ಕಲಬುರಗಿ: ಸುಳ್ಳಿನಿಂದ ಪಡೆದ ಸ್ಥಾನ, ದರ್ಪದಿಂದ ಸಂಪಾದಿಸಿದ ಗೌರವ, ಮೋಸದಿಂದ ಗಳಿಸಿದ ಹಣ ಎಂದು ಶಾಶ್ವತವಲ್ಲ. ನಾವೂ ಮಾಡುವ ನಿಸ್ವಾರ್ಥ ಸೇವೆಯೆ ಶಾಶ್ವತವಾಗಿರುತ್ತದೆ ಎಂದು ರೋಟರಿ ಕ್ಲಬ್ ಪ್ರೌಢಶಾಲೆಯ ಮುಖ್ಯಗುರುಗಳಾದ ಶಾಂತಮಲ್ಲಪ್ಪ ಪೊಲೀಸ ಪಾಟೀಲ ಹೇಳಿದರು.
ಇಂದು ಎಲ್.ಐ.ಸಿ. (ಸಿ.ಎ.ಬಿ) ಪ್ರತಿನಿಧಿಗಳ ಸಂಘದ ವತಿಯಿಂದ ರೋಟರಿ ಕ್ಲಬ್ ಶಾಲಾ ಆವರಣದಲ್ಲಿ ಮುಖ್ಯಗುರುಗಳಾಗಿ ಪದೋನ್ನತಿ ಹೊಂದಿರುವ ಪ್ರೌಢಶಾಲೆಯ ಮುಖ್ಯ ಗುರುಗಳಿಗೂ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ರಮೇಶ ಹೊಸಪೇಟಿ ಅವರಿಗೂ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಕನಸಿಗೂ ನನಸಿಗೂ ಒಂದೇ ವ್ಯತ್ಯಾಸ, ಕನಸು ಕಾಣಲು ಶ್ರಮವಿಲ್ಲದ ನಿದ್ದೆ ಬೇಕು. ನನಸು ಮಾಡಲು ನಿದ್ದೆಯಿಲ್ಲದ ಶ್ರಮ ಬೇಕು ಅಂದಾಗ ಮಾತ್ರ ಮನುಷ್ಯ ಉನ್ನತ ಮಟ್ಟಕ್ಕೇರುತ್ತಾನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ವೀರಪಾಕ್ಷಪ್ಪ ಚೆಟ್ಟಿ, ಪ್ರತಿನಿಧಿ ಸಂಘದ ಮುಖಂಡರಾದ ರವೀಂದ್ರ ಮೊಕಾಶಿ, ಕಲ್ಲಪ್ಪ ಮಿತ್ರಾ, ಮಲ್ಲಿನಾಥ ಬೆಣ್ಣೆಶಿರೂರ, ಶಿವಶರಣಪ್ಪ ಬಿರಾಳ, ಸಂತೋಷ ದೋಣಿ, ಪರಮೇಶ್ವರ ಚಿಂಚೋಳಿ, ನಿಂಗಮ್ಮ ಸ್ವಾಮಿ, ರಾಜೇಶ್ವರಿ ಜೇವರ್ಗಿ, ಮಶಾಕ ತೊನಸಳ್ಳಿ, ಸಂಗಣ್ಣ ನಾಗಶೆಟ್ಟಿ ಶಿಕ್ಷಕರಾದ ಪಾಂಡುರಂಗ ಕಟಕೆ, ಸಂಘದ ಕಾನೂನು ಸಲಹೆಗಾರರಾದ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಉಪಸ್ಥಿತರಿದ್ದರು.