ದುಡಿಯುವ ವರ್ಗದ ದ್ವನಿ ಕಳಚಿವೆ

0
18

ಕಲಬುರಗಿ: ಜಿಲ್ಲೆಯ ರೈತ , ಕೂಲಿಕಾರ್ಮಿಕರ ದುಡಿಯುವ ವರ್ಗದ ದ್ವನಿಯಾಗಿ ಹಲವು ವರ್ಷಗಳ ಕಾಲ ಅವಿರತ ಜನ ಸಾಮಾನ್ಯರಿಗಾಗಿ, ತೊಗರಿಗೆ ಬೆಂಬಲ ಬೆಲೆಗಾಗಿ,ಮಾಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಮತ್ತು ಕೂಲಿ ಹೆಚ್ಚಳಕ್ಕೆ ಹಲವಾರು ಹೋರಾಟ ನಡೆಸಿದವರು ಸಂಗಾತಿ ಅಶೋಕ ಮ್ಯಾಗೇರಿಯವರು ಅವರ ಅಗಳಿಕೆಯಿಂದ ಕಲಬುರಗಿಯಲ್ಲಿ ದುಡಿಯುವ ವರ್ಗದ ದ್ವನಿಯೊಂದು ಕಳೆದುಕೊಂದುದ್ದೇವೆ ಎಂದು ಜಿಲ್ಲಾ ಪಂಚಾಯತ್ ಮಾಜಿ ವಿರೋಧ ಪಕ್ಷದ ನಾಯಕರಾದ ಶಿವಾನಂದ ಪಾಟೀಲ ಅವರು ಹೇಳಿದರು. ಅಶೋಕ ಮ್ಯಾಗೇರಿಯವರು ಯಾವತ್ತೂ ತಮ್ಮ ವೈಯಕ್ತಿಕ ಬದುಕಿನ ಲಾಭಕ್ಕಾಗಿ ಯಾವತ್ತೂ ಕೈ ಒಡ್ಡಿದವರಲ್ಲ ಯಾವತ್ತೂ ಜನರ ಸಮಸ್ಯೆಗಳ ಬಗ್ಗೆಯೇ ದ್ವನಿಯಾಗಿ ನಿಂತವರು ಅಶೋಕ ಮ್ಯಾಗೇರಿಯವರು ನಿಜವಾದ ಪ್ರಾಮಾಣಿಕ ಹೋರಾಟಗಾರ ಆಗಿದ್ದರು ಎಂದು ಹೇಳಿದರು.

ಶಿವಶರಣಪ್ಪ ಮೂಲೆಗಾಂವ ಉಪನಿರ್ದೇಶಕ ಪದವಿ ಪೂರ್ವ ಶಿಕ್ಷಣ ಇಲಾಖೆ ರವರು ಮಾತನಾಡಿ ಅಶೋಕ ಮ್ಯಾಗೇರಿಯವರು ಜಿಲ್ಲೆಯಲ್ಲಿ ರೈತರ , ಕೂಲಿ ಕಾರ್ಮಿಕರ, ಅದರಲ್ಲಿಯೂ ವಿಶೇಷವಾಗಿ ಉದ್ಯೋಗ ಖಾತ್ರಿ ಯೋಜನೆ ಜಾರಿಗಾಗಿ ಅವಿರತ ದುಡಿದ ಅತ್ಯಂತ ಬದ್ಧತೆಯುಳ್ಳ , ಪ್ರಾಮಾಣಿಕ ಹೋರಾಟನಾಗಿದ್ದ ಇಂದು ಚಳುವಳಿ ನಾಯಕರಿಗೆ ಆ ಬದ್ಧತೆ ಕಡಿಮೆಯಾಗುತ್ತಿದೆ ಎಂದರು.

Contact Your\'s Advertisement; 9902492681

ಅಶೋಕ ಮ್ಯಾಗೇರಿಯವರು ಕಲಬುರಗಿ ಜಿಲ್ಲೆಯ ಚಿತ್ತಾಪುರ , ಶಾಹಬಾದ , ಕಾಳಗಿ , ಚಿಂಚೋಳಿ ತಾಲೂಕಿನಲ್ಲಿ ಹಲವಾರು ಜನಪರ ಹೋರಾಟಗಳನ್ನು ಸಂಘಟಿಸಿ ಜನರ ದ್ವನಿಗಿದ್ದರು ಜಿಲ್ಲೆಯ ವಾಣಿಜ್ಯ ಬೆಳೆ ತೊಗರಿಗೆ ಬೆಂಬಲ ನೀಡಲು ,ಗ್ರಾಮ ಪಂಚಾಯತ್ ಮಟ್ಟದಲ್ಲಿ ಖರೀದಿ ಕೇಂದ್ರ ತೆರೆಯಲು , ಅಂಗನವಾಡಿ ಕಾರ್ಯಕರ್ತೆರ, ಆಶಾ ಕಾರ್ಯಕರ್ತೆರ, ಪಂಚಾಯತ್ ನೌಕರರ ಸಮಸ್ಯೆ ಪರಿಹಾರಕ್ಕಾಗಿ ಹಲವಾರು ಚಳುವಳಿ ಸಂಘಟಿಸಿದ್ದಾರೆ ಎಂದು ಶಾಂತಪ್ಪ ಪಾಟೀಲ ನುಡಿದರು.

ಜಗದೇವಿ ಅಶೋಕ ಮ್ಯಾಗೇರಿಯವರಿಗೆ ೭೦.೦೦೦ ರೂ ಹಾಗೂ ಅಕ್ಕಿ, ತೊಗರಿ ಬೆಳೆ, ಸೇರಿದಂತೆ ಆಹಾರ ಪದಾರ್ಥಗಳನ್ನು ಕೊಡಲಾಯಿತು.ವೇದಿಕೆ ಮೇಲೆ ಜಗದೇವಿ ಅಶೋಕ ಮ್ಯಾಗೇರಿ, ಕ. ರಾ. ಗ್ರಾ.ಪಂ. ನೌಕರರ ಸಂಘ ಮಾಜಿ ಜಿಲ್ಲಾ ಅಧ್ಯಕ್ಷ ಬಾಬುರಾವ ದುತ್ತರಾಗಾಂವ, ಜೇವರ್ಗಿಯ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕ ಅಧ್ಯಕ್ಷ ಸುಭಾಷ ಹೊಸಮನಿ, ಮಲ್ಲಣ್ಣ ಕಾರೊಳ್ಳಿ, ಮಲ್ಲೇಶಿ ಭಜಂತ್ರಿ, ನಾಗರಾಜ ಗೋಗಿ, ಸಾಯಿಬಣ್ಣ ನಿಂಬಾಳ, ಸುನೀಲ ಮಾರುತಿ ಮಾನಪಡೆ, ಮಲ್ಲಣ್ಣಗೌಡ ಪಾಟೀಲ, ವಿಠಲ ಪೂಜಾರಿ,
ಸಿದ್ದಲಿಂಗ ಪಾಳ, ರಾಘವೇಂದ್ರ, ಸೋಮಶೇಖರ್ ಸಿಂಗೆ, ಶಿವಶರಣಪ್ಪ ದನ್ನೂರು, ಅಶೋಕ ಗುಲಗಂಜಿ, ವಿಶ್ವನಾಥ ರಾಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here