ಕಲಬುರಗಿ: ಪುರಾತನ ಕುರುಹುಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸುವ ಮೂಲಕ ಪ್ರಸಿದ್ಧ ಪ್ರವಾಸಿ ತಾಣವನ್ನಾಗಿಸಲಾಗುವುದು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರು ತಿಳಿಸಿದರು.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಪ್ರವಾಸೋದ್ಯಮ ಇಲಾಖೆ, ತಹಶೀಲ್ದಾರರು ಕಮಲಾಪೂರ ಹಾಗೂ ಇನ್ ಟ್ಯಾಕ್ ಕಲಬುರಗಿ ಇವರ ಸಹಯೋಗದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಸೋಮವಾರ ಕಮಲಾಪೂರ ತಾಲೂಕಿನ ಹೊಳಕುಂದಾ ಗ್ರಾಮದಲ್ಲಿ “ಸ್ವಚ್ಛತಾ ಪಕ್ವಾಡಾ” ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಹೊಳಕುಂದಾದ ೧೫ನೇ ಶತಮಾನದ ಸೂಫಿ-ಸಂತರ ಸ್ಮಾರಕಗಳ ಈ ಸ್ಥಳ ಅಭಿವೃದ್ಧಿಗೆ ಕಳೆದ ಬಾರಿ ೧೫ ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿತ್ತು. ಆದರೆ, ಆಡಳಿತದ ಕಾರಣಾಂತರಗಳಿಂದ ಅನುದಾನದ ಕಾರ್ಯ ನೆರವೇರಲಿಲ್ಲ. ಇದೀಗ ಮಾನ್ಯ ಪ್ರವಾಸೋದ್ಯಮ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಆನಂದ ಸಿಂಗ್ ಅವರ ಗಮನಕ್ಕೆ ತಂದು, ಈ ಸ್ಥಳದ ಅಭಿವೃದ್ಧಿಗೆ ೧೨ ಕೋಟಿ ರೂ. ಮಂಜೂರು ಮಾಡಿಸುವುದಾಗಿ ಹೇಳಿದರು. ಮುಂದಿನ ೧೫ ದಿನಗಳಲ್ಲಿ ಪ್ರವಾಸೋದ್ಯಮ ಸಚಿವರನ್ನು ಹೊಳಕುಂದಾ ಗ್ರಾಮದ ಸ್ಮಾರಕ ಪ್ರವಾಸಿ ಸ್ಥಳಕ್ಕೆ ಆಹ್ವಾನಿಸಿ, ಇಲ್ಲಿನ ಅಭಿವೃದ್ಧಿ ಬಗ್ಗೆ ಅವರಿಗೆ ಮನವರಿಕೆ ಮಾಡಲಾಗುವುದು ಎಂದರು.
ಈ ಬಾರಿಯ ವಿಶ್ವ ಪ್ರವಾಸೋದ್ಯಮ ದಿನಾಚರಣೆ-೨೦೨೧ರ ಘೋ?ವಾಕ್ಯವಾದಂತೆ ಸುಸ್ಥಿರ ಹಾಗೂ ಅಂತರ್ಗತ ಬೆಳವಣಿಗೆಗೆ ಪ್ರವಾಸೋದ್ಯಮ ಸಂದೇಶದಡಿಯಲ್ಲಿ ಬೆಳಕಿಗೆ ಬಾರದ ಪ್ರವಾಸಿ ತಾಣಗಳನ್ನು ಗುರುತಿಸಲಾಗುವುದು ಎಂದರಲ್ಲದೇ, ಬಳಿಕ ಸ್ಮಾರಕದ ಆವರಣದಲ್ಲಿನ ಹುಲ್ಲುಹಾಸನ್ನು ತೆಗೆದು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ನಮ್ಮ ಕ್ಷೇತ್ರದಲ್ಲಿನ ಪ್ರತಿ ಪ್ರವಾಸಿ ತಾಣಗಳ ಅಭಿವೃದ್ಧಿಯನ್ನು ಪ್ರಾಮಾಣಿಕವಾಗಿ ಮಾಡಲಾಗುವುದು. ಪ್ರವಾಸಿ ಸ್ಥಳಗಳಲ್ಲಿ ನೀರು, ಚರಂಡಿ, ವಿದ್ಯುತ್ ಪೂರೈಕೆ ಸೇರಿದಂತೆ ಅಗತ್ಯ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳ ಹಾಗೂ ಸಂಬಂಧಿಸಿದ ಇಲಾಖೆಯೊಂದಿಗೆ ಜೊತೆಗೂಡಿ ಶ್ರಮಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ರಿತೇಂದ್ರನಾಥ್ ಸುಗೂರ ಅವರು ಪ್ರಸ್ತ್ತಾವಿಕ ನುಡಿಗಳನ್ನಾಡಿ, ಕಲಬುರಗಿ ಜಿಲ್ಲೆಯು ಅತ್ಯಂತ ವೈಶಿ?ತೆಯಿಂದ ಕೂಡಿದ್ದು, ಕಲ್ಯಾಣ ಕರ್ನಾಟಕ ಭಾಗದ ಶಕ್ತಿ ಕೇಂದ್ರವಾಗಿದೆ. ಸೂಫಿ-ಸಂತರು, ಶರಣರ ಬೀಡು ಕಲಬುರಗಿಯಲ್ಲಿ ಅಧಿಕ ಐತಿಹಾಸಿಕ ಸ್ಥಳಗಳಿದ್ದು, ಹೆಚ್ಚೆಚ್ಚು ಅಭಿವೃದ್ಧಿ ಮಾಡಬೇಕಿದೆ ಎಂದರು.
ಬೆಳಕಿಗೆ ಬಾರದ ಹಲವು ಐತಿಹಾಸಿಕ ಸ್ಥಳಗಳಿದ್ದು, ಅಂತಹ ವೈವಿಧ್ಯತೆಯಿರುವ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಧ್ಯೇಯ ಸರ್ಕಾರದ್ದಿದೆ ಎಂದರು. ಅಲ್ಲದೇ, ಕಲಬುರಗಿಯಲ್ಲಿ ೩೨ ವಿವಿಧ ಐತಿಹಾಸಿಕ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಕೂಡಲೇ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಯಕೈಗೊಳ್ಳಲಾಗುವುದು ಎಂದು ಅಭಿಪ್ರಾಯಪಟ್ಟರು.
ಇದೇ ಸಚಿದರ್ಭದಲ್ಲಿ ಇತಿಹಾಸ ತಜ್ಞ ಪ್ರೊ.ಎಸ್.ಎಸ್.ವಾಣಿ ಅವರು ಉಪನ್ಯಾಸ ನೀಡುತ್ತಾ, ಬಹಮನಿ ಆಳ್ವಿಕೆ ಕಾಲದಲ್ಲಿ ನಿರ್ಮಾಣವಾದ ಈ ಹೊಳಕುಂದಾ ಗ್ರಾಮದ ೮ ಸ್ಮಾರಕಗಳ (ಗೊಮ್ಮಟ) ಐತಿಹ್ಯ, ವಿಶೇ?ತೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೊಳಕುಂದಾ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಭೀಮಬಾಯಿ ಹಣಮಂತ, ಉಪಾಧ್ಯಕ್ಷ ಶಾಂತವೀರ ಸೂರ್ಯಕಾಂತ, ತಹಶೀಲ್ದಾರ್ ಅಂಜುಮ್ ತಬಸುಮ, ಪ್ರಾವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಪ್ರಭುಲಿಂಗ ಎಸ್.ತಳಕೇರಿ, ಪಿಎಸ್ ಐ ಹುಸೇನ್ ಭಾ?, ಪ್ರವಾಸಿ ಅಧಿಕಾರಿ ಸಂಜಯ್ ಕುಮಾರ್ ಸೇರಿದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿದ್ದರು.