ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ 55 ವಾರ್ಡ್ ಗಳಿಗೆ ಶುಕ್ರವಾರ ಮತದಾನ ನಡೆದಿದ್ದು, ವಾರ್ಡ್ ಸಂಖ್ಯೆ 18 ರಲ್ಲಿ ನಕಲಿ ಮತದಾನ ನಡೆದಿದೆ ಎಂದು ಆರೋಪಿಸಿ ಮರು ಮತದಾನ ನಡೆಸಬೇಕೆಂದು ಸಿಪಿಐಎಂ ಅಭ್ಯರ್ಥಿ ಜಿಲ್ಲಾ ಚುನಾವಣಾ ಅಧಿಕಾರಿಗೆ ಮನವಿ ಮಾಡಿದ್ದಾರೆ.
ಮತಗಟ್ಟೆ ಸಂಖ್ಯೆ 144/1ರಲ್ಲಿ ಪುರುಷರು ಒಟ್ಟು ಮತದಾರರು 343 ಇದ್ದು, 360 ಪುರುಷರು ಮತದಾರರು ಮತದಾನ ಚಲಾಯಿಸಿದ್ದಾರೆ ಎಂದು ಸಿಪಿಐಎಂ ಅಭ್ಯರ್ಥಿ ಶಹಾಲಮ ಖುರೆಷಿ ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.
ಆದರಿಂದ ವಾರ್ಡ್ ಸಂಖ್ಯೆ 18ರಲ್ಲಿ ಬಹುತೇಕ ಎಲ್ಲಾ ಮತಗಟ್ಟೆಯಲ್ಲಿ ನಕಲಿ ಮತದಾನ ನಡೆದಿದ್ದು, ಸೋಮವಾರ ನಡೆಯುವ ಮತ ಎಣಿಕೆ ಕಾರ್ಯಾ ಸದರಿ ವಾರ್ಡ್ ನ್ನು ಕೈಬಿಟ್ಟು ಮರು ಮತದಾನ ನಡೆಸಬೇಕೆಂದು ಖುರೆಷಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೇಟಿ ಸೇರಿದಂತೆ ಮುಖಂಡರು ಇದ್ದರು.