ಸುರಪುರ: ಬೌಧ್ಧ ಧರ್ಮಿಯರಾದವರಿಗೆ ಮಹಾತ್ಮ ಗೌತಮ್ ಬುದ್ಧರು ತಿಳಿಸಿದ ಪಂಚಶೀಲ ಪಠಣ ಮುಖ್ಯವಾಗಿದೆ ಎಂದು ಸಾರಿಪುತ್ರ ಬಂತೇಜಿ ತಿಳಿಸಿದರು.
ನಗರದ ಬುದ್ಧ ವಿಹಾರದ ಬಳಿಯ ಭೀಮರಾಯ ಸಿಂದಗೇರಿ ನಿವಾಸದಲ್ಲಿ ಭಾನುವಾರ ನಡೆದ ವರ್ಷ ವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಂತೇಜಿ,ಜಗತ್ತಿನ ಪುರಾತನ ಧರ್ಮಗಳಲ್ಲೊಂದಾದ ಬೌಧ್ಧ ಧರ್ಮವು ಗೌತಮ್ ಬುದ್ಧರು ಲೋಕದ ಜನರ ಒಳಿತಿಗಾಗಿ ನೀಡಿದ ಕೊಡುಗೆಯಾಗಿದೆ.ಬೌದ್ಧನಾದವರು ಮಹಾತ್ಮ ಗೌತಮ್ ಬುದ್ಧರು ನೀಡಿದ ಧರ್ಮ ಸಂದೇಶವನ್ನು ಅರಿತುಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಮುಂದಿನ ಪೀಳಿಗೆಗೂ ಅದನ್ನು ಪಾಲಿಸುವುದನ್ನು ಕಲಿಸಬೇಕು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಭಗವಾನ್ ಬುದ್ಧ ಹಾಗು ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಧಮ್ಮ ವಂದನೆ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಭೀಮರಾರ ಸಿಂದಗೇರಿ ದಂಪತಿಗಳು ವಿಶೇಷ ಪೂಜಾ ಕಾರ್ಯಕ್ರಮ ನಡೆಸಿದರು.ಮುಖಂಡರಾದ ನಾಗಣ್ಣ ಕಲ್ಲದೇವನಹಳ್ಳಿ,ರಾಹುಲ್ ಹುಲಿಮನಿ,ವೆಂಕೋಬ ದೊರೆ,ಯಲ್ಲಪ್ಪ ಕಾಡ್ಲೂರ,ರವಿಕುಮಾರ ನಾಯಕ ಬೈರಿಮಡ್ಡಿ,ವಾಸುದೇವ ಗಂಗಿ, ಶರಣು ಹಸನಾಪುರ,ಆಕಾಶ ಕಟ್ಟಿಮನಿ,ಧiರಾಜ ಬಡಿಗೇರ,ಸೋಫಿಸಾಬ ಕುಂಬಾರಪೇಟ,ಎಮ್.ಪಟೇಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.