ಮಳೆ ನೀರು ಹೊಲಕ್ಕೆ ನುಗ್ಗಿ ಅಪಾರ ಬೆಳೆ ಹಾನಿ

0
43

ಶಹಾಬಾದ: ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿದು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿದ್ದರಿಂದ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.

ಹೊನಗುಂಟಾ, ಶಂಕರವಾಡಿ, ಮರತೂರ, ತೆಗನೂರ, ಮುಗುಳನಾಗಾವ, ಹಳೆಶಹಾಬಾದ, ಮುತ್ತಗಾ ಸೇರಿದಂತೆ ಅನೇಕ ಗ್ರಾಮಗಳ ರಸ್ತೆಯ ಬದಿ, ಹಳ್ಳಕೊಳ್ಳ, ನದಿ ಪಾತ್ರದ ಹೊಲಗಳಿಗೆ ನೀರು ನುಗ್ಗಿದ್ದರಿಂದ ತೊಗರಿ ಬೆಳೆಗಳು ನೀರಿನಲ್ಲಿ ಮುಳಗಿದ್ದರಿಂದ ಬೆಳೆ ಹಾನಿಯಾಗಿದೆ.

Contact Your\'s Advertisement; 9902492681

ಮಳೆಗಾಲದ ಪ್ರಾರಂಭದಲ್ಲಿಯೇ ರೈತರು ಹೆಸರಿನ ರಾಶಿ ಹಂತದಲ್ಲಿ ಮಳೆ ಬಂದು ರೈತರಿಗೆ ಅಪಾರ ನಷ್ಟವಾದ ಬೆನ್ನಲ್ಲೆ ಬುಧವಾರ ಸುರಿದ ಭಾರಿ ಮಳೆಯಿಂದ ಹಳ್ಳದ ನೀರು ಹೊಲಕ್ಕೆ ನುಗ್ಗಿದ್ದು, ಹತ್ತಿ ಹಾಗೂ ತೊಗರಿ ಬೆಳೆ ಸಂಪೂರ್ಣ ಮುಳುಗಿದೆ. ಬಹುತೇಖ ಕಡೆಗಳಲ್ಲಿ ಸೇತುವೆ ಮತ್ತು ಕಲವಟ್‌ಗಳ ಪೈಪುಗಳು ಸಂಪೂರ್ಣ ಮುಚ್ಚಿ ಹೋಗಿದ್ದರಿಂದ ನೀರು ಹಲಗಳಿಗೆ ನುಗ್ಗುತ್ತಿವೆ.ಆದ್ದರಿಂದ ಕಲವಟ್‌ಗಳು ರಸ್ತೆಗೆ ಹೊಂದಿಕೊಂಡಿರುವ ಸಣ್ಣ ಸೇತುವೆಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕಾಗಿದೆ.ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here