ಕಲಬುರಗಿ: ಅಟಾರಿ ಬೆಂಗಳೂರು ನಿರ್ದೇಶಕರಾದಡಾ. ವಿ. ವೆಂಕಟ್‌ಸುಬ್ರಮಣ್ಯಯನ್ ಭಾಗವಹಿಸಿ ಸ್ವಾತಂತ್ರೋತ್ಸವದಅಮೃತ ಮಹೋತ್ಸವದ ಅಂಗವಾಗಿ ಹೂ ತೋಟವನ್ನು ಉದ್ಘಾಟಿಸಿದರು.ಕಲ್ಯಾಣಕರ್ನಾಟಕ ಭಾಗಕ್ಕೆ ವೈವಿಧ್ಯಮಯ ಹೂ ತೋಟಗಳು, ಪೌಷ್ಟಿಕ ಕೈ ತೋಟಗಳು ಹಾಗೂ ರೈತರಿಗೆಆಧಾಯತರಬಲ್ಲ ಬೆಳೆ ಯೋಜನೆಯಗಳನ್ನು ರೂಪಿಸಲು ಸಲಹೆ ನೀಡಿದರು.
ಸೆಪ್ಟೆಂಬರ್ ೨ ರಂದು ವಿಶ್ವತೆಂಗು ದಿನಾಚರಣೆಯಾಗಿಆಚರಿಸಲಾಗುತ್ತಿದ್ದು, ಜಗತ್ತಿನಲ್ಲಿತೆಂಗಿಗೆ ವಿಶೇಷ ಸ್ಥಾನಮಾನವಿದೆ.ಏಷ್ಯಖಂಡವು ವೈವಿಧ್ಯಮಯವಾದತೆಂಗು ತಳಿಯನ್ನು ಹೊಂದಿದ್ದು.ಕರ್ನಾಟಕದ ಕರಾವಳಿ, ಮಲೆನಾಡು, ಬಯಲುಸೀಮೆ, ಮೈದಾನ ಪ್ರದೇಶಗಳಲ್ಲಿ ಸ್ಥಳೀಯ ಹವಾಗುಣಕ್ಕೆ ತಳಿಗಳನ್ನು ಬೆಳೆಸಲಾಗುತ್ತಿದೆ.
ಉತ್ತಮಆರೋಗ್ಯಕ್ಕೆಗ್ಲೋಕೋಸ್ ವಿಟಾಮಿನ್ ಖನಿಜಾಂಶವುಳ್ಳ ಎಳೆನೀರು ತಳಿಗಳು ಈಗ ಕರ್ನಾಟಕ ಮತ್ತು ಕೆರಳ ಭಾಗದಲ್ಲಿ ಲಭ್ಯವಿದ್ದು, ಯೋಗ್ಯ ತಳಿಗಳನ್ನು ರೈತರು ಬೆಳೆಸಬಹುದಾಗಿದೆ.ಧಾರ್ಮಿಕ ಕಾರ್ಯಕ್ರಮಗಳಿಗೆ, ದೈನಂದಿನ ಅಡುಗೆ ಪಧಾರ್ಥಗಳಲ್ಲಿ ಹಾಗೂ ಬೇಕರಿ ಉತ್ಪನ್ನಗಳಲ್ಲಿ ತೆಂಗಿನ ಬಳಕೆಯು ಯೇತೆಚ್ಚವಾಗಿ ಬಳಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಐಸಿಎಆರ್-ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥರಾದಡಾ.ರಾಜು ಜಿ. ತೆಗ್ಗಳ್ಳಿ, ಕೃಷಿ ಮಹಾವಿದ್ಯಾಲಯದಡೀನ್ (ಕೃಷಿ)ರಾದಡಾ. ಸುರೇಶ ಪಾಟೀಲ್, ವಲಯ ಸಂಶೋಧನಾಕೇಂದ್ರ ನಿರ್ದೇಶಕರಾದಡಾ.ಎಂ.ಎಂ. ಧನೋಜಿ ಹಾಗೂ ಆವರಣದ ಕೃಷಿ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.