ಕಲಬುರಗಿ: ನಗರದ ಕನ್ನಡ ಭವನದಲ್ಲಿ ಹೈದರಾಬಾದ ಕರ್ನಾಟಕ ಯುವಕಲಾವಿದರ ಹಾಗೂ ಸಾಂಸ್ಕೃತಿಕ ನೃತ್ಯ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ ಇವರ ಸಹಯೋಗದಲ್ಲಿ ೭೫ ನೆಯ ಅಮೃತ ವರ್ಷಾಚರಣೆ ಪ್ರಯುಕ್ತ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನಿಯವಾಗಿ ಸಾಧನೆ ಗೈದ್ ಸಾಧಕರಾದ ಪ್ರಭಾಕರ ಜೋಶಿ, ಮಂಜುನಾಥ ಜಮಾದರ, ಪ್ರಕಾಶ ಚಿದಾನಂದ, ಶೇಖ ಬಾಬಾ, ಅಮಜದ್ ಅಲೀ, ದತ್ತಪ್ಪ ಸಾಗನೂರ, ಶ್ರೀಕಾಂತ ಒಂಟಿ, ಸಿದ್ದರಾಮ ಹೊನ್ಕಲ್, ಪ್ರೇಮಾ ಹೂಗಾರ, ಗೋರಕನಾಥ ಶಾಕಪೂರ, ವಿಶ್ವರಾಜ ಪಾಟೀಲ, ನಿರ್ಮಲ ಚೌದರಿ, ಗೀತಾ ಎಸ್ ಹಿರೇಮಠ ಇವರುಗಳಿಗೆ ಪ್ರಶಸ್ತಿ ಪ್ರಧಾನ ನೀಡಿ ಗೌರವಿಸಲಾಯಿತು.
ಯಲಗೋಡ ಮೋರಟಗಿ ನೂರಂದೇಶ್ವರ ವಿರಕ್ತ ಮಠದ ಗುರುಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶಾಸಕ ಬಸವರಾಜ ಮತ್ತಿಮೂಡ, ಕಾರ್ಯಕ್ರಮ ಸಂಯೋಜಕ ಹಾಗೂ ಸಂಘದ ಅಧ್ಯಕ್ಷ ಗುರುರಾಜ ಬಂಡಿ, ಅನಂತರಾಜ ಮಿಸ್ತ್ರಿ, ಅದಿತಿ ಖಂಡೆಗಳ,q ರವಿ ಚವ್ಹಾಣ, ಶರಣು ಬೇಲೂರ, ದಿಗಂಬರ ತಾರಫೈಲ್, ಪ್ರಶಾಂತ, ಓಂಕಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.