ರಾಜಕೀಯ ಬದಿಗಿಟ್ಟಿ ಧರ್ಮಕ್ಕಾಗಿ ಸೇವೆ ಸಲ್ಲಿಸಬೇಕು:ದಿಗ್ಗಾಂವಶ್ರೀಗಳು

0
206

ಚಿತ್ತಾಪುರ: ರಾಜಕೀಯವಾಗಿ ವ್ಯಕ್ತಿ ಎಷ್ಟೇ ಎತ್ತರಕ್ಕೂ ಬೆಳೆದರು ರಾಜಕೀಯ ಬದಿಗಿಟ್ಟು ಧರ್ಮಕ್ಕಾಗಿ, ಮಠಗಳ ಜೀರ್ಣೋದ್ಧಾರಕ್ಕಾಗಿ ಸೇವೆ ಸಲ್ಲಿಸಬೇಕು ಎಂದು ದಿಗ್ಗಾಂವ ಪಂಚಗ್ರಹ ಹಿರೇಮಠದ ಪೀಠಾಧಿಪತಿ ಷ. ಬ್ರ. ಸಿದ್ಧವೀರ ಶಿವಾಚಾರ್ಯರು ಹೇಳಿದ್ದಾರೆ.

ತಾಲೂಕಿನ ಡಂಡೋತಿ ಗ್ರಾಮದಲ್ಲಿ ಶ್ರೀ ರೇವಾಸಿದ್ದೇಶ್ವರ ಮಠದ ಜೀರ್ಣೋದ್ಧಾರ ಹಾಗೂ ಮಠದ ಶಾಂತಿಯ ನಿಮಿತ್ತ 5 ದಿನಗಳ ಜ್ಞಾನಮೃತ ಪ್ರವಚ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಜ್ಞಾನ ಹಂಚಿದಷ್ಟು ಹೆಚ್ಚಾಗುತ್ತ 3 ವರ್ಷದ ಜ್ಞಾನ 100 ವರ್ಷಗಳ ಕಾಲ ಎಂಬಂತೆ ಮಕ್ಕಳಿಗೆ ಚಿಕ್ಕವರಿದ್ದಾಗ ಒಳ್ಳೆಯ ಸಂಸ್ಕಾರ ಕೊಡಬೇಕು,ಒಳ್ಳೆಯ ಸಂಸ್ಕಾರ ಪಡೆದ ವ್ಯಕ್ತಿ ಸಮಾಜದಲ್ಲಿ ಒಬ್ಬ ಉತಮ ಪ್ರಜೆಯಾಗಿ ಹೊರಹಿಮ್ಮುತ್ತಾನೆ.

Contact Your\'s Advertisement; 9902492681

ಮನುಷ್ಯನು ಬರುವಾಗ ಖಾಲಿ ಕೈಯಿಂದ ಭೂಮಿಗೆ ಬರುವನು ಹೋಗುವಾಗ ಕೂಡ ಖಾಲಿ ಕೈಯಲ್ಲಿ ಹೋಗುವನು ಈ ಬರುವ ಹೋಗುವ ಮಧ್ಯದಲ್ಲಿ ಹಣಗಳಿಸುವ ಹುಚ್ಚು ಚಿಂತೆಯಲ್ಲಿ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಂಡು ಶಾಂತಿಗಾಗಿ ಧಾರ್ಮಿಕತೆಗೆ ಮೊರೆ ಹೋಗುತ್ತಾರೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಇರುವ ಸಣ್ಣ ಪುಟ್ಟ ಪುರಾತನ ದೇವಸ್ಥಾನಗಳು ಹಾಗೂ ಮಠಗಳ ಜೀರ್ಣೋದ್ಧಾರ ಸಲುವಾಗಿ ಎಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕು ಸ್ಥಳೀಯ ರಾಜಕೀಯ ಮುಖಂಡರು ರಾಜಕೀಯ ಬದಿಗಿಟ್ಟು ಧರ್ಮದ ಸೇವೆಯನ್ನು ಮಾಡಲು ಮುಂದಾಗಬೇಕು ಎಂದು ಹೇಳಿದರು

ಈ ಸಂದರ್ಭದಲ್ಲಿ ಷ. ಬ್ರ.ಸಿದ್ದಲಿಂಗ ಶಿವಾಚಾರ್ಯರು ದಂಡೋತಿ, ರಾಜ್ಯ ಮಹಿಳಾ ನಿಗಮದ ಅಧ್ಯಕ್ಷೆ ಶಶಿಕಲಾ ತೆಂಗಳಿ,ಚನ್ನಮಲ್ಲಪ್ಪಾ ಯರಗಲ್,ಸುಭಾಷಚಂದ್ರ ತಿಮ್ಮನಾಯಕ್,ಜಯಶ್ರೀ ಗುಳ್ಳೆದ,ಜಗದೀಶ್ ಶಾಸ್ತ್ರೀ ಸನ್ನತಿ,ಕಲ್ಯಾಣರಾವ ಭಂಟನಲ್ಲಿ, ಹಣಮಂತ ನರಬೋಳಿ,ಫಕೀರಯ್ಯ ಸ್ವಾಮಿ ತೆಂಗಳಿ,ರಾಜು ಉಂಡಿ,ರಾಜು ಗುಳ್ಳೆದ,ಮಲ್ಲಿಕಾರ್ಜುನ ಸ್ಥಾವರಮಠ,ಬಸ್ಸು ಬಿಜಾಪುರ,ಶಿವನಾಗಪ್ಪಾ ಮುತ್ತಲಗಡ್ಡಿ,ಲಕ್ಷಿಕಾಂತ ಮಳಖೇಡ ಸೇರಿದಂತೆ ಗ್ರಾಮಸ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here