ತೊಗರಿಯ ಗೊಡ್ಡು/ಬಂಜೆ ರೋಗ ಹತೋಟಿ

0
20

ನಂಜಾಣುಗಳಿಂದ ಉಂಟಾಗುವತೊಗರಿಯಗೊಡ್ಡುರೋಗವುಅಂತರ್ವ್ಯಾಪಿಯಾಗಿದ್ದುಅಸೆರಿಯಾಕಜಾನಿಎನ್ನುವರಸ ಹೀರುವ ಮೈಟ್ ನುಶಿಗಳಿಂದ ಪ್ರಸಾರವಾಗುವುದು. ಈ ಮೈಟ್ ನುಶಿಗಳು ಗಾಳಿಯ ದಿಕ್ಕಿನಲ್ಲಿ ಗಾಳಿಯ ಜೊತೆರೋಗದ ಸ್ಥಳದಿಂದ ಸುಮಾರು೩ ಕಿ. ಮಿ. ವರೆಗೂ ಪ್ರಸಾರವಾಗುವವು. ರೋಗಾಣು ಮತ್ತು ರೋಗಾಣುವಾಹಕ ಮೈಟ್ ನುಶಿಗಳು ಬಂಜರು ಭೂಮಿ ಮತ್ತು ಹೊಲದಒಡ್ಡಿನ ಮೇಲೆ ಬೆಳೆದ ತೊಗರಿ ಮತ್ತು ಕಾಡು ತೊಗರಿ ಮಾತ್ರ ಮೀಸಲಾಗಿದ್ದು ಬೇರೆ ಬೆಳೆಯ ಮೇಲೆ ಬರುವುದಿಲ್ಲ.

ಬಹು ವಾರ್ಷಿಕತೊಗರಿ, ತಾನಾಗಿಯೇ ಬೆಳೆದ ತೊಗರಿ ಗಿಡಗಳು ಮತ್ತು ಕೂಳೆ ತೊಗರಿಯುರೋಗಾಣುವಿಗೆ ಮತ್ತು ವಾಹಕ ಮೈಟ್ ನುಶಿಗಳಿಗೆ ಆಸರೆ ನೀಡಿರೋಗಾಣುವಿನ ಸಂತತಿ ಮುಂದುವರೆಸಲು ಸಹಾಯವಾಗುವವು. ತೊಗರಿಯನ್ನು ಹೆಚ್ಚು ಎತ್ತರದ ಬೆಳೆಗಳಾದ ಜೋಳ ಮತ್ತು ಸೆಜ್ಜೆಯಜೊತೆಅಂತರ ಬೆಳೆಯಾಗಿ ಬೆಳೆದಾಗ ರೋಗದತೀವ್ರತೆ ಹೆಚ್ಚಾಗುವುದು.

Contact Your\'s Advertisement; 9902492681

ಸಾಮಾನ್ಯವಾಗಿರೋಗದ ಲಕ್ಷಣಗಳು ಬೇಸಿಗೆಯ ಬಿಸಿಲಿನಲ್ಲಿಕಡಿಮೆಯಾಗಿ ಮುಂಗಾರಿನಲ್ಲಿ ಪುನಃ ಮರುಕಳಿಸುವವು.ಬೇಸಿಗೆಯ ನೆರಳು ಮತ್ತುಆರ್ದ್ರತೆ ಮೈಟ್ ನುಶಿಗಳ ಅಭಿವೃದ್ಧಿಗೆ ಸಹಕಾರಿಯಾಗುವವು.ರೋಗ ಬಂದ ಗಿಡಗಳು ಸಾಮಾನ್ಯ ಗಿಡಗಳಂತೆ ಹೂ ಮತ್ತು ಕಾಯಿಗಳಿಲ್ಲದೆ ಹೆಚ್ಚಿನ ಎಲೆಗಳನ್ನು ಹೊಂದಿ ಗೊಡ್ಡಾಗಿ ಉಳಿಯುವುದುಂಟು.ಇಂತಹಗಿಡದ ಎಲೆಗಳು ಸಣ್ಣದಾಗಿದ್ದು ಮೇಲ್ಬಾಗದಲ್ಲಿ ತಿಳಿ ಮತ್ತುದಟ್ಟ ಹಳದಿ ಬಣ್ಣದ ಮೊಸಾಯಿಕ್‌ತರಹದ ಮಚ್ಚೆಗಳನ್ನು ಹೊಂದಿ ಮುಟುರಿಕೊಂಡಿರುತ್ತವೆ.

ರೋಗದ ಪ್ರಾರಂಬಿತ ಹಂತದಲ್ಲಿ – ಮೊಸಾಯಿಕ್ತರಹದ ತಿಳಿ ಹಳದಿ ಬಣ್ಣವುಎಲೆಯ ನರಗಳಗುಂಟ ಪ್ರಸರಿಸಿ ನರಗಳು ಎದ್ದುಕಾಣಿಸುವುವು.ರೋಗದತೀವ್ರತೆಕಡಿಮೆಇದ್ದಾಗ ಎಲೆಗಳು, ತಿಳಿ ಹಳದಿ ಬಣ್ಣವಾಗಿದ್ದು ಮೊಸಾಯಿಕ್ ಲPಣಗಳನ್ನು ಹೊಂದಿರುವುವು.

ಸಮಗ್ರ ನಿರ್ವಹಣಾ ಕ್ರಮಗಳು:ರೋಗಾಣುವಿನ ಆಸರೆ ಸಸ್ಯಗಳಾದ ಬಹುವಾರ್ಷಿಕತೊಗರಿ ಮತ್ತು ಕೂಳೆ ತೊಗರಿ ಬೆಳೆಯನ್ನು ಕಿತ್ತು ನಾಶ ಮಾಡಬೇಕು.ರೋಗದ ಪ್ರಾರಂಭದ ಹಂತದಲ್ಲಿರೋಗ ಬಂದ ಗಿಡಗಳನ್ನು ಕಿತ್ತು ನಾಶ ಮಾಡಬೇಕು.ರೋಗಾಣುವಿನ ಮತ್ತುರೋಗವಾಹಕ ಮೈಟ್ ನುಸಿಗಳ ಪ್ರಮಾಣಕಡಿಮೆ ಮಾಡಲು ಪರ್ಯಾಯ ಬೆಳೆಯಿಂದ ಬೆಳೆಯ ಪರಿವರ್ತನೆ ಮಾಡಬೇಕು.ಈ ರೋಗವನ್ನು ತಡೆದುಕೊಳ್ಳುವ ಅಥವಾ ನಿರೋಧಕ ಶಕ್ತಿ ಹೊಂದಿರುವ ತಳಿಗಳಾದ ಬಿ.ಎಸ್. ಎಂ. ಆರ್-೭೩೬ , ತಳಿ- ೮೧೧ , ತಳಿ-೧೫೨ ಎಂಬ ತಳಿಗಳನ್ನು ಉಪಯೋಗಿಸಬೇಕು., ಬೆಳೆಯ ಪ್ರಾರಂಭಿಕ ಹಂತದಲ್ಲಿಬೇವಿನ ನುಶಿ ನಾಶಕ ೧ ಮಿಲೀ ಪ್ತತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು.

-ಜ಼ಹೀರ್‌ ಅಹಮದ್ ಬಿ., ಮತ್ತು ರಾಜು ಜಿ. ತೆಗ್ಗೆಳಿ ಕೃಷಿ ವಿಜ್ಞಾನಕೇಂದ್ರ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here