿತ್ತಾಪೂರ-(ಮೊಬೈಲ್ ಸಂ.9845204328), ಚಿಂಚೋಳಿ-(ಮೊಬೈಲ್ ಸಂ.9880671171), ಜೇವರ್ಗಿ-(ಮೊಬೈಲ್ ಸಂ.9741875881), ಕಲಬುರಗಿ-(ಮೊಬೈಲ್ ಸಂ.9972079714) ಹಾಗೂ ಸೇಡಂ- ಮೊಬೈಲ್ ಸಂಖ್ಯೆ 9902417925) ಗೆ ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂರವಾಣಿ ಸಂಖ್ಯೆ 08472-235222ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here