ಕಲಬುರಗಿ: ಸಪ್ನ ಕನ್ನಡ ನಾಡಿನ ಜನಪ್ರಿಯ ಪುಸ್ತಕ ಭಂಡಾರ. ಇದು ಪುಸ್ತಕಗಳಿಗಷ್ಟೇ ಸೀಮಿತವಾಗದೇ, ಶಿಕ್ಷಣಕ್ಕೆ ಸಂಬಂಧಪಟ್ಟ ಪೂರಕ ಸಾಮಗ್ರಿಗಳಿಗೂ ಹೆಸರುವಾಸಿ. ಪ್ರತಿ ಬಾರಿಯೂ ಈ ಪುಸ್ತಕ ಭಂಡಾರ ರಾಜ್ಯೋತ್ಸವದ ತಿಂಗಳಿನಲ್ಲಿ ಕನ್ನಡದ ಓದುಗರಿಗಾಗಿ ತನ್ನೆಲ್ಲಾ ಶಾಖೆಗಳಲ್ಲೂ ಕೆಲವು ಜನಪ್ರಿಯ ಯೋಜನೆಗಳನ್ನು ನೀಡುತ್ತಾ ಬಂದಿದೆ. ಈ ಬಾರಿ ಸಹ ಗ್ರಾಹಕರಿಗೆ ಮತ್ತು ಓದುಗರಿಗೆ ಹಲವು ಆಕರ್ಶಕ ಯೋಜನೆಗಳು ಮತ್ತು ಕಾರ್ಯಕ್ರಮ ನೀಡಲು ಮುಂದಾಗಿದೆ.
ರಿಯಾಯಿತಿ– ನವೆಂಬರ್ ತಿಂಗಳಿನಲ್ಲಿ ಕನ್ನಡ ಪುಸ್ತಕಗಳಿಗೆ ನಮ್ಮ ಎಲ್ಲಾ ಶಾಖೆಗಳಲ್ಲೂ ವಿಶೇಷವಾಗಿ ಶೇ.10%ರಿಂದ 20%ರಷ್ಟು ರಿಯಾಯಿತಿಯನ್ನು ಕನ್ನಡ ಪುಸ್ತಕ ಪ್ರಿಯರಿಗೆ ಸಪ್ನ ನೀಡುತ್ತಿದೆ.
ಸಪ್ನ ಸದಸ್ಯರ ಕಾರ್ಡ್– ನವೆಂಬರ್ ತಿಂಗಳಿನಲ್ಲಿ ಕೊಳ್ಳುವ ಪ್ರತಿ ರೂ. 200 ಮೌಲ್ಯದ ನಿವ್ವಳ ಬೆಲೆಗೆ ಈ ಕಾರ್ಡನ್ನು ಗ್ರಾಹಕರಿಗೆ ಕೊಡಲಾಗುತ್ತದೆ. ಇದರಿಂದ ಒಂದು ವರ್ಷದ ಅವಧಿಗೆ ಪುಸ್ತಕ ಪ್ರೇಮಿಗಳು ಕನ್ನಡ ಪುಸ್ತಕಳ ಮೇಲೆ ಯಾವುದೇ ಶಾಖೆಯಲ್ಲಾಗಲೀ ಶೇ.10% ರಷ್ಟು ರಿಯಾಯಿತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.
ಓದುಗರ ಆಯ್ಕೆ ಸಮೃದ್ಧ ಬೆಳೆ– ಈ ವಿಶೇಷ ಪುಸ್ತಕ ಪ್ರದರ್ಶನ ವಿಭಾಗದಲ್ಲಿ ಕೆಲವು ಜನಪ್ರಿಯ ಕೃತಿಗಳಿಗೆ ಶೇ.15%ರಷ್ಟು ರಿಯಾಯಿತಿಯನ್ನು ನವೆಂಬರ್ ತಿಂಗಳಿನಾದ್ಯAತ ನಮ್ಮ ಎಲ್ಲಾ ಶಾಖೆಗಳಲ್ಲೂ ನೀಡಲಾಗುತ್ತದೆ.
ಸಪ್ನ ಪ್ರಕಟಣೆಗಳಿಗೆ ಶೇ. 20% ರಿಯಾಯಿತಿ– ನವೆಂಬರ್ ತಿಂಗಳಿನಾದ್ಯAತ ಸಪ್ನ ಪ್ರಕಟಿಸಿರುವ ತನ್ನ ಎಲ್ಲಾ ಕನ್ನಡ ಪ್ರಕಟಣೆಗಳಿಗೆ ಶೇ.20% ವಿಶೇಷ ರಿಯಾಯಿತಿಯನ್ನು ಎಲ್ಲಾ ಶಾಖೆಗಳಲ್ಲೂ ನೀಡಲಾಗುವುದು.
ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮಗಳು– ನವೆಂಬರ್ ತಿಂಗಳಿನ ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಸಪ್ನ ಬುಕ್ ಹೌಸ್ ಕಲಬುರಗಿ ಶಾಖೆಯಲ್ಲಿ ಗ್ರಾಹಕರಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.