ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಅವಸರವಾಗಿ ಯಾವುದೇ ಪೂರ್ವ ತಯಾರಿ ಇಲ್ಲದೇ ಪಾಲಿಕೆಯಲ್ಲಿ ಭಾಗವಹಿಸಿದ್ದೇವೆ. ಚುನಾವಣೆಯಲ್ಲಿ ದೊಡ್ಡ ಪ್ರಮಾಣದ ಅಭಿಯಾನ ಕೈಗೊಳ್ಳದೇ ನಮ್ಮ ಪಕ್ಷಕ್ಕೆ ಕಲಬುರಗಿ ಉತ್ತರ ಮತಕೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಮತಗಳು ಸಿಕ್ಕಿದ್ದು, ಇದ್ದು ನಮ್ಮ ಪಕ್ಷದ ದೊಡ್ಡ ಯಶಸ್ಸಾಗಿದೆ ಎಂದು ಎಐಎಂಐಎಂ ಸಂಸ್ಥಾಪಕ ಸಂಸದ ಅಸಾದೊದ್ದೀನ್ ಓವೈಸಿ ಅವರು ಹರ್ಷ ವ್ಯಕ್ತಪಡಿಸಿದರು.
ಅವರು ಇಂದು ನಗರದ ಮೆಟ್ರೋ ಫಂಕ್ಷನ್ ಹಾಲ್ ನಲ್ಲಿ ಪಕ್ಷದ ಸಭೆಯಲ್ಲಿ ಭಾಗವಿಸಿ ಮಾತನಾಡಿದ ಅವರು, ಸ್ಥಳೀಯ ರಾಜಕೀಯ ಪಕ್ಷಗಳು ಮತ್ತು ಹಿರಿಯ ದೊಡ್ಡ ಬೇರುಗಳ ನಡುವೆ ಪಕ್ಷಕ್ಕೆ ಅಭುತ್ವಪೂರ್ವ ಮತಗಳು ನೀಡಿ ಇಲ್ಲಿನ ಜನತೆ ಬೆಂಬಲ ಸೂಚಿಸಿದ್ದಾರೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಇಲ್ಲಿಂದ ನಮ್ಮ ಪಕ್ಷದ ಅಭ್ಯರ್ಥಿ ಜನರ ಸಮಸ್ಯೆಗಳಿಗೆ ವಿಧಾನಸಭೆಯಲ್ಲಿ ಧ್ವನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಓವೈಸಿ ನಾನು ಕಾಂಗ್ರೆಸ್ ಪಕ್ಷವನ್ನೇ ಮಾತ್ರ ಟಾರ್ಗೆಟ್ ಮಾಡುವುದಾಗಿ ಆರೋಪ ಮಾಡಲಾಗುತ್ತಿದ್ದು, ಲೋಕಸಭೆಯಲ್ಲಿ ನಾನು ಮತ್ತು ನಮ್ಮ ಪಕ್ಷದ ಸಂಸದ ಇಮ್ತಿಯಾಜ್ ಜಲೀಲ್ ಬಿಜೆಪಿ ವಿರುದ್ಧ ಅತಿಹೆಚ್ಚು ಟಿಕೆಮಾಡುವವರಾಗಿದ್ದೇವೆ ಎಂದರು.
ಸಾವರ್ಕರ್ ಗೆ ಮಹಾತ್ಮ ಗಾಂಧಿ ಕ್ಷಮಾಪಣೆ ಕೇಳಲು ಹೇಳಿದರು ಎಂಬ ಕೇಂದ್ರ ರಕ್ಷಣಾ ಸಚಿವರ ರಾಜನಾಥ್ ಸಿಂಗ್ ಅವರ ಹೇಳಿಕೆ ಕುರಿತು ಮಾತನಾಡಿದ ಅವರು ಯಾರ ಒತ್ತಾಯಕ್ಕೆ ಮಣೆದು ಸುಳ್ಳು ಹೇಳಿದ್ದಾರೆ. ಸೌತ್ ಆಫ್ರಿಕಾದಿಂದ ಗಾಂಧಿಜೀ ಭಾರತಕ್ಕೆ ಬರುವ ಮುಂಚೆಯೇ ಬ್ರಿಟಿಷರಿಗೆ ಎರಡು ಬಾರಿ ಸಾವರ್ಕರ್ ಕ್ಷಮಾಪಣೆ ಪತ್ರ ಬರೆದಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಎಂಐಎಂ ಪಕ್ಷದ ವಿಧಾನಸಭೆ ಭಾವಿ ಅಭ್ಯರ್ಥಿ ಇಲಿಯಾಜ್ ಸೇಠ್ ಬಾಗಬಾನ್, ಪಕ್ಷದ ಜಿಲ್ಲಾ ಅಧ್ಯಕ್ಷರಾದ ಎಕ್ಬಾಲ್ ಅಹ್ಮದ್ ಸಿನ್ನಿಫರೋಶ್ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಾಕರ್ತರು ಇದ್ದರು.