ಕಲಬುರಗಿ: ಸಂದರ್ಭದಲ್ಲಿ ಜನಸಾಮಾನ್ಯರು ತೀವ್ರ ಸಂಕಟಕಗಕೀಡಾಗಿದ್ದರೂ ಕೂಡಾ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ತಾನು ನೀಡಿದ ಸಾಲವನ್ನು ಪಾವತಿಸುವಂತೆ ಫಲಾನುಭವಿಗಳಿಗೆ ಪತ್ರ ಬರೆದು ಸೂಚಿಸಿದ್ದನ್ನು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರು ವಿರೋಧಿಸಿದ್ದಾರೆ.
ನಿಗಮ ಬರೆದಿರುವ ಪತ್ರದ ಪ್ರತಿಯನ್ನು ತಮ್ಮ ಟ್ಚಿಟರ್ ಖಾತೆಯಲ್ಲಿ ಹಂಚಿರುವ ಅವರು, ನಿಗಮ ಫಲಾನುಭವಿಗಳಿಗೆ ಸಾಲ ಮರುಪಾವತಿ ಮಾಡವಂತೆ ಒತ್ತಾಯಿಸಿರುವುದು ಸರಿಯಾದ ಕ್ರಮವಲ್ಲ. ಕೋವಿಡ್ ನಿಂದಾಗಿ ಆರ್ಥಿಕ ಸ್ಥಿತಿಗತಿ ಅಧೋಗತಿಗಿಳಿದಿರುವಾಗ ನಿಗಮ ತುಂಬಾ ನಯವಾಗಿ ಹೇಳುವ ಮೂಲಕ ವಸೂಲಿಗೆ ನಿಂತಿದೆ ಎಂದು ಟೀಕಿಸಿದ್ದಾರೆ.
ನಿಗಮಕ್ಕೆ ಹಣ ನೀಡಲು ಸರ್ಕಾರಕ್ಕೆ ಆಗ್ರಹಿಸಿಬೇಕೆ ಹೊರತು ಕಷ್ಟದಲ್ಲಿರುವ ಫಲಾನುಭವಿಗಳಿಗೆ ಅಲ್ಲ ಎಂದು ಅವರು ಆಗ್ರಹಿಸಿದ್ದಾರೆ.