ಚಿಂಚೋಳಿ: ಕಾಳಗಿ, ಸೇಡಂ ಹಾಗೂ ಚಿಂಚೋಳಿ ಪ್ರದೇದ ಕೆಲವು ಗ್ರಾಮಗಳಲ್ಲಿ ಸತತ ಲಘು ಭೂಕಂಪ ಸಂಭವಿಸುತ್ತಿರುವ ಹಿನ್ನೆಯಲ್ಲಿ ಇಂದು ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಸಂಜೀವನ್ ಆರ್ ಯಾಕಾಪೂರ ಅವರು ಪಸ್ತಪೂರ್ ಮತ್ತು ತೇಗಲತಿಪ್ಪಿ ಗ್ರಾಮಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಭೂಕಂಪದಿಂದ ಸಂಕಷ್ಟಕ್ಕೆ ಸಿಲುಕಿದ ಜನರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ನಂತರ ಭೂಕಂಪದಿಂದ ಮನೆ ಗೂಡೆಗಳು ಬಿದ್ದಿರುವುದನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಕಾರ್ಯಾಕರ್ತರು ಇದ್ದರು.