ಆಕಾಶ ಮತ್ತಿಮಡು ಜನ್ಮದಿನದ ನಿಮಿತ್ತ ಗೋ ಪೂಜೆ

0
46

ಕಲಬುರಗಿ:ಸಮಾಜದ ಯುವ ಸಮುದಾಯದಲ್ಲಿ ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದ ಸಂಸ್ಕಾರ ಮತ್ತು ಸಂಸ್ಕೃತಿಯ ಜೊತೆಗೆ ಜೀವನದ ಶೈಲಿಯನ್ನು ತಿಳಿಹೇಳುವುದು ಅಗತ್ಯವಾಗಿದೆ ಎಂದು ಸಮಾಜ ಸೇವಕಿ ಜಯಶ್ರೀ ಬಸವರಾಜ ಮತ್ತಿಮಡು ನುಡಿದರು.

ತಮ್ಮ ಸುಪುತ್ರನಾದ ಆಕಾಶ ಮತ್ತಿಮಡು ರವರ ಜನ್ಮದಿನದ ಅಂಗವಾಗಿ ನಗರದ ಹೊರವಲಯದ ಕುಸನೂರ ಗ್ರಾಮದಲ್ಲಿರುವ ಮಾಧವ ಗೋ ಶಾಲೆಯಲ್ಲಿ ತಂಗಾ ಚಾರಿಟೇಬಲ ಟ್ರಸ್ಟ್ ವತಿಯಿಂದ ಆಯೋಜಿಸಿದ ಗೋ ಪೂಜೆ ನೆರವೇರಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಾರತದ ಸನಾತನ ಸಂಸ್ಕೃತಿ ವಿಶ್ವಕ್ಕೆ ಸದಾಕಾಲ ಮಾದರಿಯಾಗಿದ್ದು ಅವಿಭಕ್ತ ಕುಟುಂಬ ವ್ಯವಸ್ಥೆಯಿಂದ ಪರಸ್ಪರ ಬಾಂಧವ್ಯ, ಪ್ರೀತಿ ದೊರೆಯಲಿದ್ದು ಹೀಗಾಗಿ ನಮ್ಮ ಪೂರ್ವಜರು ಅವಿಭಕ್ತ ಕುಟುಂಬಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು.

Contact Your\'s Advertisement; 9902492681

ಉತ್ತಮ ಆಹಾರ, ಸದ್ಭಾವನೆ, ಚಿಂತನೆ, ಕ್ರೀಯಾಶೀಲ ಕಾಯಕದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಧೃಡ ಆರೋಗ್ಯವನ್ನು ಹೊಂದಿ ಸುಂದರ ಸಮಾಜವನ್ನು ನಿರ್ಮಿಸಿದ್ದರೆಂದು ನೆನಪಿಸಿಕೊಂಡ ಅವರು ಇಂದಿನ ಪಾಶ್ಚಾತ್ಯ ಸಂಸ್ಕೃತಿಯಿಂದ ಯುವ ಜನತೆಯ ಜೀವನಶೈಲಿ ಬದಲಾಗಿದ್ದು ಇದರ ಪರಿಣಾಮವಾಗಿ ವಿಷಮಯವಾದ ಆಹಾರ ಸೇವನೆ, ಮಾನಸಿಕ ಒತ್ತಡ, ಖಿನ್ನತೆಯಿಂದ ಬಳಲುತ್ತಿದ್ದಾರೆಂದು ನೊಂದು ನುಡಿದ ಅವರು ಪಾಲಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರವನ್ನು ತಿಳಿಹೇಳುವುದು ಇಂದಿನ ಅತ್ಯಗತ್ಯ ಕಾರ್ಯವಾಗಿದೆ ಎಂದು ಕರೆ ನೀಡಿದರು.

ಗೋವಿನ ಮಹತ್ವ ತಿಳಿಸುವ ಕಾರ್ಯ ನಡೆಯಬೇಕಾಗಿದ್ದು ಗೋವು ಮಾನವ ಕುಲಕ್ಕೆ ಎಲ್ಲವನ್ನೂ ಧಾರೆಯೆರೆದಿದೆ ಎಂದು ಮಾಧವ ಗೋ ಶಾಲಾ ಮುಖ್ಯಸ್ಥರಾದ ಶ್ರೀ ಮಹೇಶ ಬೀದರಕರ ಅಭಿಪ್ರಾಯಪಟ್ಟರು.  ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹುಟ್ಟುಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿಕೊಳ್ಳುವುದಕ್ಕಿಂತ ಸಂಸ್ಕೃತಿ, ಸಂಸ್ಕಾರದಿಂದ ಆಚರಿಸಿಕೊಳ್ಳುವಂತೆ ಮನವಿ ಮಾಡಿದ ಅವರು ಗೋವಿನ ಮಹತ್ವ ಯುವ ಜನತೆಗೆ ತಿಳಿಸುವ ಕಾರ್ಯ ಆಗಬೇಕಾಗಿದ್ದು ರಜೆಯ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ಇಂತಹ ಗೋ ಶಾಲೆಗೆ ಕರೆದುಕೊಂಡು ಬಂದು ಅವರಿಗೆ ತಿಳಿಹೇಳುವ ಕೆಲಸ ಮಾಡಬೇಕಾಗಿದೆ ಎಂದು ನುಡಿದರು.

ಟ್ರಸ್ಟ್ ಸಂಯೋಜಕರೂ ಆಗಿರುವ ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ರಾಜ್ಯ ನಿರ್ದೇಶಕರಾದ ಶ್ರೀ ಸುರೇಶ ಎಸ್. ತಂಗಾ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿಶ್ವಹಿಂದೂ ಪರಿಷತ್‌ನ ಪ್ರಮುಖರಾದ ಅಶ್ವಿನಕುಮಾರ ಧುಮ್ಮನಸೂರ, ಭಾರತೀಯ ಜೈನ ಮಿಲನ ಜಿಲ್ಲಾಧ್ಯಕ್ಷರಾದ ರಾಜೇಂದ್ರ ಕುಣಚಗಿ, ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗಲಿಂಗಯ್ಯ ಮಠಪತಿ, ಮುಖಂಡರಾದ ಬಸವರಾಜ ಚಿತಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here