ಡೋಣಗಾಂವ ಗ್ರಾಮ ಪಂಚಾಯಿತಿಯಲ್ಲಿ ನೇಮಕಾತಿ ವಿಳಂಬ, ತಾ.ಪಂ ಎದುರು ಕರವೇ ಧರಣಿ.

0
118

ಚಿತ್ತಾಪುರ: ಡೋಣಗಾಂವ ಗ್ರಾಮ ಪಂಚಾಯಿತಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಅಪರೇಟರ ಹುದ್ದೆಯ ಅನುಮೋದನೆ ಮಾಡುವಲ್ಲಿ ವಿನಾಕಾರಣ ಕಾಲಹರಣ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ)ಯ ಕಾರ್ಯಕರ್ತರು ಒಂದು ದಿನದ ಸಾಂಕೇತಿಕ ಧರಣಿ ಮಾಡಿದರು.

ಪಟ್ಟಣದ ತಾಲೂಕ ಪಂಚಾಯತ್ ಕಚೇರಿಯ ಎದುರುಗಡೆ ಕರವೇ ಕಾರ್ಯಕರ್ತರು ಬುಧವಾರ ಒಂದು ದಿನದ ಸಾಂಕೇತಿಕ ಧರಣಿ ಮುಖಾಂತರ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನಿಲಗಂಗಾ ಬಬಲಾದಿ ಅವರಿಗೆ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಜಿಲ್ಲಾ ಪಂಚಾಯತ್ ಕಲಬುರ್ಗಿ ಇವರ ಕಡೆಯಿಂದ ಶೇಖ ರಹಿಮಾನಸಾಬ ತಂದೆ ಇಮಾಮಸಾಬ ಇವರು ಆಯ್ಕೆಯನ್ನು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿ ಅನುಮೋದನೆಗಾಗಿ ಕಳುಹಿಸಿಕೊಡುವಂತೆ ಗ್ರಾಮ ಪಂಚಾಯಿತಿಗೆ ಜಿಲ್ಲಾ ಪಂಚಾಯತನಿಂದ ಪತ್ರ ಬರೆದಿರುತ್ತಾರೆ. ಆದರೆ ಸದರಿ ಪತ್ರ ಬರೆದು 6 ತಿಂಗಳಾದರೂ ಸಹಿತ ಇನ್ನುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಡೋಣಗಾಂವ ಗ್ರಾ.ಪಂ. ಪಿ.ಡಿ.ಓ ಇವರಿಗೆ ಮನವಿ ಸಲ್ಲಿಸಿದರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರವೇ ಭೀಮನಹಳ್ಳಿ ವಲಯದ ಕಾರ್ಯಕರ್ತರು ಧರಣಿ ಮಾಡಿದರು.

ಕೂಡಲೇ ವಿಳಂಬ ಮಾಡುವುದನ್ನು ಬಿಟ್ಟು ಡೋಣಗಾಂವ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿ
ಅನುಮೋದನೆಗಾಗಿ ಜಿಲ್ಲಾ ಪಂಚಾಯತ್ ಕಾರ್ಯಾಲಕ್ಕೆ ಪತ್ರವನ್ನು ಕಳುಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಭೀಮನಹಳ್ಳಿ ಕರವೇ ವಲಯ ಅಧ್ಯಕ್ಷ ರಜಾಕ್ ಜಮಾದಾರ ಮಾತನಾಡಿ ಈಗಾಗಲೇ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಯ್ಕೆ ಕುರಿತು ಠರಾವು ಪಾಸು ಮಾಡಿ ಅನುಮೋದನೆಗಾಗಿ ಜಿಲ್ಲಾ ಪಂಚಾಯತಗೆ ಕಳುಹಿಸಿಕೊಡುವಂತೆ ಪತ್ರ ಬಂದರು.ಠರಾವು ಪಾಸು ಮಾಡಿ ಕಳುಹಿಸುವಲ್ಲಿ ವಿಳಂಬಮಾಡಿದರೆ ಹೀಗೆ ವಿಳಂಬವಾದರೆ ಕರವೇ ಮುಂದಿನ ದಿನಗಳಲ್ಲಿ ನಿರಂತರ ಧರಣಿ ಸತ್ಯಾಗ್ರಹ ಹಾಗೂ ಹಂತ ಹಂತವಾಗಿ ಉಗ್ರವಾದ ಹೋರಾಟ ಮಾಡಬೆಕ್ಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕರವೇ ತಾಲೂಕ ಉಪಾಧ್ಯಕ್ಷ ಭಾಸ್ಕರ್ ಕರಿಚಕ್ರ,ಸಾಬಣ್ಣಾ ಭರಾಟೇ,ಮೋನಪ್ಪಾ ಹಾದಿಮನಿ, ಹಸನ್ ಪಟೇಲ್,ರಾಹುಲ್ ಶಾಸ್ತ್ರಿ,ಅರ್ಜುನ್ ಕಟ್ಟಿಮನಿ,ಹಣಮಂತ್ ಕಟ್ಟಿಮನಿ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here