ಧರ್ಮ ಸಂಪ್ರದಾಯ, ಅಕ್ಷತೆ, ವರದಕ್ಷಣೆ ಧಿಕ್ಕರಿಸಿ ಮದುವೆ: ಕ್ರಾಂತಿಕಾರಿಗಳ ಬದುಕು ಮದುವೆಯೂ ಹೋರಾಟ

ವಾಡಿ: ಒಂದು ಧ್ಯೇಯ ಮತ್ತು ಸಿದ್ಧಾಂತಕ್ಕಾಗಿ ಹೋರಾಟ ನಡೆಸುವ ಕ್ರಾಂತಿಕಾರಿ ಸಂಗಾತಿಗಳ ಪಾಲಿಗೆ ಕೌಟುಂಬಿಕ ಬದುಕು ಮತ್ತು ವಿವಾಹ ಪ್ರಸಂಗಗಳು ಹೋರಾಟದ ಭಾಗವಾಗಿ ಎದುರಾಗುತ್ತವೆ. ಧಾರ್ಮಿಕ ಸಂಪ್ರದಾಯ, ಮೌಢ್ಯಾಚಾರಣೆ, ಅಂಧಶ್ರದ್ಧೆಗಳಿಂದ ಕೂಡಿರುವ ಆಚರಣೆಗಳನ್ನು ಧಿಕ್ಕರಿಸಿ ವೈಚಾರಿಕ ಚಿಂತನೆಗಳಡಿ ದಂಪತಿಗಳಾಗುವುದೇ ನಿಜವಾದ ಹೋರಾಟ ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಹೇಳಿದರು.

ಹಳಕರ್ಟಿ ಗ್ರಾಮದ ಶ್ರೀವೀರಭಧ್ರೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಸದಸ್ಯ, ಎಐಡಿಎಸ್‌ಒ ವಾಡಿ ನಗರ ಸಮಿತಿ ಅಧ್ಯಕ್ಷ ಗೌತಮ ಪರತೂರಕರ ಹಾಗೂ ಎಐಡಿಎಸ್‌ಒ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ಗೋದಾವರಿ ಅವರ ಸರಳ ಸಾಮಾಜಿಕ ಮದುವೆಯ ಸಂತೋಷಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾಮಾಜಿಕ ಮೌಲ್ಯಗಳು ಕೊಳೆತು ನಾರುತ್ತಿರುವ ಪ್ರಸಕ್ತ ವ್ಯವಸ್ಥೆಯಲ್ಲಿ ಮಾನವ ಮೌಲ್ಯ ಉಳಿಸುವ ಸಾಂಸ್ಕೃತಿಕ ಹೋರಾಟದ ಜತೆಗೆ ಬಂಡವಾಳಶಾಹಿ ಶೋಷಕ ವ್ಯವಸ್ಥೆಯ ಮೂಲಭೂತ ಬದಲಾವಣೆಗೆ ನಿಂತಿರುವ ಮಾರ್ಕ್ಸ್‌ವಾದಿಗಳ ಜೀವನ ಅಷ್ಟು ಸರಳವಾಗಿಲ್ಲ. ವರದಕ್ಷಣೆ ಕೊಟ್ಟು ವಧುವನ್ನು ಖರೀದಿಸುವ ಮದುವೆಗಳು ವ್ಯಾಪಾರ ಎನ್ನಿಸಿಕೊಳ್ಳುತ್ತವೆ. ವರೋಪಚಾರದ ಹೆಸರಿನಲ್ಲಿ ವಧುವಿನ ಪೋಷಕರನ್ನು ಸುಲಿಯುವ ಜನಗಳನ್ನು ಹೆಚ್ಚು ಕಾಣುತ್ತಿದ್ದೇವೆ. ಆದರೆ ಇಲ್ಲಿ ವರದಕ್ಷಣೆ, ವರೋಪಚಾರ, ಸಂಪ್ರದಾಯ, ಅಕ್ಷತೆ, ಮಾಂಗಲ್ಯಧಾರಣೆ, ಭಜಾಭಜಂತ್ರಿ, ಮೆರವಣಿಗೆ, ಆಡಂಬರ ಹೀಗೆ ಯಾವೂದೂ ಇಲ್ಲದೆ ವಿವಾಹ ನಡೆದಿರುವುದ ಕ್ರಾಂತಿಕಾರಕ ಬದಲಾವಣೆಯಾಗಿದೆ. ಇದು ಹೆಣ್ಣು ಮತ್ತು ಗಂಡಿನ ಮಧ್ಯೆ ಆತ್ಮಶಾಕ್ಷಿ ಮತ್ತು ವೈಚಾರಿಕ ಸಮ್ಮಿಲತೆಯಿಂದ ಇಬ್ಬರು ಕ್ರಾಂತಿಕಾರಿ ಸಂಗಾತಿಗಳು ಸತಿಪತಿಗಳಾಗಿದ್ದಾರೆ ಎಂದು ವಿವರಿಸಿದರು.

ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ, ವಾಡಿ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕಾಮ್ರೇಡ್ ಆರ್.ಕೆ.ವೀರಭದ್ರಪ್ಪ, ಶಿಕ್ಷಕಿ ರೇವಮ್ಮಾ ಸತೀಶ, ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ ಭೀಮಾಶಂಕರ ಮಾತನಾಡಿದರು. ಕಟ್ಟಿಮನಿ ಹಿರೇಮಠದ ಶ್ರೀಮುನೀಂದ್ರ ಸ್ವಾಮೀಜಿ, ಎಐಯುಟಿಯುಸಿ ಕಾರ್ಮಿಕ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ ಯಾದಗಿರಿ, ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಕಲಬುರಗಿ ಜಿಲ್ಲಾ ಸಂಚಾಲಕಿ ಎ.ಅಶ್ವಿನಿ, ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಹಣಮಂತ ಎಸ್.ಎಚ್, ಹಿರಿಯರಾದ ಮಲ್ಲಣ್ಣ ಸಾಹು ಸಂಗಶೆಟ್ಟಿ, ಬಸವರಾಜ ಲೋಕನಳ್ಳಿ, ಜಗದೀಶ ಸಿಂಧೆ, ಬಸವರಾಜ ಕೇಶ್ವಾರ, ರಾಘವೇಂದ್ರ ಅಲ್ಲಿಪುರಕರ, ಬಸವರಾಜ ಹೊಸಮನಿ ಸೇರಿದಂತೆ ಪ್ರಗತಿಪರ ಚಿಂತಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ವಿದ್ಯಾರ್ಥಿ ನಾಯಕ ಈರಣ್ಣ ಇಸಬಾ ನಿರೂಪಿಸಿ, ವಂದಿಸಿದರು.

ಮಾಂಗಲ್ಯ ಧರಿಸದೆ ಮದುವೆ: ಧಾರ್ಮಿಕ ಜಾತಿ ಸಂಪ್ರದಾಯಗಳನ್ನು ಧಿಕ್ಕರಿಸಿ ಮದುವೆಯಾದ ಉದಾಹರಣೆಗಗಳು ನಮ್ಮ ಮುಂದೆ ಸಾಕಷ್ಟಿವೆ. ಆದರೆ ಹಳಕರ್ಟಿಯಲ್ಲಿ ನಡೆದ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನಾಕಾರ ಸಂಗಾತಿಗಳಿಬ್ಬರ ಮದುವೆಯಲ್ಲಿ ವರನು ವಧುವಿಗೆ ಮಾಂಗಲ್ಯ ಧಾರಣೆ ಮಾಡದೆ ಆತ್ಮಸಾಕ್ಷಿಯಾಗಿ ಸತಿಪತಿಗಳಾದ ಪ್ರಸಂಗ ನಡೆದಿದೆ. ಹೋರಾಟಗಾರ ಗೌತಮ ಪರತೂರಕರ ಮತ್ತು ವೈಚಾರಿಕ ಚಿಂತಕಿ ಗೋದಾವರಿ ಗುರುವಾರ ಅರತಕ್ಷತೆಗೆ ಆಧ್ಯತೆ ನೀಡದೆ ಪರಸ್ಪರ ಹೂಮಾಲೆ ಬದಲಿಸುವ ಮೂಲಕ ಮದುವೆ ಪೂರ್ಣಗೊಳಿಸಿ ಆಶ್ಚರ್ಯ ಮೂಡಿಸಿದರು.

ಕಾನೂನುಬದ್ಧ ವಿವಾಹ ನೊಂದಣಿಗೆ ಸಹಿ ಹಾಕಿದ್ದ ಇವರಿಗೆ ಅತಿಥಿಗಳ ಪ್ರೋತ್ಸಾಹದಾಯಕ ಭಾಷಣದ ಮಾತುಗಳೇ ಮಂತ್ರಗಳಾದರೆ, ಸಭೀಕರ ಚೆಪ್ಪಾಳಗಳೇ ಅಕ್ಷತೆಗಳಾಗಿ ನವ ಜೋಡಿಗಳನ್ನು ಹರಸಿದವು. ಬಂಧುಗಳಿಂದ ಬಟ್ಟೆ, ಒಡವೆ ಉಡುಗೊರೆ ಸ್ವೀಕರಿಸದೆ ಸರಳತೆ ಮರೆದ ಈ ಕ್ರಾಂತಿಕಾರಿ ದಂಪತಿಗಳು, ಬದಲಾವಣೆಯ ಗಾಳಿ ಬೀಸಿದರು. ಮದುವೆಗೆ ಬಂದವರು ಹುಗ್ಗಿ ಊಟ ಸವಿದು ಹಿಗ್ಗಿದರು.

emedialine

Recent Posts

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

2 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

2 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

4 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

15 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

18 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

18 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420