ಚಿತ್ತಾಪುರ: ಬ್ರಿಟಿಷರ ಆಳ್ವಿಕೆಯನ್ನು ಮಹಾತ್ಮ ಗಾಂಧಿಯವರು ಅನೇಕ ಉಪವಾಸ ಸತ್ಯಾಗ್ರಹ, ಹೋರಾಟ ಮಾಡಿ ಅಹಿಂಸಾ ಮಾರ್ಗ ಅನುಸರಿಸಿ ದೇಶವನ್ನು ಸ್ವಾತಂತ್ರ್ಯಗೊಳಿಸಿದರು ಎಂದು ತಹಶೀಲ್ದಾರ ಉಮಾಕಾಂತ ಹಳ್ಳೆ ಅವರು ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯಲ್ಲಿ 152 ನೇ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ದಿ.ಲಾಲ್ ಬಹದ್ದೂರ್ ಶಾಸ್ತ್ರಿ ಅವರ 117 ನೇ ಜನ್ಮ ದಿನದ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ನೆರೆವೇರಿಸಿ ಮಾತನಾಡಿದ ಅವರು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರು ಮಹಾಚೇನಗಳು ಇಬ್ಬರ ಮಹಾವ್ಯಕ್ತಿಗಳ ಜನ್ಮದಿನ ಒಂದೇ ದಿನ ಇರುವುದು ಸಂತಸದ ಸಂಗತಿ. ಈ ಮಹಾನ್ ವ್ಯಕ್ತಿಗಳ ಜೀವನದ ಆದರ್ಶಗಳನ್ನು ನಾವು ಅಳವಡಿಸಿಕೊಂಡು ಜೀವನ ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಶ್ವಥನಾರಾಯಣ್,ಸುನೀಲ್ ಯನಗುಂಟಿಕರ್,ಮಲ್ಲಿನಾಥ ಹೊನ್ನಳ್ಳಿ,ನಾಗರಾಜ ನಾರ್ನಾಳ್,ಸಂತೋಷಕುಮಾರ್ ಶಿರನಾಳ, ಉದಯಸಾಗರ್,ಸಂಗಾರೆಡ್ದಿ, ಗಿರೀಶ್ ಬೊಮ್ಮನಹಳ್ಳಿಕರ್,ಎಸ್.ಪಿ.ಸಾತನೂರಕರ್ ಸೇರಿದಂತೆ ಹಲವಾರು ಇದ್ದರು.