ಆಳಂದ: ಪಟ್ಟಣದ ಪ್ರವಾಸಿ ಮಂದರಿದಲ್ಲಿ ತಾಲೂಕು ದಲಿತ ಸೇನೆ ಆಯೋಜಿಸಿದ್ದ ಕೇಂದ್ರದ ಮಾಜಿ ಸಚಿವ ದಲಿತ ಸೇನೆಯ ಹಾಗೂ ಲೋಕಜನಶಕ್ತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ರಾಮವಿಲಾಸ ಪಾಸ್ವಾನ ಅವರ ಪ್ರಥಮ ಪುಣ್ಯ ಸ್ಮರಣೆಯನ್ನು ಅವರ ಭಾವಚಿತ್ರಕ್ಕೆ ಕಾರ್ಯಕರ್ತರು ಪುಷ್ಪನಮನ ಸಲ್ಲಿಸುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಸೇನೆಯ ಕಾರ್ಯಾಧ್ಯಕ್ಷ ಹನುಮಂತ ಗಾಯಕವಾಡ ಅವರು ಮಾತನಾಡಿ, ರಾಮವಿಲಾಸ ಪಾಸ್ವಾನ ಅವರು ಜೀವನದುದ್ದಕ್ಕೂ ದಲಿತ ಶೋಷಿತ ಪರ ಧ್ವನಿಯಾಗಿ ಸಾಮಾಜಿಕ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ಕೇಂದ್ರ ಸಚಿವರಿದ್ದು ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ದಲಿತ ಸೇನೆ ಕಟ್ಟುವ ಮೂಲಕ ದೇಶದಾದ್ಯಂತ ಸಾವಿರಾರು ಕಾರ್ಯಕರ್ತರಿಗೆ ಧ್ವನಿಯಾಗಿದ್ದ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಆದರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಕಾರ್ಯಕರ್ತರು ಮುನ್ನೆಡೆಯಬೇಕು ಎಂದು ಅವರು ಹೇಳಿದರು.
ತಾಲೂಕು ಅಧ್ಯಕ್ಷ ಧರ್ಮಾ ಬಂಗರಗಿ, ಪ್ರಧಾನ ಕಾರ್ಯದರ್ಶಿ ಮಹೇಶ ಕೋಚಿ ಮಾತನಾಡಿದರು. ಉಪಾಧ್ಯಕ್ಷ ಲಕ್ಷ್ಮಣ ನಿಂಬಾಳ, ಮಲ್ಲಿನಾಥ ಚಿಂಚೋಳಿ, ದಿಲೀಪ ಮಂಟಗಿ, ಜೈಭೀಮ ಕಂಟೇಕೂರೆ, ನಿಲಪ್ಪ ಬಬಲೇಶ್ವರ, ಯುವ ಅಧ್ಯಕ್ಷ ಚಂದ್ರಶ್ಯಾ ಗಾಯಕವಾಡ, ಶರಣು ಬೀಳಗಿ, ದತ್ತಾ ಕಟ್ಟಿಮನಿ, ಶಿವಲಿಂಗಪ್ಪ ಚನಗುಂಡ, ವಸಂತ ಕುಮ್ಸಿ, ಸತೀಶ ಮೇಲಿನಕೇರಿ, ನಾಗಪ್ಪ ನಿಂಬಾಳ ಸೇರಿ ಇನ್ನಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.