ರೊಟರಿ ಕ್ಲಬ್ ಗುಲಬರ್ಗಾ ಉತ್ತರ ವತಿಯಿಂದ ಮೆಗಾ ರಕ್ತದಾನ ಶಿಬಿರ

0
10

ಕಲಬುರಗಿ: ರಕ್ತದಾನ ಮಹಾದಾನ ಬಂದು ಹನಿರಕ್ತ ಮತ್ತೊಂದು ಜೀವಕ್ಕೆ ಉಸಿರು ರಕ್ತದಾನದ ಬಗ್ಗೆ ಭಯಬೇಡ 18 ವರ್ಷದ ಮೇಲ್ಪಟ್ಟ ಆರೋಗ್ಯಯುಕ್ತ ಎಲ್ಲ ಜನರು ರಕ್ತದಾನ ಮಾಡಿ ಜೀವ ಉಳಿಸಬೇಕು ಎಂದು ಪೊಲೀಸ ಆಯುಕ್ತ ಡಾ. ರವಿಕುಮಾರ ವಾಯ್.ಎಸ್. ಹೇಳಿದರು.

ಅವರು ರೊಟರಿ ಕ್ಲಬ್ ಗುಲಬರ್ಗಾ ಉತ್ತರ ವಲಯವು ಮಹಾದಾಸೋಹಿ ಶರಣ ಬಸವೇಶ್ವರ ಟ್ರಸ್ಟ್ ಮತ್ತು ಕಿಚ್ಚ ಸುದೀಪ ಚಾರಿಟೇಬಲ ಟ್ರಸ್ಟ ಜಂಟಿ ಆಶ್ರಯದಲ್ಲಿ ಕಿಚ್ಚ ಸುದೀಪ ರವರ ಜನ್ಮದಿನದ ಪ್ರಯುಕ್ತ ಪಬ್ಲಿಕ ಗಾರ್ಡನನಲ್ಲಿರುವ ರೊಟರಿ ಶಾಲೆಯ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ಆಯೋಜಿಸಿದ್ದ “ಮೆಗಾ ರಕ್ತದಾನ ಶಿಬಿರ” ವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ರೊಟರಿಯ ಉದ್ದೇಶ ರಕ್ತದಾನ ಶಿಬಿರದ ಬಗ್ಗೆ ಪ್ರಾಸ್ತಾವಿಕ ಭಾಷಣವನ್ನು ರೊಟರಿ 3160 ಜಿಲ್ಲೆಯ ನಿಯೋಜಿತ ಗವರ್ನರ ಮಾಣಿಕ ಪವಾರ ನೀಡಿದರು ಅಸಿಸ್ಟೆಂಟ ಗವರ್ನರ ನೃಪತುಂಗ ಜೋನ ರೊಟರಿ ಗುಲಬರ್ಗಾ ಜಯಕುಮಾರ ಮಾಡಗಿಯವರು ಅತಿಥಿಯಾಗಿ ಆಗಮನಿಸಿದ್ದರು ರೊಟರಿ ಕ್ಲಬ್ ಗುಲಬರ್ಗಾ ಉತ್ತರ ವಲಯದ ಅಧ್ಯಕ್ಷರಾದ ರಾಮಕೃಷ್ಣ ಬೊರಾಳಕರ (ರಾಜು ಮಂದಕನಳ್ಳಿ) ಅಧ್ಯಕ್ಷತೆ ವಹಿಸಿದ್ದರು. ಸುಕ್ರತ ಹೆರೂರಕರ ಪ್ರಾರ್ಥಿಸಿದರು, ರಾಮಕೃಷ್ಣ ಬೊರಾಳಕರ ಸ್ವಾಗತಿಸಿದರು, ಕಾರ್ಯದರ್ಶಿ ಡಾ. ಬಾಬುರಾವ ಶೇರಿಕಾರ ನಿರೂಪಿಸಿದರು.

ಮಹಾದಾಸೋಹಿ ಶರಣಬಸವೇಶ್ವರ ಟ್ರಸ್ಟನ ಅಧ್ಯಕ್ಷರಾದ ರೊಟರಿ ರಕ್ತದಾನ ಶಿಬಿರದ ಅಧ್ಯಕ್ಷರಾದ ಶ್ರೀ ಶರಣಬಸಪ್ಪ ಪಪ್ಪಾ ರವರು ವಂದಿಸಿದರು ವೇದಿಕೆಯ ಮೇಲೆ ಕೆ.ಬಿ.ಎನ್. ಮೆಡಿಕಲ್ ಕಾಲೇಜಿನ ರಕ್ತ ನಿಧಿ ಕೇಂದ್ರದ ಅಧಿಕಾರಿಗಳಾದ ಡಾ. ವೈಶಾಲಿ ಇನ್ನ್ರವೀಲ್ ರೊಟರಿ ಕ್ಲಬ್‍ನ ಅಧ್ಯಕ್ಷೆ ಪ್ರಿಯಾಂಕ ಮುಗಳಿ ರೊಟರಿ ಕ್ಲಬ್ ದಕ್ಷಿಣ ಅಧ್ಯಕ್ಷ ಜಗದೀಶ ಗಾಜರೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೊಟರಿ ಕ್ಲಬ ಉತ್ತರದ ಹಿರಿಯ ಸದಸ್ಯರಾದ ಸಂಸತಕುಮಾರ ತಪಾಡಿಯು ಡಾ. ಗಚ್ಚಿನಮನಿ, ಡಾ. ಸದಾಶಿವ ಜಿಡಗೇಕರ, ರವೀಂದ್ರ ಮದಾಮಶೆಟ್ಟಿ, ಬಸವರಾಜ ಖಂಡೆರಾವ ಸುಹಾಸ ಖಣಗೆ, ದೇವಿಂದ್ರಸಿಂಗ ಚೌಹಾಣ, ಪ್ರಶಾಂತ ಮಾನಕರ, ಡಾ. ಸಿದ್ದೇಶ ಸಿರವಾರ, ದಿನೇಶ ಪಾಟೀಲ, ಮಲ್ಲಿಕಾರ್ಜುನ ನಾಗೂರ, ಆನಂದ ದಂಡೋತಿ, ಕಿಚ್ಚ ಸುದೀಪ, ಅಧ್ಯಕ್ಷ ಬಾಬು ಜಳಕಿ, ಕೆ.ಬಿ.ಎನ್. ಆಸ್ಪತ್ರೆಯ ಸತೀಶ ರಜಾಕ ಕೇದಾರ ಪೂಜಾರಿ, ರಾಜೇಂದ್ರ ಹೇಕೂರಕರ, ಉಮಾ ಗಚ್ಚಿನಮನಿ, ಅನುರಾಧಾ ಜಯರಾಮ ಶ್ಯಾನಬೋಗ, ಗೋಪಾಲ ಮಳಖೇಡಕರ ರಮೇಶ ವಗ್ದರ್ಗಿ, ಶಿವಾನಂದ ಬೆಲೂರೆ, ಉಪಸ್ಥಿತರಿದ್ದರು. ಸುಮಾರು 36 ಜನ ರಕ್ತದಾನ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here