ಡಿಎಸ್‌ಎಸ್ ಅಂಬೇಡ್ಕರ್ ವಾದ: ದಲಿತ ಚಳವಳಿಯ ಅವಲೋಕನ ಕಾರ್ಯಕ್ರಮ

0
10

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯಿಂದ ನಗರದ ಟೈಲರ್ ಮಂಜಿಲ್‌ನಲ್ಲಿ ಅಂಬೇಡ್ಕರ್‌ರ ತಾತ್ವಿಕ ಚಿಂತನೆಗಳು ಮತ್ತು ನಾಲ್ಕು ದಶಕಗಳ ದಲಿತ ಚಳವಳಿಯ ಒಂದು ಅವಲೋಕನ ಹಾಗು ತಾಲೂಕು ಸರ್ವ ಸದಸ್ಯರ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಸಂಘಟನೆ ವಿಭಾಗೀಯ ಪ್ರಧಾನ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ಮಾತನಾಡಿ,ದಲಿತ ಸಂಘಟನೆಗಳು ಡಾ: ಬಾಬಾ ಸಾಹೇಬ್ ಅಂಬೇಡ್ಕರರು ಹಾಕಿಕೊಟ್ಟ ಮಾರ್ಗದಲ್ಲಿ ದೇಶದಲ್ಲಿನ ಎಲ್ಲಾ ಬಹುಜನರಿಗಾಗಿ ಹೋರಾಟ ಮಾಡುತ್ತಾ ಬಂದಿವೆ,ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿ ಹೋರಾಟವನ್ನು ನಡೆಸುತ್ತಿಲ್ಲ ಎಂದರು.ಅಲ್ಲದೆ ಎಲ್ಲರು ಮುಂದೆಯೂ ಬಾಬಾ ಸಾಹೇಬರ ಆದರ್ಶಗಳನ್ನು ಅರಿತು ಅವುಗಳನ್ನು ಮೈಗೂಡಿಸಿಕೊಂಡು ಹೋರಾಟ ನಡೆಸುವುದರ ಜೊತೆಗೆ ಸಂಘಟನೆಯನ್ನು ತಾತ್ವಿಕ ನೆಲೆಗಟ್ಟಿನಲ್ಲಿ ಕಟ್ಟಬೇಕೆಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಜಿಲ್ಲಾ ಪ್ರಧಾನ ಸಂಚಾಲಕ ಮರುಳಸಿದ್ಧ ನಾಯ್ಕಲ್ ಮಾತನಾಡಿ,ನಾವೆಲ್ಲರು ಹಿಂದಿನ ಹಿರಿಯರು ಹಾಕಿಕೊಟ್ಟ ಆದರ್ಶಗಳನ್ನು ಅರಿತುಕೊಂಡು ಜಿಲ್ಲೆಯಲ್ಲಿ ಮಾದರಿ ಸಂಘಟನೆಯನ್ನು ಕಟ್ಟಬೇಕಿದೆ.ಕೇವಲ ದಲಿತ ಮಾತ್ರವಲ್ಲದೆ ಯಾವುದೇ ಸಮುದಾಯದ ಸಮಸ್ಯೆ ಮತ್ತು ನೋವಿಗೆ ಸ್ಪಂಧಿಸುವ ಮೂಲಕ ಸಮಾಜಮುಖಿಯಾಗಿ ಹೋರಾಟಗಳನ್ನು ನಡೆಸೋಣ ಎಂದರು.

ಜಿಲ್ಲಾ ಉಪ ಪ್ರಧಾನ ಸಂಚಾಲಕ ಮಾಳಪ್ಪ ಕಿರದಹಳ್ಳಿ ಮಾತನಾಡಿ,ದೇಶದಲ್ಲಿ ದಲಿತ ಸಂಘಟನೆಗಳು ಈ ಹಿಂದೆ ಐಕ್ಯತೆಯ ಭಾವದಲ್ಲಿ ಹೋರಾಟವನ್ನು ನಡೆಸುತ್ತಿದ್ದವು,ಆದರೆ ಇತ್ತೀಚೆಗೆ ಸಂಘಟನೆಗಳು ತಮ್ಮದೆ ಆದ ಚಿಂತನೆಗಳಲ್ಲಿ ಹೋರಾಟವನ್ನು ನಡೆಸುತ್ತಿರುವುದರಿಂದ ದೇಶದಲ್ಲಿ ದಲಿತ ಸಂಘಟನೆಗಳ ಹೋರಾಟದ ಶಕ್ತಿ ಕುಂದುತ್ತಿದೆ.ಸಂಘಟನೆಗಳು ಎಷ್ಟಿದ್ದರು ನಮ್ಮ ಸಮಸ್ಯೆಗಳಿಗೆ ಒಕ್ಕೋರಲ ಧ್ವನಿ ಎತ್ತಿದಾಗ ದಲಿತರ ಸಮಸ್ಯೆಗಳು ನಿವಾರಣೆಯಾಗಲು ಸಾಧ್ಯವಿದೆ.ಇದನ್ನೆ ಬಾಬಾ ಸಾಹೇಬರು ಹೇಳಿದ್ದು,ಆದರೆ ನಾವು ಅವರ ಮಾತನ್ನು ಕಡೆಗಣಿಸುತ್ತಿರುವ ರೀತಿಯಲ್ಲಿ ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ ಎಂದರು.

ನಂತರ ತಾಲೂಕಿನ ಸರ್ವ ಸದಸ್ಯರ ಸಭೆಯನ್ನು ನಡೆಸಿ ತಾಲೂಕಿನಲ್ಲಿಯ ಸಂಘಟನೆಯ ಬೆಳವಣಿಗೆ ಮತ್ತು ಹೋರಾಟಗಳ ರೂಪಿಸುವ ಕುರಿತು ಚಿಂತನ ಮಂಥನ ನಡೆಸಲಾಯಿತು.

ಸಭೆಯಲ್ಲಿ ತಾಲೂಕು ಸಂಚಾಲಕ ಶರಣಪ್ಪ ತಳವಾರಗೇರಿ,ಅಶೋಕ ನಾಯ್ಕಲ್,ಪರಶುರಾಮ ಪೂಜಾರಿ,ಬಸವರಾಜ ಅಣಬಿ,ರಾಜು ದೊಡ್ಮನಿ,ಮಲ್ಲು ಕಸಿಪಿ,ಪ್ರಕಾಶ ಮುಷ್ಠಳ್ಳಿ,ಬಸವರಾಜ ಮಂಗಳೂರು,ಗೊಲ್ಲಾಳಪ್ಪ ಕಟ್ಟಿಮನಿ,ಹಣಮಂತ ಕಿರದಹಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here