ಬುದ್ಧನ ಮೂರ್ತಿ ಭಗ್ನಗೊಳಿಸಿದ ಘಟನೆ ಖಂಡಿಸಿ ಸುರಪುರ ಬಂದ್ ಯಶಸ್ವಿ

0
53

ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿನ ಬುದ್ಧನ ಮೂರ್ತಿ ಧ್ವಂಸಗೊಳಿಸಿದ ಘಟನೆಯನ್ನು ಖಂಡಿಸಿ ಹಾಗು ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ನೇತೃತ್ವದಲ್ಲಿ ನಡೆಸಿದ ಸುರಪುರ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಬಂದ್ ಅಂಗವಾಗಿ ಗುರುವಾರ ಬೆಳಿಗ್ಗೆಯಿಂದಲೂ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ಬೆಂಬಲ ವ್ಯಕ್ತಪಡಿಸಿದರು.ಬಸ್ ಸಂಚಾರ ಎಂದಿನಂತಿತ್ತು,ಶಾಲಾ ಕಾಲೇಜು ಸರಕಾರಿ ಕಚೇರಿಗಳು ಕಾರ್ಯನಿರ್ವಹಿಸಿದವು. ೧೧ ಗಂಟೆ ವೇಳೆಗೆ ಗವಿ ಬುದ್ಧ ವಿಹಾರದಿಂದ ವಿವಿಧ ಸಂಘಟನೆಗಳ ನೂರಾರು ಸಂಖ್ಯೆಯ ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಬುದ್ಧನ ಮೂರ್ತಿ ಭಗ್ನಗೊಳಿಸಿದ ಘಟನೆಯನ್ನು ಖಂಡಿಸಿದರು ಹಾಗು ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

Contact Your\'s Advertisement; 9902492681

ನಂತರ ಮಹಾತ್ಮ ಗಾಂಧಿ ವೃತ್ತದಲ್ಲಿ ಬಹಿರಂಗ ಸಮಾವೇಶ ನಡೆಸಲಾಯಿತು.ಈ ಸಂದರ್ಭದಲ್ಲಿ ವರಜ್ಯೋತಿ ಬಂತೇಜಿ ಸೇರಿದಂತೆ ಅನೇಕ ಮುಖಂಡರು ಮಾತನಾಡಿ,ವಿಶ್ವಕ್ಕೆ ಶಾಂತಿಯನ್ನು ಬೋಧಿಸಿದ ಮಹಾತ್ಮ ಗೌತಮ್ ಬುದ್ಧನ ಮೂರ್ತಿ ಭಗ್ನಗೊಳಿಸಿರುವುದು ಖಂಡನಿಯ ಮತ್ತು ಹೇಯ ಕೃತ್ಯವಾಗಿದೆ.ಇಂತಹ ಘಟನೆಗೆ ಕಾರಣರಾದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿನ ಕೂಡಲೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.ಇಲ್ಲದೆ ಹೋದಲ್ಲಿ ೬ನೇ ತಾರೀಖು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾವುದು ಎಂದು ಎಚ್ಚರಿಸಿದರು.

ಬುದ್ಧ ವಿಹಾರದಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು ಅಂತವರ ಮೇಲೆ ಕ್ರಮ ಕೈಗೊಳ್ಳುವಂತೆ ಕಳೆದ ೨ ವರ್ಷಗಳಿಂದಲೂ ಇಲ್ಲಿಯ ಪೊಲೀಸರಿಗೆ ಮನವಿ ಮಾಡುತ್ತಾ ಬರುತ್ತಿದ್ದರು,ಪೊಲೀಸರು ನಿರ್ಲಕ್ಷ್ಯ ತೋರಿದ್ದರಿಂದಲೇ ಇಂತಹ ಘಟನೆ ನಡೆಯಲು ಕಾರಣವಾಗಿದೆ. ಆದ್ದರಿಂದ ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು,ಇದರಲ್ಲಿ ಡಿವೈಎಸ್ಪಿಯವರ ನಿರ್ಲಕ್ಷ್ಯ ತುಂಬಾ ಇದೆ ಎಂದು ಹರಿಹಾಯ್ದರು.ಅಲ್ಲದೆ ಈ ಮುಂದೆ ಗವಿ ಬುದ್ಧ ವಿಹಾರಕ್ಕೆ ಶಾಸ್ವತವಾಗಿ ಪೊಲೀಸರ ನಿಯೋಜನೆ ಮಾಡಬೇಕು,ಬುದ್ಧ ವಿಹಾರದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು,ಬುದ್ಧ ವಿಹಾರದ ಸುತ್ತ ತಡೆಗೋಡೆ ನಿರ್ಮಿಸಬೇಕು,ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿದರು.

ನಂತರ ಸರಕಾರಕ್ಕೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹಾಗು ಡಿವೈಎಸ್ಪಿ ಸಂತೋಷ ಬನ್ನೆಟ್ಟಿಯವರ ಮೂಲಕ ಸಲ್ಲಿಸಿದರು.ಪಿಐ ಸುನೀಲಕುಮಾರ ಮೂಲಿಮನಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.ಪ್ರತಿಭಟನೆಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಕ್ರಾಂತಿ,ನಾಗಣ್ಣ ಕಲ್ಲದೇವನಹಳ್ಳಿ,ವೆಂಕಟೇಶ ಹೊಸ್ಮನಿ, ವೆಂಕೋಬ ದೊರೆ,ಮಾನಪ್ಪ ಕಟ್ಟಿಮನಿ,ಮಾಳಪ್ಪ ಕಿರದಹಳ್ಳಿ,ರಾಹುಲ್ ಹುಲಿಮನಿ,ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ರಾಮಣ್ಣ ಕಲ್ಲದೇವನಹಳ್ಳಿ,ಶಿವಮೋನಯ್ಯ ನಾಯಕ,ಶಿವಲಿಂಗ ಹಸನಾಪುರ,ಭೀಮರಾಯ ಸಿಂದಗೇರಿ,ರಾಮು ನಾಯಕ ಅರಳಹಳ್ಳಿ, ಮುಫ್ತಿಸಾಬ್ ಒಂಟಿ,ಮೂರ್ತಿ ಬೊಮ್ಮನಹಳ್ಳಿ, ಅಹ್ಮದ್ ಪಠಾಣ್, ದೇವಿಂದ್ರಪ್ಪ ಪತ್ತಾರ,ಅಬ್ದುಲಗಫೂರ ನಗನೂರಿ,ಗೋಪಾಲ ವಜ್ಜಲ್,ಶ್ರೀಮಂತ ಚಲುವಾದಿ,ಶರಣು ಹಸನಾಪುರ,ಮಹಾದೇವ್ಪ ಬೊಮ್ಮನಹಳ್ಳಿ, ನಿಂಗಣ್ಣ ಗೋನಾಲ,ರವಿ ನಾಯಕ ಬೈರಿಮಡ್ಡಿ, ಧರ್ಮಣ್ಣ ಬಡಿಗೇರ,ಪ್ರಕಾಶ ಆಲ್ಹಾಳ,ಬಸ್ಸಮ್ಮ ಆಲ್ಹಾಳ,ರಾಮಣ್ಣ ಶೆಳ್ಳಗಿ,ಹುಲಗಪ್ಪ ದೇವತ್ಕಲ್,ರಮೇಶ ಅರಕೇರಿ,ಶರಣು ತಳವಾರಗೇರಾ,ಶಿವಶಂಕರ ಬೊಮ್ಮನಹಳ್ಳಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here