ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲಾಡಳಿತಕ್ಕೆ ಸರಕಾರ ಸೂಕ್ತ ನಿರ್ದೇಶನ ನೀಡಬೇಕು: ಸಂತೋಷ ಚೌದ್ರಿ

0
27

ಕಲಬುರಗಿ: ಇದೀಗ ಮಕ್ಕಳಿಗೆ ಡೆಂಗ್ಯೂ ವಕ್ಕರಿಸುತ್ತಿರೋದು, ಇದು ಡೆಂಗ್ಯೂನಾ ಅಥವಾ ಕೋವಿಡ್ ಮೂರನೇ ಅಲೆನಾ ಅನ್ನೋ ಉದ್ವಿಗ್ನತೆ ಪೋ?ಕರಲ್ಲಿ ಮನೆ ಮಾಡಿದೆ. ಸರ್ಕಾರ ಈ ಭಾಗದ ಜಿಲ್ಲಾಢಳಿತಗಳಿಗೆ ಸೂಕ್ತ ನಿರ್ದೇಶನ ನೀಡಿ ಮುಂದಿನ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಸಂತೋಷ ಚೌದ್ರಿ ಅವರು ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದರು.

ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರೋದ್ರಿಂದ ಡೆಂಗ್ಯೂ, ಮಲೇರಿಯಾ ಹಾಗೂ ವೈರಲ್ ಫೀವರ್ ನಂತಹ ರೋಗಗಳು ಜನರನ್ನ ಬಾಧಿಸುತ್ತಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ರೋಗಗಳು ಹರಡದಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಎಚ್ಚೆತ್ತು ಸ್ವಚ್ಚತೆ ಬಗ್ಗೆ ಹೆಚ್ಚು ಗಮನ ಹರಿಸಬೇಕಿತ್ತು. ಆದರೆ, ಎಲ್ಲೆಂದರಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಅಲ್ಲದೆ ರಸ್ತೆ ಪಕ್ಕದಲ್ಲಿ, ಬಡಾವಣೆಗಳಲ್ಲಿ ಕಸದ ರಾಶಿ ಕಾಣಿಸುತ್ತಿದ್ದು, ಸರಿಯಾಗಿ ಕಸ ವಿಲೇವಾರಿ ಆಗುತ್ತಿಲ್ಲದ ಕಾರಣ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ, ಮಲೇರಿಯಾ, ವೈರಲ್ ಫೀವರ್ ಉಲ್ಬಣಗೊಂಡು ಜನರು ರೋಗಗಳಿಗೆ ತುತ್ತಾಗುವಂತಾಗಿದೆ ಎಂದರು.

Contact Your\'s Advertisement; 9902492681

ಕೊರೊನಾ ಮೂರನೇ ಅಲೆ ವಕ್ಕರಿಸುತ್ತೆ ಅನ್ನೋ ಆತಂಕದಲ್ಲಿರುವಾಗಲೇ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಇದೀಗ ವೈರಲ್ ಫೀವರ್ ಜೊತೆಗೆ ಡೆಂಗ್ಯೂ ಹಾವಳಿ ಶುರುವಾಗಿದ್ದು, ಆಸ್ಪತ್ರೆಗಳ ಬೆಡ್ ಫುಲ್ ಆಗಿ ಜನ ತತ್ತರಿಸಿ ಹೋಗುತ್ತಿದ್ದಾರೆ.

ಕಲ್ಯಾಣ ಕರ್ನಾಟಕದ ೬ ಜಿಲ್ಲೆಗಳಲ್ಲಿ ಎಲ್ಲಿ ನೋಡಿದ್ರು ಆಸ್ಪತ್ರೆಗಳು ಬಹುತೇಕ ಭರ್ತಿಯಾಗಿವೆ. ಕಲಬುರಗಿ ಜಿಲ್ಲೆಯೊಂದರಲ್ಲೇ ಒಂದೆ ತಿಂಗಳಲ್ಲಿ ಬರೋಬ್ಬರಿ ೧೫೮ ಜನರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಅದರಲ್ಲಿ ಶೇಕಡಾ ೫೦ ರ? ಮಕ್ಕಳು ಡೆಂಗ್ಯೂನಿಂದ ಬಳಲುತ್ತಿದ್ದಾರೆ ಅನ್ನೋದು ಪೋ?ಕರಲ್ಲಿ ಆತಂಕ ಮೂಡಿಸಿದಂತಾಗಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here