ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಬಿಟ್ಟು ಕನ್ನಡವನ್ನು ಕಟ್ಟಿ: ದತ್ತಪ್ಪ ಸಾಗನೂರ

0
40

ಶಹಾಬಾದ:ಆಧುನಿಕತೆಯ ಅಬ್ಬರ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಬಿಡುವುದರ ಮೂಲಕ ಕನ್ನಡ ಕಟ್ಟುವ ಕೆಲಸವಾಗಬೇಕಿದೆ ಎಂದು ಕಲಬುರಗಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಹೇಳಿದರು.

ಅವರು ಮಂಗಳವಾರ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಕಲಬುರಗಿ ಹಾಗೂ ಜಿ.ಬಿ.ಸಂಗೀತಾ ಕಲಾ ಸಂಸ್ಥೆ ಶಹಾಬಾದ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಜಾನಪದ ಕಲೆ,ಸಂಗೀತ ನಮ್ಮ ಸಂಸ್ಕೃತಿ ಸ್ವಾಸ್ಥ್ಯ ಸಮಾಜದ ಉಸಿರು.ಆದರೆ ಪಾಶ್ಚಿಮಾತ್ಯ ಪ್ರಭಾವಕ್ಕೊಳಗಾಗಿ ತೆರೆಮರೆಗೆ ಸರಿಯುತ್ತಿರುವ ಕಲೆಗಳ ಸಂಕ್ಷಣೆ ಮಾಡಬೇಕಿದೆ. ಅದರಂತೆ ಮುಂಬರುವ ದಿನಗಳಲ್ಲಿ ಸಾಂಸ್ಕೃತಿ ನೆಲೆಗಟ್ಟನ್ನು ಒದಗಿಸುವ ಮೂಲಕ ಕನ್ನಡ ಹಾಗೂ ಕನ್ನಡದ ಸಂಸ್ಕೃತಿಯನ್ನು ಕಟ್ಟಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕ ದೇವೆಂದ್ರಪ್ಪ ರಾಮನ್ ಮಾತನಾಡಿ, ಕನ್ನಡವನ್ನು ಬಳಸುವ ಮೂಲಕ ಹಾಗೂ ಕನ್ನಡ ಆಡಳಿತ ಭಾಷೆಯನ್ನಾಗಿ ಮಾಡಬೇಕು.ಅಲ್ಲದೇ ಕನ್ನಡ ಅನ್ನ ನೀಡುವ ಭಾಷೆಯಾದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ ಎಂದರು.

ನಗರಸಭೆಯ ಮಾಜಿ ಸದಸ್ಯ ಶ್ರೀಶೈಲಪ್ಪ ಬೆಳಮಗಿ ಮಾತನಾಡಿ, ಇಂದು ಕನ್ನಡದ ನಮ್ಮ ನೆಲ, ಜಲ ಹಾಗೂ ಸಾಂಸ್ಕೃತಿಕ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಕಲೆಗಳು, ಕಲಾವಿದರು ಉಳಿಯಬೇಕಾದರೆ ಕಲೆಯನ್ನು ಆಸ್ವಾಧಿಸಿ, ಬೆನ್ನು ತಟ್ಟುವ ಕೆಲಸ ಜನಸಮುದಾಯದವರಿಂದ ಆಗಬೇಕಿದೆ. ನಗರದ ವಿವಿಧ ಶಾಲೆಗಳಲ್ಲಿರುವ ಪ್ರತಿಭಾವಂತ ಮಕ್ಕಳು, ಸಾಹಿತಿಗಳು, ಕಲಾವಿದರು, ಕವಿಗಳು ಸೇರಿಸಿಕೊಂಡು ಈ ಭಾಗದ ಕಲೆ, ನಮ್ಮ ಸಂಸ್ಕೃತಿಯ ಗತವೈಭವವನ್ನು ಎತ್ತಿ ತೋರಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಉದ್ಘಾಟಿಸಿದರು.

ಉದ್ಯಮೆದಾರ ಭೀಮರಾವ ಸುಗೂರ, ಗುರುರಾಜ ಪಾಟೀಲ, ಶಿವರಾಜ ಪಾರಾ, ಆಶ್ರಯ ಸಮಿತಿ ಸದಸ್ಯ ಶಿವುಗೌಡ ಪಾಟೀಲ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಚಂದನಕೇರಿ, ವೀರಭದ್ರೇಶ್ವರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಸವರಾಜ ತರನಳ್ಳಿ,ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ, ನಗರಸಭೆಯ ಸದಸ್ಯರಾದ ಮಲ್ಲಿಕಾರ್ಜುನ ವಾಲಿ, ಶ್ವೇತಾ ನಾಟೇಕಾರ, ಇನಾಯತಖಾನ ಜಮಾದಾರ,ಜಿ.ಬಿ.ಸಂಗೀತ ಶಾಲೆಯ ಕಾರ್ಯದರ್ಶಿ ಶಾಂತಪ್ಪ ಹಡಪದ, ಮೌನೇಶ ಸೋನಾರ, ವಿಶ್ವನಾಥ ಹಡಪದ, ಕಸಾಪ ಕಲಬುರಗಿ ಗ್ರಾಮೀಣ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ ವೇದಿಕೆಯ ಮೇಲಿದ್ದರು. ಅನೇಕ ಜನರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here