ಸುರಪುರ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗು ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ದೇವಿಕೇರಾ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ೧೩೨.೧೬ ಲಕ್ಷ ರೂಪಾಯಿಗಳ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ, ಅರಕೇರಾ (ಕೆ) ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ೨೧೯.೯ ಲಕ್ಷ ರೂಪಾಯಿಗಳ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ,ಬಾಚಿಮಟ್ಟಿ ಗ್ರಾಮದಲ್ಲಿ ೧೨.೫೦ ಲಕ್ಷ ರೂಪಾಯಿಗಳ ಜಲ ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿ ಹಾಗು ೨೧೯ ಲಕ್ಷ ರೂಪಾಯಿಗಳಲ್ಲಿ ಬಾಚಿಮಟ್ಟಿಯಿಂದ ಬೆನಕನಹಳ್ಳಿಗೆ ಹೋಗುವ ರಸ್ತೆ ಡಾಂಬರಿಕರಣ ಕಾಮಗಾರಿ, ಆಲ್ದಾಳ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ೨೪೦ ಲಕ್ಷ ರೂಪಾಯಿಗಳ ಪೈಪ್‌ಲೈನ್ ಕಾಮಗಾರಿ ಮತ್ತು ಕೆಕೆಆರ್‌ಡಿಬಿ ಅಡಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಜೊತೆಗೆ ನೂತನವಾಗಿ ನಿರ್ಮಿಸಲಾಗಿರುವ ೨ ಶಾಲಾ ಕೋಣೆಗಳ ಉದ್ಘಾಟನೆಯನ್ನು ನೆರವೇರಿಸಿದರು.
ಈ ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು,ಯಾವುದೇ ಕಾರಣಕ್ಕೂ ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಿ.ಅಲ್ಲದೆ ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಿ, ಉತ್ತಮವಾದ ಕಾಮಗಾರಿ ನಿರ್ಮಿಸಿದರೆ ಜನರು ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ.ಕಾಮಗಾರಿ ಕಳಪೆಯಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ಹನುಮಪ್ಪ ನಾಯಕ (ತಾತಾ),ಮರಿಲಿಂಗಪ್ಪ ಕರ್ನಾಳ,ದೊಡ್ಡ ದೇಸಾಯಿ ದೇವರಗೋನಾಲ,ಸಾಹೇಬಗೌಡ ಪಾಟೀಲ್,ಮಹೇಶ ಪಾಟೀಲ್,ಬಸವರಾಜಸ್ವಾಮಿ ಸ್ಥಾವರಮಠ,ಭೀಮಣ್ಣ ಬೇವಿನಾಳ, ಶರಣು ನಾಯಕ,ರಂಗನಗೌಡ ಪಾಟೀಲ್,ಯಮನಪ್ಪ ಪೂಜಾರಿ,ಮಲ್ಲನಗೌಡ,ದೇವರಾಜ ಮಕಾಶಿ, ಪಿಡಿಒ ಸಂಗೀತ ಸಜ್ಜನ್,ಮಲ್ಕಣ್ಣ ಯಾದವ್,ಯಲ್ಲಪ್ಪ ಕುರಕುಂದಿ,ಬಿಇಒ ಮಹಾದೇವರಡ್ಡಿ,ರಮೇಶ ಬಾಚಿಮಟ್ಟಿ ಸೇರಿದಂತೆ ಅನೇಕರಿದ್ದರು.