ಕಲಬುರಗಿ: ಚುನಾವಣೆಗಳು ಪಾರದರ್ಶನ ಮತ್ತು ಭ್ರಷ್ಟಾಚಾರ ಮುಕ್ತ ನಡೆಯಬೇಕು ಎಂದು ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಸ್ ಸರಡಗಿ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಮತದಾರರು ದುಡ್ಡು, ಸಾರಾಯಿ ಸೇರಿದಂತೆ ಇತರೆ ಆಮಿಷಗಳಿಗೆ ಬಲಿಯಾಗದೆ ವಾರ್ಡ ಅಭಿವೃದ್ಧಿ ಹಾಗೂ ಜನಪರ ಕೆಲಸ ಮಾಡುವ ವ್ಯಕ್ತಿಯನ್ನು ಗುರುತಿಸಿ ಮತ ನೀಡಬೇಕು. ಸಮಾಜದಲ್ಲಿ ಸಾಕಷ್ಟು ಬದಲಾವಣೆ ಆಗಬೇಕಿದೆ. ಜೊತೆಗೆ ಜನರು ಕೊರೊನಾ ಸೇರಿದಂತೆ ಇತರೆ ಬವಣೆಯಿಂದ ಬಳಲುತ್ತಿದ್ದಾರೆ.
ಈ ಎಲ್ಲವುಗಳಿಗೆ ಧ್ವನಿಯಾಗುವ ವ್ಯಕ್ತಿಯನ್ನು ಗುರುತಿಸಿ ಜನರು ಮತ ನೀಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವವರೇ ಪಾಲಿಕೆ ಸದಸ್ಯರು ಆಗಬೇಕು. ಇನ್ಮೇಲೆ ಆದರೂ ಚರಂಡಿ , ರಸ್ತೆ ಸುಧಾರಣೆಗೆ ಕೊಂಚ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವವರು ಸದಸ್ಯರಾದರೆ ಒಳಿತು. ಪಾಲಿಕೆ ಸದಸ್ಯರಾಗ ಬಯಸುವರು ಮೊದಲು ಪ್ರಾಮಾಣಿಕವಾಗಿರಬೇಕು.
ಜನಸೇವೆಗಾಗಿ ಪಾಲಿಕೆಗೆ ಬರಬೇಕೆ ಹೊರತು ಈ ಮೂಲಕ ದುಡ್ಡು ಮಾಡಬೇಕೆನ್ನುವವರು ಬಾರದೇ ಇರುವುದು ಒಳ್ಳೆಯದು. ಅಧಿಕಾರಿಗಳನ್ನು ಹಿಡಿದು ಕೆಲಸಗಳನ್ನು ಮಾಡಿ ತೋರಿಸುತ್ತೇನೆ ಎಂಬ ಬದ್ಧತೆ ಇರಬೇಕು.ಒಟ್ಟಿನಲ್ಲಿ ಮತದಾರರು ಮತದಾನ ಮಾಡುವ ಮೂಲಕ ಭ್ರಷ್ಟಾಚಾರ ಮುಕ್ತ ಮಾಡಬೇಕು ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.