ವಾಲ್ಮೀಕಿ ರಾಮಾಯಣ ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆ

0
9

ಶಹಾಬಾದ: ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆಯಾಗಿದೆ ಎಂದು ವಾಡಿ-ಶಹಾಬಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಹೇಳಿದರು.

ಅವರು ಬುಧವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಲ್ಮೀಕಿ ರಾಮಾಯಣ ದೇಶ-ಭಾ?ಗೆ ಸೀಮಿತಗೊಳ್ಳದೆ ಜಾಗತಿಕವಾಗಿ ಆರಾಧಿಸಲ್ಪಟ್ಟಿದೆ.ಜನಸಮುದಾಯದ ಎಲ್ಲ ಸಮಸ್ಯೆಗಳು, ಸಂಕಟಗಳು, ಸವಾಲುಗಳಿಗೆ ವಾಲ್ಮೀಕಿ ರಾಮಾಯಣದಲ್ಲಿ ಉತ್ತರ ಸಿಗುತ್ತದೆ. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ನಾವು ಕಲಿಯಬಹುದಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಮಂಡಲ ಉಪಾಧ್ಯಕ್ಷರಾದ ದುರ್ಗಪ್ಪ ಪವರ,ಮಹಾದೇವ ಗೊಬ್ಬುರಕರ ರವರು ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಚಂದ್ರಕಾಂತ ಗೊಬ್ಬುರಕರ,ಚಂದ್ರಕಾಂತ ಸುಭೆದಾರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶಶಿಕಲಾ ಸಜ್ಜನ, ಬಸವರಾಜ ತರನಳ್ಳಿ, ಪ್ರಧಾನ ಕಾರ್ಯದರ್ಶಿ ಸಿದ್ರಾಮ ಕುಸಾಳೆ,ಖಜಾಂಚಿ ಅಣ್ಣೆಪ್ಪ ದಸ್ತಾಪೂರ, ಪ್ರಮುಖರಾದ ಭೀಮರಾವ ಸಾಳೂಂಕೆ,ಚಂದ್ರಕಾಂತ ಗೋಬ್ಬುರಕರ,ಸೂರ್ಯಕಾಂತ ವಾರದ,ಸುಭಾ? ಜಾಪೂರ,ಅನಿಲ ಬೋರಗಾಂವಕರ,ನಿಂಗಣ್ಣ ಹುಳಗೋಳಕರ,ಮೋಹನ ಘಂಟ್ಲಿ ,ವಿರೇಶ ಬಂದಳ್ಳಿ,ತಿಮ್ಮಣ್ಣ ಕುರ್ಡೆಕರ,ಶ್ರೀನಿವಾಸ ದೇವಕರ,ಡಿಸಿ ಹೋಸಮನಿ, ಪ್ರಾಧಿಕಾರ ಅಧ್ಯಕ್ಷರಾದ ಕನಕಪ್ಪ ದಂಡಗುಲಕರ,ಸದಸ್ಯರಾದ ಬಸವರಾಜ ಬಿರಾದಾರ, ಲತಾ ಸಂಜಿವ,ನಗರಸಭೆ ಸದಸ್ಯರಾದ ಜಗದೇವ ಸುಭೆದಾರ,ಶಿವಾಜಿ ರೆಡ್ಡಿ,ದತ್ತಾ ಫಂಡ,ಆಶ್ರಯ ಸಮಿತಿ ಸದಸ್ಯ ಚಂದ್ರಕಾಂತ ಸುಭೆದಾರ,ದತ್ತು ಗಂಟಿ, ಯುವ ಮೋರ್ಚ ಅಧ್ಯಕ್ಷ ದಿನೇಶ ಗೌಳಿ,ಉಮೇಶ ನಿಂಬಾಳಕರ,ಅಮಿತ ಸಿಂಗ,ಮಹಿಳಾ ಮೋರ್ಚ ಅಧ್ಯಕ್ಷರಾದ ಜಯಶ್ರೀ ಸೂಡಿ,ಆರತಿ ಕೂಡಿ,ಪಾರ್ವತಿ ಮಠಪತಿ,ಬಸಮ್ಮ,ಪಾರ್ವತಿ ಮೈತ್ರಿ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here