ಕೋಟಿ ವೆಚ್ಚದ ಯಾತ್ರಿ ನಿವಾಸಕ್ಕೆ ಶಾಸಕ ರಾಜುಗೌಡ ಶಂಕು ಸ್ಥಾಪನೆ

0
12

ಸುರಪುರ :ತಾಲೂಕಿನ ಮುದನೂರು ಗ್ರಾಮದ ಕಂಠಿ ಕೋರಿಸಿದ್ದೇಶ್ವರ ಶಾಖಾಮಠದ ಹತ್ತಿರ ೨೦೧೯-೨೦ನೇ ಸಾಲಿನ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮಂಜೂರಾದ ೧ಕೋಟಿ ರೂ ವೆಚ್ಚದ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಇತ್ತೀಚೆಗೆ ಶಾಸಕ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜುಗೌಡ ಅವರು ನೆರವೇರಿಸಿದರು,

ಶಂಕುಸ್ಥಾಪನೆ ನೆರವೇರಿಸಿದ ನಂತರ ಅವರು ಮಾತನಾಡಿ ಹಿಂದಿನಿಂದಲೂ ನಾಡಿನ ಅಭಿವೃದ್ಧಿಯಲ್ಲಿ ಮಠ ಮಾನ್ಯಗಳ ಪಾತ್ರ ಬಹಳ ಮಹತ್ವದ್ದಾಗಿದ್ದು ರಾಜ್ಯದ ಅನೇಕ ಮಠಗಳ ಪೀಠಾಧಿಪತಿಗಳು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ನೆರವೇರಿಸುವ ಮೂಲಕ ಸಾಮರಸ್ಯ ಮೂಡಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ ಹೀಗಾಗಿ ಮಠ ಮಾನ್ಯಗಳ ಅಭಿವೃದ್ಧಿ ಕೈಗೊಳ್ಳುವುದು ಸರಕಾರದ ಅತ್ಯಂತ ಆದ್ಯತೆಯ ಕರ್ತವ್ಯವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಈ ಭಾಗಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಯಾತ್ರಿ ನಿವಾಸ ನಿರ್ಮಾಣಗೊಳ್ಳಲಿದ್ದು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ಹೇಳಿದ ಅವರು ಅಧಿಕಾರಿಗಳು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳಬೇಕು ಹಾಗೂ ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ತಿಗೊಳಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಖಾಮಠದ ಪೀಠಾಧಿಪತಿಗಳಾದ ಸಿದ್ಧ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು,ಪ್ರಮುಖರಾದ ಹೆಚ್.ಸಿ.ಪಾಟೀಲ, ಬಿ.ಎಂ.ಅಳ್ಳಿಕೋಟೆ, ಗ್ರಾ ಪಪಂ ಅಧ್ಯಕ್ಷೆ ಕಸ್ತೂರಿಬಾಯಿ ಭೀಮಣ್ಣ, ಗ್ರಾ ಪಂ ಸದಸ್ಯರು ಮುಖಂಡರು ಹಾಗೂ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here