ಅತ್ಯಾಚಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೀರಾಪೂರ ಕ್ರಾಸ್ ಬಳಿ ಬೃಹತ್ ಪ್ರತಿಭಟನೆ

0
13

ಕಲಬುರಗಿ: ಸಾಬಿಯಾ ಅತ್ಯಚಾರ ಪ್ರಕರಣವನ್ನು ಖಂಡನೀಯ ಎಂದು ಆಕ್ರೋಶ ವ್ಯಕ್ತ ಪಡಿಸಿದ ಪ್ರಭುದ್ಧ ಸಾಂಸ್ಕೃತಿಕ ವೇದಿಕೆ ವತಿಯಿಂದ ನಗರದ ಹೀರಾಪೂರ ವೃತ್ತದ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪರಿಗಳಿಗೆ ಮನವಿ ಸಲ್ಲಿಸಲಾಯಿತು.

ದಿಲ್ಲಿಯ ಸಿವ್ಹಿಲ್ ಡೀಫಿನ್ಸ್ ಪೋಲಿಸ್ ಅಧಿಕಾಯಾಗಿದ್ದ ಸಾಬಿಯಾ ಸೈಪಿ ಎಂಬ ೨೧ ರ ಹರೆಯದ ಯುವತಿಯನ್ನು ಅಪಹರಿಸಿ ೫೦ಕ್ಕೂ ಹೆಚ್ಚು ಬಾರಿ ಸ್ಥನಗಳನ್ನು ಕತ್ತರಿಸಿ ಬರ್ಬರವಾಗಿ ಹತ್ಯೆಗೈದು ಕೋಲೆಗೈದಿರುವುದು ಅತ್ಯಂತ ಹೇಯ, ಪೈಶ್ಯಾಚಿಕ ಕೃತ್ಯವಾಗಿದ್ದು, ಇದನ್ನು ಪ್ರಭುದ್ಧ ಸಾಂಸ್ಕೃತಿಕೆ ವೇದಿಕೆ ಕಲಬುರಗಿ ತೀವೃವಾಗಿ ಖಂಡಿಸುತ್ತದೆ. ಬ್ರಷ್ಠಾಚಾರದೊಂದಿಗೆ ತಳಕು ಹಾಕಿಕೊಂಡಿರುವ ಈ ಘಟನೆಯನ್ನು ಮಟ್ಟಹಾಕಲು ಆರೋಪಿಗಳನ್ನು ರಕ್ಷಿಸಲು ಪೋಲಿಸ್ ಇಲಾಖೆ ಹಾಗೂ ಕೆಲವೊಂದು ಮಾಧ್ಯಮಗಳು ಪ್ರಯತ್ನಿಸುತಿರುವುದು ಕಂಡು ಬರುತ್ತದೆ, ಸರಕಾರದ ಮೌನವು ಇದಕ್ಕೆ ಇನ್ನಷ್ಠು ಪುಸ್ಟಿಯನ್ನು ನೀಡುತ್ತಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸುತ್ತದೆ ಎಂದರು.

Contact Your\'s Advertisement; 9902492681

ಅತ್ಯಾಚಾರಿಗಳಿಗೆ ಸರಕಾರಿ ಯಂತ್ರದ ಬೆಂಬಲದಿಂದಾಗಿ ಇಂದು ಮಹಿಳೆಯರ ಅಭದ್ರತೆ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಭಾರತದ ಮಹಿಳೆಯರ ಪಾಲಿಕೆ ಅತ್ಯಂತ ಅಪಾಯಕಾರಿ ದೇಶವಾಗಿ ಜಾಗತೀಕ ಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ಪ್ರತಿ ೧೫ ನಿಮಿಷಕ್ಕೊಂದು ಅತ್ಯಾಚಾರ ಪ್ರಕರಣ ವರತಿಯಾಗುತ್ತಿವೆ. ಅತ್ಯಾಚಾರಿಗಳು ಸಾಕ್ಷಿ ನಾಶಕ್ಕಾಗಿ ಸಂತ್ರಸ್ಥರನ್ನು ಕೊಲ್ಲುವ ಮಟ್ಟಕ್ಕೆ ಇಳಿದ್ದಿದಾರೆ.

ಯಾಲಯಗಳ ವಿಳಂಬ ನೀತಿಯಿಂದಾಗಿ ಇಂದು ಮಹಿಳಾ ದೌರ್ಜನ್ಯಗಳು ಹೆಚ್ಚಗಲು ಪ್ರಮುಖ ಕಾರಣಗವಾಗಿವೆ. ಆದ್ದರಿಂದ ಸರಕಾರ ಇವುಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಮಹಿಳಾ ಹಕ್ಕನ್ನು ಖಾತ್ರಿ ಪಡಿಸಿಬೇಕೆಂದು ಸಂಘಟನೆಯು ಅಹಗ್ರಹಿಸುವುದರ ಜೊತೆಗೆ ಸರಕಾರವು ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸಿ ತನಿಖೆ ನಡೆಸಬೇಕು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಜಾರಿಗೊಳಿಸಬೇಕೆಂದು ಹಾಗೂ ಸಂತ್ರಸ್ಥರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರವನ್ನು ನೀಡಬೇಕೆಂದು ಸಂಘಟನೆಯು ಆಗ್ರಹಿಸುತ್ತದೆ. ಈ ಅತ್ಯಾಚಾರದ ವಿರುದ್ಧ ರಾಜ್ಯಾದ್ಯಾಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಈ ಪ್ರತಿಭಟನೆಯಲ್ಲಿ ಅಲ್ಲಮಪ್ರಭು ನಿಂಬರ್ಗಾ, ಅನೀಲ್ ತೆಗ್ಗೆ. ಪ್ರಕಾಶ ಔರಾದಕರ್, ಸೋಮಶೇಖರ ಮೇಲ್ಮನಿ, ಅಜೀಂ ಪಟೇಲ್, ಅಸದ್ ಅನ್ಸಾರಿ, ಭೀಮಾಶಂಕರ ದುದನಿ, ಶಿವಕುಮಾರ ಮದ್ರಿ, ರಾಣೋಜಿ, ಬಸವರಾಜ ಸಾಮ್ರಾಟ್, ಸಂತೋಷ್ ನೂಲಾ, ರತ್ನ್ ನಿಂಬಾಳ್ಕರ್, ವಿಠಲ್ ಚಿಕಣಿ, ರಾಹುಲ್ ಹದನೂರ, ಹಣಮಂತ ಇಟಗಾ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here