ಚಿಂಚೋಳಿ: ತಾಲೂಕಿನ ಗಡಿಕೇಶ್ವಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಮಿಯಿಂದ ಭಾರಿ ಶಬ್ದ ಬಂದು ನಂತರ ಭೂಮಿ ಕಂಪಿಸುತ್ತಿದರೂ ಗ್ರಾಮದ ಜನರ ಆತಂಕ ದೂರ ಮಾಡಲು ಜಿಲ್ಲಾಡಳಿತ ಯತ್ನಿಸುತಿಲ್ಲಾ ಎಂದು ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ಆರೋಪಿಸಿದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೋರಡಿಸಿರುವ ಅವರು ಭೂಮಿಯಿಂದ ಶಬ್ದ ಬರುವುದರಿಂದ ಗ್ರಾಮಗಳ ಮುಗ್ದಜನ ಮನೆಯಿಂದ ಹೆದರಿ ಹೋರಗಡೆ ಬರುತಿದ್ದಾರೆ ಮಳೆಯ ಕಾಟದಿಂದ ಜನರು ಸಂಕಷ್ಟದಲ್ಲಿದ್ದಾರೆ ಆದಕಾರಣ ಗ್ರಾಮದಲ್ಲಿ ಸರ್ಕಾರದಿಂದ ಸಿಸ್ಮೊಗ್ರಾಫರ್(ಭೂ ಕಂಪನ ಮಾಪನ ಯಂತ್ರ ) ಅಳವಡಿಸಬೇಕು, ಜನರಿಗೆ ಶೆಡ್ ವ್ಯವಸ್ಥೆ ಮಾಡಬೇಕು, ಜಿಲ್ಲಾಧಿಕಾರಿಗಳು ಗ್ರಾಮಕ್ಕೆಕೂಡಲೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆನಡೆಸಿ ಗ್ರಾಮಸ್ಥರ ಬೇಡಿಕೆ ಇಡೆರಿಸಬೇಕು ಎಂದು ಆಗ್ರಹಿಸಿದಾರೆ.
ಗಡಿಕೇಶ್ವಾರ ಗ್ರಾಮಸ್ಥರು ಹೋಡೆಬಿರನಳ್ಳಿ ಕ್ರಾಸ್ ಬಳಿ ಅ.11 ರಂದು(ಇಂದು) ನಡೆಸುತಿರುವ ಹೋರಾಟದಲ್ಲಿ ನಾನು ಕೂಡ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲನೀಡುತ್ತೇನೆ. -ಬಾಲರಾಜ್ ಗುತ್ತೇದಾರಜೆ, ಡಿಎಸ್ ಮುಖಂಡರು ಸೇಡಂ.