ಶಹಾಬಾದ:ಅಂಗವಿಕಲರ ವಿಧವಾ ವೇತನ ಹಾಗೂ ಹಿರಿಯ ನಾಗರಿಕರ ವೇತನ ಕಡಿತಗೊಂಡಿದ್ದು, ಅದನ್ನು ಮರು ಆದೇಶ ಮಾಡಿ ಜೋಡಣೆಯಾಗುವಂತೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಶನಿವಾರ ಕಾರ್ಮಿಕ ನಾಯಕ ಸುನೀಲ ಮಾನ್ಪಡೆ ಅವರ ನೇತೃತ್ವದಲ್ಲಿ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಿ ಭಜಂತ್ರಿ ಉಪತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ನಾಯಕ ಸುನೀಲ ಮಾನ್ಪಡೆ, ಅಂಗವಿಕಲರ ವಿಧವಾ ವೇತನ ಹಾಗೂ ಹಿರಿಯ ನಾಗರಿಕರ ವೇತನ ಕಡಿತಗೊಂಡಿದ್ದರಿಂದ ಹಣವಿಲ್ಲದೇ ತೊಂದರೆಗೆ ಈಡಾಗಿದ್ದಾರೆ. ಸಣ್ಣ ಪುಟ್ಟ ಕಾಯಿಲೆಗಳಲ್ಲದೇ, ಬಿಪಿ, ಶುಗರ್‌ದಂತಹ ಕಾಯಿಲೆಗಳಿಗೆ ಮಾತ್ರೆ ತೆಗೆದುಕೊಳ್ಳಲು ಹಣವಿಲ್ಲದಂತಾಗಿ ಅಸಹಾಯಕರಾಗಿದ್ದಾರೆ. ಅಲ್ಲದೇ ಅದಕ್ಕಾಗಿ ತಹಸೀಲ್ ಕಾರ್ಯಾಲಯಕ್ಕೆ ತಿರುಗಿ ತಿರುಗಿ ಸಾಕಾಗಿ ಹೋಗಿದೆ.
ಆದರೂ ಕಡಿಗೊಂಡ ವೇತನವನ್ನು ಮತ್ತೆ ಪ್ರಾರಂಭ ಮಾಡಲು ಅಧಿಕಾರಿಗಳು ಮೀನಾಮೇಷ ನಡೆಸುತ್ತಿರುವುದು ಮಾತ್ರ ದುರಂತ. ಆದ್ದರಿಂದ ಈ ಕೂಡಲೇ ವಯಸ್ಸಾದ ಹಿರಿಯ ಜೀವಿಗಳು ಕಚೇರಿಗೆ ಬರಲು ಸಾಧ್ಯವಾಗುತ್ತಿಲ್ಲ.ಆದ್ದರಿಂದ ಗ್ರಾಮಲೆಕ್ಕಿಗರು ಪ್ರತಿ ಗ್ರಾಮಕ್ಕೆ ಬಂದು ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲು ತಹಸೀಲ್ದಾರರು ಕ್ರಮಕೈಗೊಳ್ಳಬೇಕು.
ಅಲ್ಲದೇ ತಾಲೂಕಿನಲ್ಲಿ ಬರುವ ಅಂಗವಿಕಲ, ವಿಧವಾ ವೇತನ ಸೇರಿದಂತೆ ಯಾವುದೇ ವೇತನಗಳ ಸಮಸ್ಯೆ ಇದ್ದರೇ ಅದನ್ನು ಜನಸ್ಪಂದನಾ ಕಾರ್ಯಕ್ರಮ ಆಯೋಜಿಸುವ ಮೂಲಕ ಸಮಸ್ಯೆಯನ್ನು ಸ್ಥಳದಲ್ಲಿಯೇ ಬಗೆಹರಿಸಿ ಮಾದರಿಯಾದ ಕೆಲಸವನ್ನು ಮಾಡಿಕೊಡಬೇಕು. ಅಂಗವಿಕಲ, ವಿಧವಾ, ವೃದ್ಯಾಪರ ಸಮಸ್ಯೆ ಆಲಿಸಲು ವರ್ಷದಲ್ಲಿ ಕನಿಷ್ಠ ಮೂರು ಬಾರಿ ತಾಲೂಕಾ ಮಟ್ಟದ ಸಭೆ ಕರೆಯಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಿ ಭಜಂತ್ರಿ,ಪ್ರಧಾನ ಕಾರ್ಯದರ್ಶಿ ಸರುಬಾಯಿ ಕುಸಾಳೆ, ಕರವೇ ಅಧ್ಯಕ್ಷ ವಿಶ್ವರಾಜ ಫೀರೋಜಬಾದ, ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಪೂಜಪ್ಪ ಮೇತ್ರೆ, ಕಟ್ಟಡ ಕಾರ್ಮಿಕ ಸಂಘದ ಸಂಚಾಲಕ ನಾಗಪ್ಪ ರಾಯಚೂರಕರ್,ಸಿದ್ದಲಿಂಗ ಪಾಳಾ ಪತರರು ಇದ್ದರು.