ಸೇಡಂ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಬಜೆಟ್ ಈಗಿರುವ 1,500 ಕೋಟಿ ರೂ.ನಿಂದ 3000 ಕೋಟಿ ರೂ. ಗೆ ಮಾಡಿ ದುಪ್ಪಟ್ಟು ಮಾಡೋದಾಗಿ ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಹುಸಿ ಭರವಸೆ ನೀಡಿದ್ದಾರೆ ಎಂದು ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೋರಡಿಸಿರುವ ಅವರು ಮುಂದಿನ ಆಯವ್ಯಯದಲ್ಲಿ 3000 ಕೋಟಿ ರೂ. ನೀಡುವ ಘೋಷಿಸಿದ್ದಾರೆ.ಆದರೆ ವಾಸ್ತವದಲ್ಲಿ 2020-21ರ ಘೋಷಿತ 1,500 ಕೋಟಿ ರೂ.ನಲ್ಲಿ 1,492 ಕೋಟಿ ಕೊಡೋದಾಗಿ ಹೇಳಲಾಗಿದೆ.
ಈ ಪೈಕಿ ಇದುವರೆಗೂ 373 ಕೋಟಿ ರೂ. ಬಿಡುಗಡೆಯಾಗಿದ್ದು, ವೆಚ್ಚವಾದದ್ದು 363 ಕೋಟಿ ರೂ. ಎಂದು ಹೇಳಿದ ಅವರು ವಾಸ್ತವ ಹೀಗಿದ್ದಾಗ ಕೆಕೆಆರ್‌ಡಿಬಿ ಇನ್ನು ಈ ವರ್ಷದ 1,100 ಕೋಟಿ ರೂ ನಷ್ಟು ಮೊತ್ತದ ಹಣ ಮಾರ್ಚ್ 31 2022 ರೊಳಗೆ ವೆಚ್ಚ ಮಾಡಲು ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ.
ನಮ್ಮ ಕಲ್ಯಾಣಕರ್ನಾಟಕ ಭಾಗದಲ್ಲಿರುವ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು ಎಂದು ಇದೆ ವೇಳೆ ಪ್ರಕಟಣೆಯಲ್ಲಿ ಒತ್ತಾಯಿಸಿದಾರೆ.